• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಿರಸಿ ಅರಣ್ಯ ಸಂಚಾರಿದಳದ ಕಾರ್ಯಾಚರಣೆ ಹಳಿಯಾಳದ ಕಾಳಗಿನಕೊಪ್ಪದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ವಶ – ಅರಣ್ಯ ಇಲಾಖೆ ಸಿಬ್ಬಂದಿ ಶಾಮಿಲು ಶಂಕೆ ಜನರಿಂದ ತನಿಖೆಗೆ ಆಗ್ರಹ

January 5, 2019 by Yogaraj SK Leave a Comment

watermarked 5 hly 3

ಹಳಿಯಾಳ:- ಶಿರಸಿಯ ಅರಣ್ಯ ಸಂಚಾರಿದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಸಾಗವಾಣ ನಗ, ಎಳೆ ಹಾಗೂ ತುಂಡುಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿರುವ ಘಟನೆ ತಾಲೂಕಿನ ಸಾಂಬ್ರಾಣ ವಲಯದ ಗುಂಡೊಳ್ಳಿ ಹದ್ದಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಾಳಗಿನಕೊಪ್ಪ ಗ್ರಾಮ ರಹವಾಸಿ ಉಮೇಶ ದೇವೆಂದ್ರ ದೊಡಗೌಡ ಬಂಧಿತ ಆರೋಫಿಯಾಗಿದ್ದಾನೆ. ಇತನಿಂದ ಸಾಗವಾಣ ನಗಗಳು 19, 0.642ಕ್ಯೂಬಿಕ್ ಮೀಟರ್, 8 ಎಳೆಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇಲಾಖೆಯ ಅಂದಾಜು ಮೌಲ್ಯ ಸುಮಾರು 1 ಲಕ್ಷ ರೂ. ಆಗಿದ್ದರೇ ಮಾರುಕಟ್ಟೆ ಮೌಲ್ಯ ಲಕ್ಷಕ್ಕೂ ಅಧಿಕ ಎನ್ನಲಾಗಿದೆ.
ತಾಲೂಕಿನ ಕುಂಬಾರಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ಮರದ ತುಂಡುಗಳನ್ನು ಮಾರ್ಪಾಟು ಮಾಡಿ ಅಲ್ಲಿಂದ ಕಾಳಗಿನಕೊಪ್ಪ ಗ್ರಾಮದ ಉಮೇಶ ಹೊಲದಲ್ಲಿಯ ಕೊಟ್ಟಿಗೆಯಲ್ಲಿ ಇವುಗಳನ್ನು ದಾಸ್ತಾನು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಅರಣ್ಯ ಸಂಚಾರಿ ದಳ ಶಿರಸಿಯ ಡಿಎಫ್‍ಓ ಬಾಳಕೃಷ್ಣ ಅವರ ಮಾರ್ಗದರ್ಶನದಲ್ಲಿ ಆರ್‍ಎಫ್‍ಓ ಜಿಟಿ ರೇವಣಕರ, ಇಲಿಯಾಸ ಶೇಖ, ರಾಜು ಪೂಜಾರ ಇತರ ಸಿಬ್ಬಂದಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

watermarked IMG 20190105 WA0243
ತನಿಖೆಗೆ ಆಗ್ರಹ:- ಆದರೇ ಈ ದಾಳಿಯ ಬಗ್ಗೆ ಜನರ ಮಾಹಿತಿಯಂತೆ ಈ ವಲಯದ ಓರ್ವ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಈ ಅರಣ್ಯ ಕಳ್ಳನೊಂದಿಗೆ ಶಾಮಿಲಾಗಿದ್ದಾನೆ. ಮರ ಕಟಾವು ಹಾಗೂ ಅಕ್ರಮವಾಗಿ ಸಾಗಾಣೆ ಮಾಡುವಲ್ಲಿ ಆತನ ಕೈವಾಡವಿದ್ದು ಈ ಬಗ್ಗೆ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕಾಳಗಿನಕೊಪ್ಪ, ಸಾಂಬ್ರಾಣ , ಕುಂಬಾರಕೊಪ್ಪ, ಗುಂಡೊಳ್ಳಿ ಗ್ರಾಮದ ಜನತೆ ಅರಣ್ಯ ಇಲಾಖೆಯ ಸಾಂಬ್ರಾಣ ವಲಯ ಕಚೇರಿಗೆ ಭೇಟಿ ನೀಡಿ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ಅವರನ್ನು ಆಗ್ರಹಿಸಿದ್ದಾರೆ.
ತನಿಖೆ ನಡೆಯುತ್ತಿದೇ ದೃಢ ಪಟ್ಟರೇ ಕ್ರಮ :- ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿ ದೀಪಕ ಅಕ್ರಮ ಕಟ್ಟಿಗೆ ಹಾಗೂ ಆರೋಪಿಯನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಇಲಾಖೆಯ ಗುಂಡೊಳ್ಳಿ ಹದ್ದಿನ ಫಾರೆಸ್ಟರ್ ಉಮೇಶ ಎನ್ನುವವರ ಬಗ್ಗೆ ಜನರಿಂದ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಎಲ್ಲಾ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಒಂದಾನುವೇಳೆ ಇಲಾಖೆಯ ಸಿಬ್ಬಂದಿ ಶಾಮಿಲಾಗಿದ್ದು ದೃಢಪಟ್ಟರೇ ಕಾನೂನು ರೀತಿ ಪ್ರಕರಣ ದಾಖಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

FOrest sambrani kalginkopa crime ,haliyal

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: . ಮರ ಕಟಾವು ಹಾಗೂ ಅಕ್ರಮವಾಗಿ ಸಾಗಾಣೆ, FOrest sambrani kalginkopa crime, HALIYAL, ಅರಣ್ಯ ಇಲಾಖೆ ಸಿಬ್ಬಂದಿ ಶಾಮಿಲು ಶಂಕೆ, ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಈ ಅರಣ್ಯ ಕಳ್ಳನೊಂದಿಗೆ ಶಾಮಿಲಾಗಿದ್ದಾನೆ, ಎಳೆ ಹಾಗೂ ತುಂಡು, ಕಾಳಗಿನಕೊಪ್ಪ, ಕಾಳಗಿನಕೊಪ್ಪ ಗ್ರಾಮ, ಕುಂಬಾರಕೊಪ್ಪ, ಗುಂಡೊಳ್ಳಿ ಗ್ರಾಮದ ಜನತೆ ಅರಣ್ಯ ಇಲಾಖೆ, ಜನರಿಂದ ತನಿಖೆಗೆ ಆಗ್ರಹ, ರಹವಾಸಿ ಉಮೇಶ ದೇವೆಂದ್ರ ದೊಡಗೌಡ ಬಂಧಿತ ಆರೋಫಿ, ಲಕ್ಷಾಂತರ ರೂ ಬೆಲೆ ಬಾಳುವ ಸಾಗವಾಣಿ ಕಟ್ಟಿಗೆ ವಶ, ಶಿರಸಿ ಅರಣ್ಯ ಸಂಚಾರಿದಳದ ಕಾರ್ಯಾಚರಣೆ, ಸಾಗವಾಣ ನಗ, ಸಾಂಬ್ರಾಣ, ಹಳಿಯಾಳದ ಕಾಳಗಿನಕೊಪ್ಪದಲ್ಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...