
ಜೋಯಿಡಾ:- ಸರ್ಕಾರದ ಸಂಬಳ ಪಡೆದು ಗೌರವಯುತವಾಗಿ ಸರ್ಕಾರಿ ಕೆಲಸ ಮಾಡಪ್ಪಾ ಅಂದರೇ ಇಲ್ಲೊಬ್ಬ ಪೋಲಿಸಪ್ಪ ಇಲ್ಲ ನಾನು ಕಳ್ಳತನ ಮಾಡಿಯೇ ಮುಂದಿನ ಕೆಲಸ ಮಾಡುತ್ತೇನೆನ್ನುವಂತೆ ಲಕ್ಷಾಂತರ ರೂ ಬೆಲೆ ಬಾಳುವ ಸಿಸಂ ಹಾಗೂ ಸಾಗವಾಣಿ ನಾಟಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣದಲ್ಲಿ ತಗಲಾಕಿಕೊಂಡಿದ್ದಾನೆ.
*ಗುಪ್ತಚರ ವಿಭಾಗಕ್ಕೆ ವರ್ಗವಾಗಿದ್ದ ಗುರುರಾಜ್ :-*
ಲಕ್ಷಾಂತರ ರೂ ಬೆಲೆ ಬಾಳುವ ನಾಟ ಸಮೇತ ಬಲೆಗೆ ಬಿದ್ದವನು ಜೋಯಿಡಾ ದ ಗುಪ್ತಚರ ಇಲಾಖೆಯಲ್ಲಿ ಪೋಲಿಸ್ ಸಿಬ್ಬಂದಿಯಾಗಿ (ಕಾನ್ಸ್ಟೇಬಲ್) ಆಗಿದ್ದ ಗುರುರಾಜ್.
ಇತ 7 ವರ್ಷಗಳಿಂದ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದು ಈಗೆ ೨ ವರ್ಷಗಳ ಹಿಂದೆ ಗುಪ್ತದಳ ವಿಭಾಗಕ್ಕೆ ವರ್ಗವಾಗಿದ್ದ ಎಂದು ತಿಳಿದು ಬಂದಿದೆ.

*ಅರಣ್ಯದಿಂದ ಲೂಟಿ-ಮಾರಾಟ :-*
ಜೋಯಿಡಾ ಅರಣ್ಯ ಭಾಗದಲ್ಲಿ ಸಿಗುವ ಬೆಲೆ ಬಾಳುವ ಸೀಸಂ ಹಾಗೂ ಸಾಗವಾನಿ ನಾಟವನ್ನು ಅರಣ್ಯದಿಂದ ಅಕ್ರಮವಾಗಿ ದೊಚಿ ತನ್ನ ಸಹಚರ ಉದಯ್ ಎನ್ನುವಾತನ ಸಹಾಯದಿಂದ ಪೀಠೋಪಕರಣಗಳನ್ನು ತಯಾರಿಸಿ ಅಥವಾ ಹಾಗೆಯೇ ನಾಟಗಳನ್ನು ಮಾರಾಟ ಮಾಡುತಿದ್ದ ಎನ್ನಲಾಗಿದೆ.
*ನಾಟಗಳು, ಉದಯ ವಶಕ್ಕೆ – ಗುರುರಾಜ್ ಪರಾರಿ*
–
ಖಚಿತ ಮಾಹಿತಿ ಮೇರೆಗೆ ಜೋಯಿಡಾದ ಸಿಪಿಐ ರಮೇಶ್ ಹೂಗಾರ್ ಹಾಗೂ ಡಿಸಿಐಬಿ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದಲ್ಲಿ ಇಂದು ಪೊಲೀಸ್ ವಸತಿನಿಲಯಕ್ಕೆ ದಾಳಿ ಮಾಡಿದ್ದು ಆತ ವಸತಿ ನಿಲಯದಲ್ಲಿ ಬಚ್ಚಿಟ್ಟಿದ್ದ ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಟವನ್ನು ಹಾಗೂ ಈತನಿಗೆ ಸಹಾಯ ಮಾಡುತಿದ್ದ ಉದಯ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
*ಪೋಲಿಸ್ ವಸತಿ ಗೃಹಕ್ಕೆ ಪೋಲಿಸರಿಂದಲೇ ದಾಳಿ*
ಇಲ್ಲಿ ವಿಶೇಷ ಏನಪ್ಪಾ ಅಂದರೇ ಪೋಲಿಸರ
ವಸತಿ ನಿಲಯಕ್ಕೆ ಪೊಲೀಸರೇ ದಾಳಿ ಇಟ್ಟಿದ್ದರಿಂದ ತಮ್ಮ ಇಲಾಖೆಯಲ್ಲಿರುವನೇ ಕಳ್ಳ ಅಕ್ರಮ ವ್ಯವಹಾರ ನಡೆಸುತ್ತಿದ್ದ ಎನ್ನುವುದು ಅವರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಆದರೇ ಕಳ್ಳ ಗುರುರಾಜ್ ಮಾತ್ರ ದಾಳಿಯನ್ನರಿತು ಪೋಲಿಸರಿಗೆ ಯಾಮಾರಿಸಿ ಪರಾರಿಯಾಗಿದ್ದಾನೆ.
*ಇತಿಹಾಸದಲ್ಲೇ ಮೊದಲು*
ದಾಳಿ ನಡೆಸಿದಾಗ
ವಸತಿ ಗೃಹದ ೪ ಕೋಣೆಗಳಲ್ಲಿ ಸುಮಾರು ೫ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಸಿಸಂ ಹಾಗೂ ಸಾಗವಾಣಿ ನಾಟಗಳು ಪತ್ತೆಯಾಗಿವೆ.
ಪೋಲಿಸ್ ವಸತಿ ಗೃಹಕ್ಕೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದು
ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.

Leave a Comment