ಸಿದ್ದಾಪುರ ಫೆ16: ಉಗ್ರರು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮಾಡಿದ ಭೀಕರ ದಾಳಿಗೆ ನಮ್ಮ ಸಿಆರ್‌ಫಿಎಫ್ ಯೋಧರು ಹುತಾತ್ಮರಾದರು. ಇಂತಹ ಹೇಯ ಕೃತ್ಯ ನಡೆಸಿದ ಉಗ್ರರಿಗೆ ತಕ್ಕ ಪಾಠ ಕಲಿಸುವಂತೆ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾನೆ.
ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಅಂತಿಮ ವರ್ಷದಲ್ಲಿ ಓದುತ್ತಿರುವ ಮಹಮದ್ ಶಕೀಬ್ ಬರೆದ ಪತ್ರವಾಗಿದ್ದು, ಪತ್ರದಲ್ಲಿ ಫೆ. 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿ ಬಗ್ಗೆ ತಿಳಿದಿದ್ದೇವೆ. ದೇಶದ 44ಕ್ಕೂ ಹೆಚ್ಚು ಯೋಧರು ತಮ್ಮ ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ದುಷ್ಕೃತ್ಯವೆಸಗಿದ ಪಾಕಿಸ್ತಾನಿ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು. ನಾನು ನಿಮಗೆ ಈ ಬಗ್ಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ಯೋಧರು ಮಾಡಿದ ತ್ಯಾಗ ವ್ಯರ್ಥವಾಗದಂತೆ ನೋಡಿಕೊಳ್ಳಿ.
ಅವರಿಗೆ ಪಾಠ ಕಲಿಸಲು ನಾವು ಯಾವುದೇ ತ್ಯಾಗಕ್ಕೂ ಬದ್ಧರಿದ್ದೇವೆ. ಅವಶ್ಯವಿದ್ದರೆ ರಕ್ತವನ್ನು ಹರಿಸಲು ಸಿದ್ಧರಿದ್ದೇವೆ ಎಂದು ಬರೆದು ಮೇಲ್ ಮತ್ತು ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ರವಾನಿಸಿದ್ದಾನೆ.

Leave a Comment