ಹಳಿಯಾಳ: ಜೆಡಿಎಸ್ ಪಕ್ಷದ ಹಳಿಯಾಳ ಘಟಕದ ಅಧ್ಯಕ್ಷ ಸುಭಾಷ ಲೋಕಪ್ಪ ಗೌಡ ತಮ್ಮ ಸ್ಥಾನಕ್ಕೆ ಹಾಗೂ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಕಳೆದ 4 ವರ್ಷಗಳಿಂದ ತಾಲೂಕಿನಾದ್ಯಂತ ನಿಸ್ವಾರ್ಥ ಹಾಗೂ ಪ್ರಾಮಾಣಿಕವಾಗಿ ಪಕ್ಷ ಸಂಘಟಣೆಯಲ್ಲಿ ತೊಡಗಿಕೊಂಡಿದ್ದೇ ಆದರೇ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು, ಮುಖಂಡರ ಅಸಹಕಾರ ಹಾಗೂ ಜಿಲ್ಲಾ ಮುಖಂಡರುಗಳ ವರ್ತನೆಯಿಂದ ಬೇಸರವಾಗಿದ್ದು ಪಕ್ಷದ ರಾಜ್ಯಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಸುಭಾಷ ಗೌಡಾ ತಿಳಿಸಿದ್ದಾರೆ.
Leave a Comment