
ಕುಮುಟಾ ಹೊನ್ನಾವರ ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣೆ ಪಕ್ಷ ನಿರೀಕ್ಷೀತ ರೀತಿಯಲ್ಲಿ ಗೆಲವು ಸಾಧಿಸದೇ ಇರುವ ಕಾರಣದಿಂದ ಪಕ್ಷವನ್ನು ಬೂತ್ ಮಟ್ಟದಿಂದ ಒಗ್ಗೂಡಿಸಲು ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕುಮುಟಾ ಹೊನ್ನಾವರ ಕ್ಷೇತ್ರದಲ್ಲಿ ಹೊಸದಾದ ಯೂತ್ ಕಮಿಟಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಸವನ ಗೌಡ ಬಾದರ್ಲಿ ಆದೇಶ ಪ್ರತಿ ರವಾನಿಸಿದ್ದಾರೆ. ಈ ಆದೇಶದನ್ವಯ ಅಧ್ಯಕ್ಷರಾಗಿ ಹವ್ಯಕ ಸಮಾಜದ ಶ್ರೀಧರ ಗಣಪತಿ ಹೆಗಡೆ ತಕ್ಷಣದಿಂದ ಜಾರಿಯಾಗುವಂತೆ ನೇಮಕಾತಿ ಮಾಡಲಾಗಿದೆ. ಇವರು ಈ ಮೊದಲು ರವಿ ಶೆಟ್ಟಿ ಕವಲಕ್ಕಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಕಾರ್ಯದರ್ಶಿಯಾಗಿ ಅತ್ಯತ್ತಮವಾಗಿ ಸೇವೆ ಸಲ್ಲಿಸಿರುದಲ್ಲದೇ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು. ಈ ಆಧಾರದ ಮೇಲೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ .

ಅದೇ ರೀತಿ ಉಪಾಧ್ಯಕ್ಷರಾಗಿ ಜಯಂತ ನಾಯ್ಕ, *ಪ್ರಧಾನ ಕಾರ್ಯದರ್ಶಿಯಾಗಿ *ಸಂದೇಶ ಶೆಟ್ಟಿ, ಅನಂತ ನಾಯಕ, ವಿನೋದ ನಾಯಕ, ಮೊಹನ ಮೇಸ್ತ, ಎ.ಬಿ.ಥಾಮಸ್, ಪಾಡುರಂಗ ಅಂಬಿಗ, ಚಂದ್ರಶೇಖರ ಗೌಡ, ಗೀರೀಶ ಪಟಗಾರ, ಗಜಾನನ ಹಳ್ಳೆರ, ಪ್ರಮೋದ ಪೈ *ಕಾರ್ಯದರ್ಶಿಯಾಗಿ ಪವಿತ್ರಾ ಮೊಗೇರರು,ನಾಗಭೂಷಣ ನಾಯ್ಕ,ಪ್ರಮೋದ ನಾಯಕ,ಕಲ್ಪನಾ ಗೌಡ, ಜಾವಿದ್ ಶೇಖ್, ಮೋಹನ್ ಫರ್ನಾಂಡಿಸ್, ಶ್ಯಾಮಲ ನಾಯ್ಕ, ಪ್ರಜ್ವಲ ನಾಯ್ಕ* ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನೂತನವಾಗಿ ಆಯ್ಕೆಯಾದವರಿಗೆ ಮುಂಬರುವ ಚುನಾವಣೆಯೊಳಗೆ ಪಕ್ಷ ಸಂಘಟಿಸುವ ಗುರುತರ ಜವಾಬ್ದಾರಿ ನೀಡಿದೆ.
ರಾಜ್ಯಧ್ಯಕ್ಷರ ಸೂಚನೆ ಮೇರೆಗೆ ಇಂದು ಶಿರಸಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಇವರು ಆದೇಶ ಪತ್ರವನ್ನು ವಿತರಿಸಿದ್ದು ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ.
*ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಧರ ಹೆಗಡೆ ಸೇರಿದಂತೆ ಉಪಧ್ಯಕ್ಷರನ್ನು ಹಾಗೂ ಕಾರ್ಯದರ್ಶಿ ಸೇರಿದಂತೆ ಎಲ್ಲರನ್ನು ಜಿಲ್ಲಾ ಘಟಕದ ಕಾಂಗ್ರೆಸ್ ಕಾರ್ಯದರ್ಶಿಯಾದ ರವಿ ಶೆಟ್ಟಿ ಕವಲಕ್ಕಿ ಅಭಿನಂದಿಸಿದ್ದಾರೆ*


Leave a Comment