Éೂನ್ನಾವರ . ತಾಲೂಕಿನ ಕೊಡಾಣ ಗ್ರಾಮ ಪಂಚಾಯತ ವ್ಯಾಪ್ತಿಯ ಹಿನ್ನೂರು ಬೆನ್ಕುಳಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿದ ಶಾಸಕ ಸುನೀಲ ನಾಯ್ಕ.
ಹೊನ್ನಾವರ ತಾಲೂಕಿನ ಕೋಡಾಣ ಗ್ರಾಮ ಪಂಚಾಯತ ವ್ಯಾಪ್ತಿಯ ಬಹುವರ್ಷದ ಬೇಡಿಕೆಯಾದ ಹಿನ್ನೂರು ಬೆನ್ಕುಳಿ ರಸ್ತೆಗೆ 13 ಲಕ್ಷ ರೂಪಾಯಿ ಕಾಂಕ್ರೀಟಿಕರಣಕ್ಕೆ ಮಂಜೂರಾಗಿದ್ದು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿ ಈ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯಾದ ರಸ್ತೆ ಕಾಮಗಾರಿಗೆ ಇಂದು ಗುದ್ದಲಿಪೂಜೆ ನಡೆಯಲಿದ್ದು ಬಹುದಿನದ ಬೇಡಿಕೆ ನನಸಾಗುವಂತಾಗಿದೆ. ಈ ಪಂಚಾಯತ ವ್ಯಾಪ್ತಿಯಲ್ಲಿ ಇನ್ನೂ ಹಲವು ರಸ್ತೆ ಕೆಲಸ ನಡೆಯಬೇಕಿದ್ದು ಮುಂದಿನ ದಿನದಲ್ಲಿ ಹಂತ ಹಂತವಾಗಿ ಮಾಡಲಿದ್ದೇನೆ. ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನ ಸೌಲಭ್ಯಕ್ಕೆ ವಿಶೇಷ ಆದತ್ಯೆ ನೀಡಿದ್ದು ಈ ಭಾಗದಲ್ಲಿ ಅದರ ಬಗ್ಗೆ ಗಮನಹರಿಸುದಾಗಿ ಹೇಳಿದರು. ಎಲ್ಲಾ ಪ್ರಾಥಮಿಕ ಪ್ರೌಡಶಾಲೆಗಳ ಸ್ಥಿತಿಗತಿಯ ಕುರಿತು ಸರ್ವೆ ನಡೆಸಿ ಅಲ್ಲಿಯ ಕುಂದುಕೊರತೆಯನ್ನು ಬಗೆಹರಿಸುವ ಪ್ರಾಮಾಣ ಕ ಪ್ರಯತ್ನ ನಡೆಸುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಬಳಕೂರು ಗ್ರಾಮ ಪಂಚಾಯತ ಅಧ್ಯಕ್ಷರಾದ ಕೇಶವ ನಾಯ್ಕ, ಉಪಾಧ್ಯಕ್ಷ ಗಣಪತಿ ನಾಯ್ಕ ಬಿ.ಟಿ, ಪಕ್ಷದ ಮುಖಂಡರಾದ ಸುಬ್ರಾಯ ನಾಯ್ಕ ಗಣಪತಿ ಗೌಡ ಚಿತ್ತಾರ, ಗ್ರಾಮದವರಾದ ಐ.ಜಿ.ನಾಯ್ಕ, ಶ್ರೀಕಾಂತ ನಾಯ್ಕ, ಅನಿಲ್ ನಾಯ್ಕ, ಮಣ ಕಂಠ ನಾಯ್ಕ ಪ್ರಮುಖರು ಉಪಸ್ಥಿತರಿದ್ದರು.
Leave a Comment