
ಶಿರಸಿ:– ಕೇಂದ್ರ ಸಚಿವ ಹಾಗೂ ಕೆನರಾ ಲೋಕಸಭಾ ಸಂಸದ ಹಾಲಿ
ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಯವರಿಗೆ ಮತ್ತೊಮ್ಮೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.
ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಶನಿವಾರ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಶೆಟ್ಟಿ ಪೋಲಿಸರಿಗೆ ನಿಡೀದ ದೂರಿನಲ್ಲಿ ನೀನು ಎಷ್ಟು ದಿನ ಅಂತಾ ಪೋಲಿಸರ ರಕ್ಷಣೆಯಲ್ಲಿ ತಿರುಗಾಡುತ್ತಿಯಾ,ನಿನ್ನನ್ನು ಮರ್ಡರ್ ಮಾಡಿಯೇ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆಂದು ವಿವರಿಸಲಾಗಿದೆ.
ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಆಯ್ ಶಿವಕುಮಾರ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಕೇಂದ್ರ ಸಚಿವರಿಗೆ ಈ ರೀತಿ ಮೇಲಿಂದ ಮೇಲೆ ಬೆದರಿಕೆ ಕರೆ ಬರುತ್ತಿರುವುದು ಪೋಲಿಸರಿಗೂ ತಲೆ ಬಿಸಿಯಾಗಿ ಪರಿಣಮಿಸಿದ್ದು ಆದಷ್ಟು ಬೇಗಾ ಆರೋಪಿಯನ್ನು
ಹಿಡಿಯುವ ವಿಶ್ವಾಸ ಪೋಲಿಸರು ವ್ಯಕ್ತ ಪಡಿಸಿದ್ದಾರೆ.
Leave a Comment