ಹಳಿಯಾಳ :- ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ
ನಾಳೆ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಪುಥ್ಥಳಿ ಪ್ರತಿಷ್ಠಾಪಣೆ ಅಂಗವಾಗಿ ಗುರುವಾರ ಗ್ರಾಮದಲ್ಲಿ ವಿಜೃಂಭಣೆಯಿಂದ ಮೂರ್ತಿಯ ಶೋಭಾಯಾತ್ರೆ ನಡೆಯಿತು.
ತೇರಗಾಂವ ಗ್ರಾಮದ ಕೆರೆಯ ದಂಡೆಯ ಮೇಲಿನ ಭವ್ಯ ಪೀಠದಲ್ಲಿ ಸುಮಾರು ೧೫ ಅಡಿ ಎತ್ತರದ ಭವ್ಯ ಅಶ್ವಾರೂಢ ಶೀವಾಜಿ ಮಹಾರಾಜರ ಪುಥ್ಥಳಿ ದಿ. ೧೮ ಶುಕ್ರವಾರದಂದು
ಪ್ರತಿಷ್ಠಾಪನೆ ಆಗಲಿದೆ.

ಗ್ರಾಮಸ್ಥರೆಲ್ಲರೂ ಜಾತಿಭೆದ ಮರೆತು ಎಲ್ಲರೂ ವಂತಿಗೆಯನ್ನು ಸಂಗ್ರಹಿಸಿ ಸುಮಾರು ೨ ಲಕ್ಷ ರೂ ಮೌಲ್ಯದ ಶೀವಾಜಿ ಮೂರ್ತಿಯನ್ನು ತಂದಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಎಲ್ಲೆಡೆ ಕೇಸರಿ ಪತಾಕೆಗಳು, ಭಗವಾ ಧ್ವಜಗಳು ಹಾಗೂ ತಳಿರು ತೊರಣಗಳಿಂದ ಗ್ರಾಮ ಮೂರ್ತಿ ಪ್ರತಿಷ್ಠಾಪನೆಗೆ ಉತ್ಸಾಹದಿಂದ ಸಜ್ಜಾಗಿದ್ದು ಗುರುವಾರ ನಡೆದ ಶೋಭಾಯಾತ್ರೆ ಯಲ್ಲಿ ಸಾವಿರಾರು ಯುವಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.



Leave a Comment