
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳ ನೇತ್ರತ್ವದಲ್ಲಿ ಜಿಲ್ಲಾ ಮಹಿಳಾ ಸಮಾವೇಶವನ್ನು ಶಿರಸಿಯಲ್ಲಿ ಮಾ. 13ರ ಬುಧವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉಕ ಜಿಲ್ಲಾ ಸ್ತ್ರೀ ಶಕ್ತಿ ಸಂಘದ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ ಹೇಳಿದರು.
ವೀಚಾರ ಸಂಕಿರಣ- ಸನ್ಮಾನ:-
ಅವರು ಅಂಕೋಲಾದಲ್ಲಿ ನಡೆಸಿದ ಜಿಲ್ಲಾ ಮಹಿಳಾ ಸಮಾವೇಶದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಕರೆಸಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ವಿಚಾರ ಸಂಕಿರ್ಣ ನಡೆಯಲಿದೆ. ಮಹಿಳೆಯರ ಬೇಡಿಕೆಗಳ ಬಗ್ಗೆ ಚರ್ಚಿಸಿ ಸರಕಾರದ ಗಮನ ಸೆಳೆಯಲಾಗುವುದು ಹಾಗೂ ಮಹಿಳಾ ಸಾಧಕರುಗಳನ್ನ ಸನ್ಮಾನಿಸಲಾಗುವುದು ಎಂದರು.
ಆರೋಪಿ ರಕ್ಷಣೆ ಆರೋಪ ;-
ಈ ಹಿಂದೆ ಸಿದ್ದಾಪುರದಲ್ಲಿ ಪೊಸ್ಕೋ ಪ್ರಕರಣ ಒಂದರಲ್ಲಿ ಕೊರ್ಟ್ ಆದೇಶವನ್ನ ಉಲ್ಲಂಘಿಸಿದ ವ್ಯಕ್ತಿಗಳನ್ನು ಬಂಧಿಸದೆ ಜಾಮೀನು ಮಾಡಿಸಿ ಬಿಡಲಾಗಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಮತ್ತು ಪ್ರಕರಣಕ್ಕೆ ಸಂಬಂಧಪಟ್ಟವರನ್ನ ಬಂಧಿಸಬೇಕೆಂದು ಆಗ್ರಹಿಸುತ್ತೇವೆ. ಇತ್ತೀಚಿಗೆ ಸಿದ್ದಾಪುರದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವಾಗ ಕೈಹಿಡಿದು ಎಳೆದ ಘಟನೆ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲಿಸರು ಆರೋಪಿಯನ್ನ ವಿಚಾರಣೆ ಮಾಡಿದಾಗ ಕೇಲವು ರಾಜಕೀಯ ಶಕ್ತಿಗಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಪೋಲಿಸರ ಮೇಲೆಯೆ ದೂರು ದಾಖಲಿಸಿ ಮತ್ತು ಆರೋಪಿಯನ್ನು ರಕ್ಷಣೆ ಮಾಡುವ ಹುನ್ನಾರ ನಡೆಸುತ್ತಿರುವದು ಖಂಡನೀಯ ಎಂದು ಶೋಭಾ ನಾಯ್ಕ ಹೇಳಿದರು.

ನಿತ್ಯಾನಂದ ಉತ್ತಮ ಅಧಿಕಾರಿ ;-
ಸಿದ್ದಾಪುರ ತಾಲೂಕಾಧ್ಯಕ್ಷೆ ರೇಣುಕಾ ಜಿ. ನಾಯ್ಕ ಮಾತನಾಡಿ ಸಿದ್ದಾಪುರ ತಾಲೂಕಿನಲ್ಲಿ ಈ ಹಿಂದೆ ವ್ಯಾಪಕವಾಗಿ ಅಕ್ರಮ ಸರಾಯಿದಂದೆ ನಡೆಯುತ್ತಿತ್ತು. ಈ ಸಂಬಂಧ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸಿದ್ದಾಪುರ ಪೋಲೀಸ ಠಾಣೆಗೆ ಪಿಎಸೈ ಆಗಿ ನಿತ್ಯಾನಂದ ಗೌಡ ಅವರು ಬಂದ ನಂತರ ಮಹಿಳೆಯರ ಬೇಡಿಕೆಯ ಅನುಸಾರ ಅಕ್ರಮ ಸರಾಯಿ ಮಾರಾಟವನ್ನು ತಡೆದಿದ್ದಾರೆ.
ತಾಲೂಕಿನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು, ಯುವತಿಯರನ್ನು, ಮಹಿಳೆಯರನ್ನು ಚುಡಾಯಿಸುವ ಪುಂಡರನ್ನು ನಿಗ್ರಹಿಸಿದ್ದಾರೆ ಹಾಗೂ ಗಾಂಜಾ ಮಟಕಾದಂತ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿ ಮಹಿಳೆಯರು ನಿಟ್ಟುಸಿರು ಬಿಡುವಂತೆ ಮಾಡಿದ್ದರು.
ವರ್ಗಾವಣೆ ಮಾಡಬೇಡಿ ;-
ಆದರೆ ಈಗ ಪಿಎಸೈ ನಿತ್ಯಾನಂದ ಗೌಡರ ಮೇಲೆ ಸುಳ್ಳು ಆರೋಪಗಳನ್ನ ಹೊರಿಸಿ ವರ್ಗಾವಣೆ ಮಾಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ಎಸ್ಪಿಯವರು ದಕ್ಷ ಪಿಎಸೈ ನಿತ್ಯಾನಂದ ಗೌಡ ವರ್ಗಾವಣೆ ಯಾಗದಂತೆ ತಡೆಯಬೆಕೆಂದು ಆಗ್ರಹಿಸಿದರು.
ಸ್ತ್ರೀ ಶಕ್ತಿ ಸಂಘಗಳ ಜಿಲ್ಲಾ ಒಕ್ಕೂಟದ ಕಾರ್ಯಾಧ್ಯಕ್ಷ ಚಂದಾ ನಾಯ್ಕ, ಸಿದ್ದಾಪುರ ತಾಲೂಕಾಧ್ಯಕ್ಷೆ ರೇಣುಕಾ ಜಿ. ನಾಯ್ಕ, ಅಂಕೋಲಾ ತಾಲೂಕ ಉಪಾಧ್ಯಕ್ಷೆ ಗೀತಾ ಎನ್. ಶಾನಭಾಗ, ಒಕ್ಕೂಟದ ಸದಸ್ಯರಾದ ಜ್ಯೋತಿ ಸತೀಶ ಆಚಾರಿ, ದನವಂತಿ ಬಿ. ರೇವಣಕರ, ಹೊನ್ನಾವರ ತಾಲೂಕಾಧ್ಯಕ್ಷೆ ಶ್ಯಾಮಲಾ ಶೆಟ್ಟಿ, ಭಟ್ಕಳ ತಾಲೂಕಾಧ್ಯಕ್ಷೆ ಸಂಧ್ಯಾ ಗುನಗಿ ಉಪಸ್ಥಿತರಿದ್ದರು.
Leave a Comment