ದಾಂಡೇಲಿ: ನಗರದ ಅಂಬೇವಾಡಿಯ ಬಲಮುರಿ ಗಣಪತಿ ದೇವರ ವಾರ್ಷಿಕೋತ್ಸವದ ಭಾಗವಾಗಿ ನಗರದ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ಲವ-ಕುಶ’ ಯಕ್ಷಗಾನ ಜನ ಮನವನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣುಮೂರ್ತಿರಾವ್, ಮದ್ದಳೆ ವಾದಕರಾಗಿ ಗಣಪತಿ ಯಲ್ಲಾಪುರ, ಚಂಡೆ ವಾದಕರಾಗಿ ಪ್ರಮೋದ ಯಲ್ಲಾಪುರ ಉತ್ತಮ ಪ್ರದರ್ಶನ ನೀಡಿದರು. ಮುಮ್ಮೇಳದಲ್ಲಿ ರಾಮನಾಗಿ ಬಿ.ಎನ್. ವಾಸರೆ, ಶತ್ರುಘ್ನನಾಗಿ ಸುಂದರ ಶೆಟ್ಟಿ, ಲವನಾಗಿ ಸುಧರ್ಶನ ಹೆಗಡೆ, ಕುಶನಾಗಿ ಸುಬ್ರಾಯ ದಾನಗೇರಿ, ವಾಲ್ಮಿಕಿಯಾಗಿ ಎನ್.ಆರ್. ನಾಯ್ಕ, ಸೀತೆಯಾಗಿ ಗಿರೀಶ ಶಿರೋಡ್ಕರ, ಹಾಸ್ಯ ಪಾತ್ರದಲ್ಲಿ ಸುಬ್ರಹ್ಮಣ್ಯ ನಾಯಕ, ಶರತ್ ಹೆಗಡೆ ಹಾಗೂ ಬಾಲ ಕಲಾವಿದರಾಗಿ ಪ್ರಥ್ವಿರಾಜ ಹೆಬ್ಬಾರ, ಅಭಿಶೇಖ ಹೆಬ್ಬಾರ ಉತ್ತಮ ಅಭಿನಯ ನೀಡಿದ್ದರು.
ಎಲ್ಲ ಕಲವಿದರನ್ನು ಬಲಮುರಿ ಗಣಪತಿ ದೇವಸ್ಥಾನ ಮಂಡಳಿಯವರು ಶಾಲು ಹೊದಿಸಿ ಗೌರವಿಸಿದರು. ಕಲಾಶ್ರೀ ಸಂಸ್ಥೆಯ ಪದಾಧಿಕಾರಿಗಳದ ಸುರೇಶ ಕಾಮತ್, ಗಣೇಶ ಹೆಬ್ಬಾರ್, ಕೀರ್ತಿ ಗಾಂವಕರ, ಪ್ರಮೋದ ಶಾನಭಾಗ ಮುಂತಾದವರು ಸಹಕರಿಸಿದರು.
Leave a Comment