ಹೊನ್ನಾವರ: ತಾಲೂಕಿನ ದಿಬ್ಬಣಗಲ್ ಮರಬಳ್ಳಿಯ ಶ್ರೀ ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ದೇವರಿಗೆ ಅಭಿಷೇಕ, ಅರ್ಚನೆ, ಸತ್ಯನಾರಾಯಣ ವೃತಕಥೆ, ನವಗ್ರಹ-ಹವನ, ವಾಸ್ತು ಹವನ ಹಾಗೂ ಮಹಾವಿಷ್ಣು ಹವನ ನೆರವೇರಿತು.
ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವರ ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ವರದರಾಜ ವಾಮನ ಭಟ್ ಹಾಗೂ ವೇ.ಮೂ. ನಾರಾಯಣ ವಾಮನ ಭಟ್ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
Leave a Comment