ಹೊನ್ನಾವರ : ಕಳೆದ ಐದು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಅತ್ಯಂತ ಸ್ವಚ್ಛ, ಪರಿಶುದ್ಧ ಆಡಳಿತ ನೀಡಿ ನಾಡಿನ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾದ ಸಚಿವ ಆರ್.ವಿ. ದೇಶಪಾಂಡೆ ವಿರುದ್ಧ “ಪರ್ಸಂಟೆಜ್ ದೇಶಪಾಂಡೆ” ಅನ್ನುವ ಅವಹೇಳನಕಾರಿ ಮಾತುಗಳನ್ನಾಡಿದ ಕೇಂದ್ರ ಸಚಿವ ಅನಂತಕುಮಾರ ಹೇಳಿಕೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಖಂಡಿಸಿದ್ದಾರೆ.
ಅವರು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಐದು ಬಾರಿ ಸಂಸದರಾಗಿ, ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರೂ ದೇಶದ ಸಂವಿಧಾನ, ಕಾನೂನಿಗೆ ಗೌರವ ನೀಡದೇ ಚಾಕು, ಚೂರಿ ಸಂಸ್ಕøತಿ ಮೈಗೂಡಿಸಿಕೊಂಡಿರುವ ಅನಂತಕುಮಾರ ಹೆಗಡೆ ದೇಶಕಂಡ ಹೀನ ರಾಜಕಾರಣ ಎಂದು ತಿವಿದಿದ್ದಾರೆ. ಕೇಂದ್ರದ ಬಿ.ಜೆ.ಪಿ. ಸರಕಾರದಲ್ಲಿ ಅತ್ಯಂತ ಜವಾಬ್ಧಾರಿ ಸ್ಥಾನದಲ್ಲಿದ್ದರೂ, ಕ್ಷೇತ್ರಕ್ಕೆ ನಯಾಪೈಸೆ ಕೊಡುಗೆ ನೀಡದ ಅವರು ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ವಿನಾಕಾರಣ ಆರ್.ವಿ. ದೇಶಪಾಂಡೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಯಾರೂ ಕೂಡಾ ಭೂಮಿ ಮೇಲೆ ಅರ್ಜಿ ಹಾಕಿ ಹುಟ್ಟಿ ಬಂದಿಲ್ಲಾ. ನಮ್ಮ ನಾಯಕ ರಾಹುಲ್ ಗಾಂಧಿಯವರ ಹುಟ್ಟಿನ ಬಗ್ಗೆ ಶಂಕೆ ವ್ಯಕ್ತಪಡಿಸುವ ಅನಂತಕುಮಾರ, ತನ್ನ ಹುಟ್ಟಿನ ಬಗ್ಗೆ ಸ್ಪಷ್ಟನೆ ನೀಡಲಿ. ಅಪ್ಪ ಮುಸ್ಲಿಂ, ತಾಯಿ ಕ್ರಿಶ್ಚಿಯನ್, ರಾಹುಲ್ ಹೇಗೆ ಬ್ರಾಹ್ಮಣರಾಗುತ್ತಾರೆ ಅನ್ನುವ ಅನಂತಕುಮಾರ ಹೇಳಿಕೆ ಅವರ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದರು.
