ಹೊನ್ನಾವರ: `. `ಶಾಲೆಯನ್ನು ದೇಗುಲವೆಂದು ತಿಳಿದು ಶಿಕ್ಷಣ ನೀಡಿದಾಗ ಆ ಶಾಲೆ ಮತ್ತು ವಿದ್ಯಾರ್ಥಿಗಳು ಉತ್ತುಂಗಕ್ಕೇರುವುದಕ್ಕೆ ಸಾಧ್ಯವಾಗುವುದು. ಸುಂದರ ವಾತಾವರಣದಲ್ಲಿರುವ ಹಡಿನಬಾಳ ಪ್ರೌಢಶಾಲೆಯು ಜಿಲ್ಲೆಗೆ ಮಾದರಿಯಾಗಿದೆ’ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ತಾಲೂಕಿನ ಹಡಿನಬಾಳದಲ್ಲಿ ಶನಿವಾರ ರಾತ್ರಿ ಸರ್ಕಾರಿ ಪ್ರೌಢಶಾಲೆಯ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಡಿನಬಾಳ ಪ್ರೌಢಶಾಲೆಯಲ್ಲಿರುವ ಶಿಕ್ಷಕರ ಪರಿಶ್ರಮದಿಂದ ಶಿಕ್ಷಣದ ಗುಣಮಟ್ಟ ಎತ್ತರಕ್ಕೇರಿದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಸ್ಮರಿಸಿ ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರೇಪಿಸಿರುವುದು ಶ್ಲಾಘನೀಯ ಕಾರ್ಯ’ ಎಂದರು.
ಮಾಜಿ. ಜಿ.ಪಂ.ಸದಸ್ಯ ಪಿ.ಟಿ.ನಾಯ್ಕ ಮಾತನಾಡಿ ಎಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆಯೋ ಆ ಶಾಲೆ ಉತ್ತಮವಾಗಿರುತ್ತದೆ. ಹಡಿನಬಾಳ ಪ್ರೌಢಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳಿದ್ದಾರೆ ಎಂದರು.
ತಾ.ಪಂ.ಸದಸ್ಯ ಆರ್.ಪಿ.ನಾಯ್ಕ 2019ನೇ ಇಸ್ವಿಯ ಕ್ಯಾಲೆಂಡರ್ ಅನಾವರಣ ಮಾಡಿದರು. ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ನಾಯ್ಕ ಶಾಲೆಯ ಲಾಂಛನ ಬಿಡುಗಡೆಗೊಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ `ಬೆಳ್ಳಿಚುಕ್ಕಿ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದರು.
ಕಳೆದ 24 ವರ್ಷಗಳಿಂದ ಶಾಲೆಯಲ್ಲಿ ಕಲಿತು ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಜನಪ್ರತಿನಿಧಿಗಳು, ಸ್ಥಳದಾನಿಗಳು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಶಿಕ್ಷಕವೃಂದವನ್ನು ಗೌರವಿಸಿ ಸನ್ಮಾನಿಸಲಾಯಿತು.
ಗ್ರಾ.ಪಂ.ಅಧ್ಯಕ್ಷರಾದ ಮಾಬ್ಲ ರಾಮ ನಾಯ್ಕ, ನಾಗವೇಣಿ ನಾಯ್ಕ, ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ರಮೇಶ ಪ್ರಭು, ಹಿರಿಯ ಮುಖಂಡ ಗಣಪಯ್ಯ ಗೌಡ, ಪೂರ್ವ ವಿದ್ಯಾರ್ಥಿ ಪ್ರತಿನಿಧಿ ಸಂತೋಷ ನಾಯ್ಕ ಇತರರು ಉಪಸ್ಥಿತರಿದ್ದರು.
ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಹರಿಯಪ್ಪ ನಾಯ್ಕ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಎಸ್.ಆರ್.ನಾಯಕ ಪ್ರಾಸ್ತಾವಿಕ ಮಾತನಾಡಿದರು. ಆರ್.ಟಿ.ನಾಯ್ಕ ಧನ್ಯವಾದ ಸಮರ್ಪಿಸಿದರು. ಸುಧೀಶ ನಾಯ್ಕ, ಆರ್.ಬಿ.ಶೆಟ್ಟಿ ನಿರ್ವಹಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
Leave a Comment