
ಶಿರಸಿ :- ಶಿರಸಿ ತಾಲೂಕಿನ ಬಾಳೆಗದ್ದೆ ಬಸ್ ನಿಲ್ದಾಣದಲ್ಲಿ ಅನಾಥ ಮಹಿಳೆಯೊಬ್ಬಳು ಇರುವ ಬಗ್ಗೆ ಇಟಗುಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಬೋವಿ ಅವರಿಂದ ಮಾಹಿತಿ ಪಡೆದ ಸಿದ್ದಾಪುರದ ಪ್ರಚಲಿತ ಆಶ್ರಯ ಧಾಮದವರು ಮಹಿಳೆಯನ್ನು ರಕ್ಷಣೆ ಮಾಡಿ ಶಿರಸಿ ಸಿಡಿಪಿಓ ರವರ ಅನುಮತಿ ಪಡೆದು ಆಶ್ರಮಕ್ಕೆ ಕರೆತರಲಾಗಿದೆ.
ಅನಾಥ ಮಹಿಳೆ ತಮಿಳು, ತೆಲಗು ಮಾತನಾಡುತ್ತಾಳೆ ಹೆಸರು ಗೌತಮಿ ಎಂದು ಹೇಳುತಿದ್ದಾಳೆ. ಈ ಸಂದರ್ಬದಲ್ಲಿ ಗೀತಾ ಬೋವಿ , ಸ್ಥಳಿಯರಾದ ಸುರೇಶ ನಾಯ್ಕ, ಪ್ರಚಲಿತ ಆಶ್ರಯಧಾಮದ ಮೆಲ್ವಿಚಾರಕಿ ಮಮತಾ ನಾಯ್ಕ, ನಾಗರಾಜ ನಾಯ್ಕ ಉಪಸ್ಥಿತರಿದ್ದರು.

ಇವಳನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದು ವೈಧ್ಯಕೀಯ ಪರಿಕ್ಷೆ ನಡೆಸಿ ಆಶ್ರಮಕ್ಕೆ ಕರೆತರಲಾಗಿದೆ ಎಂದು ಮುಖ್ಯಸ್ಥರು
ಪ್ರಚಲಿತ ಆಶ್ರಯಧಾಮ (ಅನಾಥಾಶ್ರಮ) ಮುಗದುರು, ಸಿದ್ದಾಪುರದ ನಾಗರಾಜ ನಾಯ್ಕ ತಿಳಿಸಿದ್ದು ಹೆಚ್ಚಿನ ಮಾಹಿತಿಗಾಗಿ ಮೊ:- 9481389187 ಸಂಪರ್ಕಿಸುವಂತೆ ಕೊರಿದ್ದಾರೆ.

Leave a Comment