ಹೊನ್ನಾವರದಲ್ಲಿ ಪರೇಶ ಮೇಸ್ತನ ಸಾವಿನ ಸಂದರ್ಭದಲ್ಲಿ ಜನರ ನಡುವೆ ಪ್ರಚೋದನಾಕಾರಿ ಭಾಷಣ ಮಾಡಿ ಒಂದು ವಾರದಲ್ಲಿ ಹನಿ-ಹನಿ ರಕ್ತಕ್ಕೂ ನ್ಯಾಯ ನೀಡುತ್ತೇನೆ ಎಂದು ಜನರ ಮುಂದೆ ಆಣೆ ಮಾಡಿ ಈಗ ಒಂದೂವರೆ ವರ್ಷವಾದರೂ ಪರೇಶ ಮೇಸ್ತನ ಕುಟುಂಬಕ್ಕೆ ಕಣ್ಣೊರಿಸುವ ಪ್ರಯತ್ನ ಮಾಡುತ್ತಿಲ್ಲ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೇಸ್ ನಾಯಕರುಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನು ಇನ್ನಾದರೂ ನಿಲ್ಲಿಸಲಿ. ಇಲ್ಲದಿದ್ದರೆ ಕಾಂಗ್ರೇಸ್ ಕಾರ್ಯಕರ್ತರು ನಿಮ್ಮನ್ನು ಪ್ರತಿಭಟಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ತೆಂಗೇರಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಇಂದಿನ ಶಾಸಕ ದಿನಕರ ಶೆಟ್ಟಿ ಬೇರೆಯವರ ಸಾಧನೆಯನ್ನು ತನ್ನದು ಎಂದು ಬಿಂಬಿಸಿಕೊಳ್ಳುತ್ತಿರುವುದು ಯಾವ ಮಹಾಸಾಧನೇ ಎಂದರು. ಹೊನ್ನಾವರ ಶರಾವತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅಂದಿನ ಶಾಸಕಿ ಶ್ರೀಮತಿ ಶಾರದಾ ಮೋಹನ ಶೆಟ್ಟಿಯವರ ಸರ್ವಪ್ರಯತ್ನದಿಂದಾಗಿದ್ದು ಅನ್ನುವುದು ಎಲ್ಲರಿಗೂ ತಿಳಿದ ವಿಷಯ. 122 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದಿನಾಂಕ : 06-12-2017 ರಂದು ಹಣಕಾಸು ಮಂಜೂರಾತಿಯೊಂದಿಗೆ ಕುಮಟಾದಲ್ಲಿ ಶಂಕು ಸ್ಥಾಪನೆ ನೆರವೇರಿಸದ್ದರು. ಬಹುದೊಡ್ಡ ಯೋಜನೆಗಳಲ್ಲಿ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳಿರುವುದು ಸಹಜ. ಅದನ್ನೇ ಅರಣ್ಯ ಇಲಾಖೆಯಿಂದ ನೀಲನಕ್ಷೆಗೆ ಅನುಮತಿ ಅನ್ನುವ ಪ್ರತಿಯನ್ನು ಪತ್ರಿಕೆಗಳಿಗೆ ಪ್ರದರ್ಶಿಸಿ ಗ್ರಾಮೀಣಾಭಿವೃದ್ಧಿ ಸಚೀವರ ಕೃಷ್ಣ ಬೈರೆಗೌಡರಿಂದ 56 ಕೋಟಿ ಪ್ರಸ್ತಾವನೆ ಸಲ್ಲಿಕೆ ಇವುಗಳೆಲ್ಲಾ ನಿರಂತರ ಪ್ರಕ್ರಿಯೆಯಾಗಿದ್ದು, ಇದೊಂದು ಅಗ್ಗದ ಪ್ರಚಾರ ತಂತ್ರದ ಭಾಗವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ, ಪ.ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಪ.ಪಂ. ಮಾಜಿ ಅಧ್ಯಕ್ಷ ರವೀಂದ್ರ ನಾಯ್ಕ, ಕಾಂಗ್ರೇಸ್ ಇಂಟಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಕಾಂಗ್ರೇಸ್ ಮುಖಂಡರಾದ ಮುಸಾ ಅಣ ್ಣಗೇರಿ, ನೆಲ್ಸನ್ ರೊಡ್ರಿಗೀಸ್, ಉಮಾ ಮೇಸ್ತ, ಕುಪ್ಪು ಗೌಡ, ರಾಜೇಶ ಗುನಗಾ, ಮೋಹನ ಮೇಸ್ತ, ಕೃಷ್ಣಾ ಹರಿಜನ, ಲಂಬೋದರ ನಾಯ್ಕ, ತಿಮ್ಮಪ್ಪ ನಾಯ್ಕ, ಅಣ್ಣಪ್ಪ ಆಚಾರಿ, ಹರೀಶ ನಾಯ್ಕ, ಮಂಜುನಾಥ ಶಾನಭಾಗ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Leave a Comment