
ಶಿರಸಿ ಮಾ8: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳ ನೇತ್ರತ್ವದಲ್ಲಿ ಜಿಲ್ಲಾ ಮಹಿಳಾ ಸಮಾವೇಶ ಶಿರಸಿಯಲ್ಲಿ ಇಂದು ನಡೆಯಿತು. ಸಮಾವೇಶವನ್ನು ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಶುಭಲತಾ ಅಸ್ನೋಟಿಕರ್ ಉದ್ಘಾಟಿಸಿದರು.
ಸಮಾವೇಶದಲ್ಲಿ ಜಿಲ್ಲೆಯಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಪ್ರಚಲಿತ ಪತ್ರಿಕೆ ಪ್ರಧಾನ ಸಂಪಾದಕಿ ಮಮತಾ ನಾಯ್ಕ, ವಾಲಿಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಲಲಿತಾ ನಾಯ್ಕ ಮುಂತಾದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ, ಜಿ ಪಂ ಅಧ್ಯಕ್ಷೆ ಜಯಶ್ರಿ ಮೊಗೆರ್, ಮಾಜಿ ಶಾಸಕ ಜೆ ಡಿ ನಾಯ್ಕ, ಅತಿಕ್ರಮಣದಾರರ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ಸ್ಕೊಡವೆಸ್ ಸಂಸ್ಥೆಯ ವೆಂಕಟೇಶ ನಾಯ್ಕ, ಮಾನವ ಹಕ್ಕು ಮತ್ತು ಬ್ರಷ್ಟಾಚಾರ ನಿರ್ಮೂಲನ ಸಂಘದ ಅಧ್ಯಕ್ಷ ಆಕಾಶ ಎಸ್ ಕೆ ಮುಂತಾದವರು ಉಪಸ್ಥಿತರಿದ್ದರು. ಸಮಾವೇಶದ ಪ್ರಯುಕ್ತ ಜಿಲ್ಲೆಯ ಎಲ್ಲಾ ತಾಲೂಕಿನ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರುಗಳು ಹಾಗೂ ಸದಸ್ಯರು ಆಗಮಿಸಿದ್ದರು.
ಸರಾಯಿ ನಿಷೇದಿಸಬೇಕು ಮತ್ತು ಸ್ತ್ರೀ ಶಕ್ತಿ ಸಂಘದ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕೆನ್ನುವುದು ನೆರೆದಿದ್ದ ಮಹಿಳೆಯರ ಆಗ್ರಹವಾಗಿತ್ತು.

Leave a Comment