ಹಳಿಯಾಳ :
ಸೊಳ್ಳೆ ಒಡಿಸಲು ದನದ ಕೊಟ್ಟಿಗೆಯಲ್ಲಿ ಹಾಕಲಾಗಿದ್ದ ಹೊಗೆಯು ಬೆಂಕಿಯಾಗಿ ಈಡಿ ಕೊಟ್ಟಿಗೆಯನ್ನು ಆವರಿಸಿದ್ದರಿಂದ ಲಕ್ಷಾಂತರ ರೂ ಬೆಲೆ ಬಾಳುವ ೨ ಎತ್ತುಗಳು ಹಾಗೂ ಒಂದು ಆಕಳ ಕರು ಸಜೀವವಾಗಿ ದಹನಗೊಂಡಿರುವ ವಿದ್ಯಮಾನ ಶುಕ್ರವಾರ ರಾತ್ರಿ ಹಳಿಯಾಳದ ಯಲ್ಲಾಪೂರ ನಾಕಾ ಬಳಿಯ ಹೊಲದಲ್ಲಿ ಸಂಭವಿಸಿದೆ.
ಉಡಚಪ್ಪ ಪವಾರ ಎನ್ನುವ ರೈತನಿಗೆ ಸೇರಿದ ಎತ್ತುಗಳಾಗಿದ್ದು ರೈತ ಕಂಗಾಲಾಗಿದ್ದಾನೆ.
ಸ್ಥಳಕ್ಕೆ ಹಳಿಯಾಳ ಪೋಲಿಸರು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.
ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದರೇ ಅದರಲ್ಲಿದ್ದ ಲಕ್ಷಾಂತರ ರೂ ಬೆಲೆ ಬಾಳುವ ಸಲಕರಣೆಗಳು ಸಹಿತ ಬೆಂಕಿಗಾಹುತಿಯಾಗಿವೆ..
ಬೆಂಕಿಯ ಕೆನ್ನಾಲಿಗೆ ಅದೃಷ್ಟವಶಾತ್
ಪಕ್ಕದ ಕಬ್ಬಿನ ಗದ್ದೆಗೆ ವಿಸ್ತರಿಸದೆ ಇರುವುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.


Leave a Comment