ಹಳಿಯಾಳ :- ಶನಿವಾರ ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯಲ್ಲಿ ನವ ವಿವಾಹಿತೆ ಗರ್ಭೀಣ ಮಹಿಳೆಯೊರ್ವಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಆಕೆಯ ಗಂಡ ಸೇರಿದಂತೆ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಗದಗನ ದಾಸರ ಓಣ ಯ ಭಾಗ್ಯಾಶ್ರೀ(19) ಇದೆ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಹಳಿಯಾಳದ ಈರಣ್ಣಾ ಹಟ್ಟಿಹೊಳಿ ಎನ್ನುವವನ್ನು ವರಿಸಿದ್ದಳು ಅಲ್ಲದೇ ಸದ್ಯ 3 ತಿಂಗಳ ಗರ್ಭೀಣ ಯು ಆಗಿದ್ದಳು ಎನ್ನಲಾಗಿದೆ. ಆಕೆ ಶನಿವಾರ ಅತ್ತೆಯೊಂದಿಗೆ ವಾಸವಿದ್ದ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮೈಮೆಲೆ ಸಿಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಘಟನೆ ತಿಳಿದು ತಡರಾತ್ರಿ ಆಗಮಿಸಿದ ಭಾಗ್ಯಶ್ರೀಯ ಕುಟುಂಬದವರು ಗಂಡನ ಮನೆಯ ವಿರುದ್ದ ಕಿಡಿ ಕಾರಿದರು ಅಲ್ಲದೇ ತಾಯಿ ಶೆಟವ್ವ ಮಾನೆ ಮೃತಳ ಗಂಡ ಈರಣ್ಣಾ ಸೇರಿದಂತೆ ಅತ್ತೆ, ತಮ್ಮ ಹಾಗೂ ಸಹೋದರಿಯರ ವಿರುದ್ದ ಭಾಗ್ಯಶ್ರೀಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್ಐ ಆನಂದಮೂರ್ತಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೋಲಿಸರ ತನಿಖೆಯ ಬಳಿಕವೇ ಭಾಗ್ಯಶ್ರೀಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.
Leave a Comment