ಹಳಿಯಾಳ:- ಹಲವು ಸಾಮಾಜಿಕ ಚಟುವಟಿಕೆ ನಡೆಸುತ್ತೇವೆಂದು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಿರುವ ಪಟ್ಟಣದ ಕೆಲವು ರಿಕ್ರಿಯೇಷನ್ ಕ್ಲಬ್ಗಳಲ್ಲಿ ದೀಪಾವಳಿ ಹಬ್ಬದ ನೆಪದಲ್ಲಿ ಜೂಜಾಟ ನಡೆಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಚಟುವಟಿಕೆ ಹಾಗೂ ಹಲವು ಕ್ರೀಡೆಗಳನ್ನು ನಡೆಸಲು ಪರವಾನಿಗೆ ಪಡೆದಿರುವ ಕ್ಲಬ್ಗಳಲ್ಲಿ ದೀಪಾವಳಿ ಹಬ್ಬದ ನೇಪದಲ್ಲಿ ತ್ರಿಕಾರ್ಡ(3 ಎಲೆ ಜೂಜಾಟ) ಹಾಗೂ ಅಂದರ ಬಾಹರ್ ಜೂಜಾಟ ನಡೆಸಿದ ಲಕ್ಷಾಂತರ ರೂ. ಫಂಡ್ ಸಂಗ್ರಹಿಸಿ ಜನರ ಜೇಬಿಗೆ ಕತ್ತರಿ ಹಾಕಲಾಗಿದೆ ಎಂದು ಆರೋಪಗಳು ಕೇಳಿ ಬಂದಿದ್ದು ಈ ಕ್ಲಬ್ಗಳು ಈಗ ಪರವಾನಿಗೆ ರದ್ದಾಗುವ ಭಿತಿಯಲ್ಲಿದ್ದಾರೆಂದು ಹೇಳಲಾಗಿದೆ.
ಹೈಕೊರ್ಟ ನಿರ್ದೇಶನದ ಅನುಸಾರ ಈ ಕ್ಲಬ್ಗಳಲ್ಲಿ ಯಾವುದೇ ಕಾನೂನು ಬಾಹಿರ ಕೃತ್ಯ ನಡೆಯಬಾರದು ಎನ್ನುವ ಹಾಗೂ ಇಲ್ಲಿ ನಡೆಯುವ ಚಟುವಟಿಕೆಗಳು ಪಾರದರ್ಶಕ ಇರಬೇಕು ಎನ್ನುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾಗಳು ಇರಬೇಕು ಎನ್ನುವ ಆದೇಶವಿದೆ. ಆದರೇ ಇದೆಲ್ಲವು ಇದ್ದು ಪೋಲಿಸರ ನಿರ್ದೇಶನವನ್ನು ಮೀರಿ ಜೂಜಾಟ ನಡೆಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದ್ದು ನ್ಯಾಯಾಲಯದ ಹಾಗೂ ಪೋಲಿಸ್ ಇಲಾಖೆ ಆದೇಶವನ್ನು ಮೀರಿರುವ ಕಾರಣಕ್ಕೆ ಇವರ ಕ್ಲಬ್ ಲೈಸನ್ಸ್ಗಳು ರದ್ದಾಗಲಿವೆ ಎಂದು ಹೇಳಲಾಗುತ್ತಿದೆ.
ಇನ್ನೂ ದೀಪಾವಳಿ ನೇಪದಲ್ಲಿ ಜೂಜಾಟ ನಡೆಸಬಾರದೆಂದು ಎಸ್ಪಿ ಅವರು ಎಚ್ಚರಿಕೆ ನೀಡಿದ್ದರು ಸಹ ಪಟ್ಟಣದ ಹೊರವಲಯದಲ್ಲಿ ಭಾರಿ ಪ್ರಮಾಣದ ಜೂಜಾಟ ನಡೆದು ಪೋಲಿಸ್ ಇಲಾಖೆ ಎಚ್ಚರಿಕೆ ಮೀರಿಯೂ ಜೂಜುಕೊರರು ದಂಧೆ ನಡೆಸಿದ್ದು ಪಟ್ಟಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ ಅಲ್ಲದೇ ಜೂಜಾಟದ ವಿಡಿಯೋ ತುಣುಕುಗಳು ಎಲ್ಲೆಡೆ ವೈರಲ್ ಆಗಿದ್ದು ಇಲಾಖೆಯ ಮುಜುಗುರಕ್ಕೆ ಕಾರಣವಾಗಿದೆ.
Leave a Comment