
ಗೋಕರ್ಣ:- ಇಲ್ಲಿಯ ಮುಖ್ಯಕಡಲತೀರದ ಶ್ರೀ ರಾಮನ ಸನ್ನಿಧಾನವಾಗಿರುವ ಹಾಗೂ ಸಾಧು ಸಂತರ ಆಧ್ಯಾತ್ಮಿಕ ಸ್ಥಳವಾದ ರಾಮತಿರ್ಥದಲ್ಲಿ ಗೋಕರ್ಣದ *ಆಲ್ ಎಬೌಟ್ ಗೋಕರ್ಣ* ಮತ್ತು *ನಮಸ್ಕಾರ ಗೋಕರ್ಣ* ದ ತಂಡದ ವತಿಯಿಂದ ರವಿವಾರದಂದು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ಗೋಕರ್ಣವನ್ನು ಕಸದ ಸಮಸ್ಯೆಯಿಂದ ಮುಕ್ತವಾಗಿಸಲು ಸ್ವಚ್ಛತಾ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಿತರಾಗಿ ಸದಸ್ಯರೆಲ್ಲರು ಪಾಲ್ಗೊಂಡು ಮುಂಜಾನೆ 7:30 ರಿಂದ 9:00 ಗಂಟೆಯವರೆಗೆ ಪ್ಲಾಸ್ಟಿಕ್, ಪೇಪರ್ ಮತ್ತು ಬಾಟಲಿಗಳನ್ನು ಹೆಕ್ಕಿ ಸ್ವಚ್ಛತೆ ಗೈದರು.
ಕಸದ ಸಮಸ್ಯೆ ನಿರಂತರ ಕಾಡುತ್ತಿದ್ದು ಪ್ರಜ್ಞಾವಂತ ನಾಗರಿಕರು ಇದನ್ನು ಬೆಂಬಲಿಸುವ ಜತೆಗೆ ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂಬುದು ಎಲ್ಲರ ಆಶಯ. ಪ್ಲಾಸ್ಟಿಕ್ ಆಯುವ ಸಂದರ್ಭದಲ್ಲಿ
ಗೋಕರ್ಣ ಪ್ರಾಥಮಿಕ ಆರೋಗ್ಯಕೇಂದ್ರದ ವೈಧ್ಯಾಧಿಕಾರಿ ಡಾ.ಜಗದೀಶ್ ನಾಯ್ಕ ಸ್ವಚ್ಛತಾ ಕಾರ್ಯ ನಡೆಸಿ, ಜನರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ ಕಸ ವಿಲೇವಾರಿ ಮಾಡಿಸಲು ವಾಹನ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಪುಷ್ಪಹಾಸ ಬಸ್ತಿಕರ, ದಿನೇಶ ಗೌಡ,* ಮಹಾಬಲ ಅಡಿ, ಗಂಗಾಧರ ಅಡಿ, ತಿಲಕ್ ಗೌಡ, ವಿಘ್ನೇಶ್ವರ ಸಭಾಹಿತ, ಹರ್ಷ ಅಡಿ, ಜನಾರ್ಧನ ಅಂಬಿಗ, ಕೌಸ್ತುಬ ಅಡಿ, ರಾಜೇಶ ನಿರ್ವಾಣೇಶ್ವರ, ದರ್ಶನ ಮಹಾಲೆ ಮತ್ತಿತರು ಭಾಗವಹಿಸಿದ್ದರು.
Leave a Comment