• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕರಾವಳಿಯ ಸಿಹಿ ಈರುಳ್ಳಿ

May 1, 2019 by Gaju Gokarna Leave a Comment

Sweet onion on the coast

ಹೊನ್ನಾವರ . ಮಾರ್ಚ ತಿಂಗಳ ಮಧ್ಯದಿಂದ ಮೇ ತಿಂಗಳ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುವವರಿಗೆ ಅಳ್ವೇಕೋಡಿ ಊರಿನ ರಸ್ತೆಯ ಬದಿಯಲ್ಲಿ ಕೆಂಪು ಹಾಗೂ ಬಿಳಿ ಬಣ್ಣದ ಈರುಳ್ಳಿಗಳ ಪೊತ್ತೆ ಪೊತ್ತೆಗಳು ಕಾಣಸಿಗುತ್ತದೆ. ಉಳಿದೆಡೆ ಸಿಗುವ ಈರುಳ್ಳಿಗಳಿಗೂ ಈ ಕರಾವಳಿಯ ಈರುಳ್ಳಿಗೂ ವ್ಯಾತ್ಯಾಸವಿದೆ. ಈ ಈರುಳ್ಳಿ ಸಿಹಿ ಆಗಿದ್ದು ಖಾರ ಕಡಿಮೆ. ಇದರ ಸವಿಯೋ ಬೇರೆ.

ತುಂಡು ಗದ್ದೆಯಲ್ಲಿ ಮಡಿ ಮಾಡಿ, ಬೀಜ ಬಿತ್ತಿ ಸಸಿ ಮಾಡಿ ನೆಟ್ಟು ಈರುಳ್ಳಿ ಬೆಳೆಯುತ್ತಾರೆ. ಸುಮಾರು ಮೂರು ತಿಂಗಳಲ್ಲಿ ಬೆಳೆ ಬರುವ ಈ ಕೃಷಿ ರೈತರ ಶ್ರಮವನ್ನು ಬೇಡುತ್ತದೆ. ಬೀಜ ಚಿಗುರೊಡೆಯುವದರೊಂದಿಗೆ ನೀರುಣಿಸುವುದು, ಕೊಟ್ಟಿಗೆ-ಜೈವಿಕ ಗೊಬ್ಬರ ಒದಗಿಸುವುದು ಮತ್ತು ಅದರ ನಡುವಿನ ಕಳೆಕಿತ್ತು, ದನಕರುಗಳಿಂದ ರಕ್ಷಿಸುವುದರ ವರೆಗೆ. ಈರುಳ್ಳಿಯ ಬೀಜಗಳು ಕಪ್ಪು ಬಣ್ಣದ ಸಣ್ಣ ಹರಳಿನಂತಿರುತ್ತವೆ. ಆ ಬೀಜಗಳನ್ನೇ ಬಿತ್ತಿ ಸಸಿ ಮಾಡುತ್ತಾರೆ. ಈ ಬೀಜಗಳ ರಕ್ಷಣೆ ಮಾಡುವುದು ದೊಡ್ಡ ಸಾಹಸದ ಕಾರ್ಯ. ಬೀಜದ ಬಣ್ಣ ಒಂದೇ ಇದ್ದರೂ ಕೆಲವು ಬಿಳಿಯ ಈರುಳ್ಳಿ ಹಾಗೂ ಕೆಲವು ಕೆಂಪು ಈರುಳ್ಳಿ ಬೆಳೆಯುತ್ತದೆ. ಒಂದು ಗಿಡಕ್ಕೆ ಒಂದೇ ಈರುಳ್ಳಿ. ಅದನ್ನು ಕಿತ್ತು ಅದರ ‘ಜುಟ್ಟ’ದಸಮೇತ ಒಂದೊಂದು ಹೆಣೆದು ಪೊತ್ತೆ ಮಾಡಿ ಮಾರಾಟಕ್ಕೆ ಇಡುತ್ತಾರೆ. ಬೀಜ ಒಂದೇ ರೀತಿ ಆದರೂ ಬಿಳಿ ಬಣ್ಣದ ಹಾಗೂ ಕೆಂಪು ಬಣ್ಣದ ಈರುಳ್ಳಿ ಆಗಿ ಹುಟ್ಟುವುದು ಒಂದು ಅದೃಷ್ಟದ ಆಟ. ಕೆಂಪು ಈರುಳ್ಳಿಗಿಂತ ಬಿಳಿಯ ಈರುಳ್ಳಿ ಇಳುವರಿ ಕಡಿಮೆ ಇರುತ್ತದೆ. ಆದರೆ ಕೆಂಪದಕ್ಕಿಂತ ಬಿಳಿ ಬೆಲೆ ಒಂದೂವರೆ ಪಟ್ಟು ಹೆಚ್ಚಿರುತ್ತದೆ.
ಮಾರ್ಚ ಕೊನೆಯಲ್ಲಿ ಇದರ ಮಾರಾಟ ಆರಂಭವಾಗಿ ಮೊದಲ ಮಳೆಯವರೆಗೆ ಮುಂದುವರಿಯುತ್ತದೆ. ಮಾರ್ಚ ತಿಂಗಳಲ್ಲಿ ನಡೆಸಿದ ಖರೀದಿಯ ಈರುಳ್ಳಿ ಮೇ ವರೆಗೆ ಇರಿಸಿದರೆ 100 ಕೆ.ಜಿಗೆ 10 ಕೆ.ಜಿ ತೂಕ ಕಡಿಮೆ ಬರುತ್ತದೆ. ಆದರೆ ಮೇ ತಿಂಗಳಲ್ಲಿ ಇದರ ಬೆಲೆ ಹೆಚ್ಚಾಗುವುದರಿಂದ ಈ ಕೊರತೆ ತುಂಬುತ್ತದೆ. ಡಿಸೆಂಬರ ಅಂತ್ಯದಿಂದ ಜನವರಿ ಮಧ್ಯದವರೆಗೆ ಸ್ವಲ್ಪ-ಸ್ವಲ್ಪ ದಿನ ಬಿಟ್ಟು ಬಿತ್ತನೆ ಮಾಡಿ ಮಾರ್ಚ ಅಂತ್ಯದಿಂದ ಎಪ್ರಿಲ್ ಅಂತ್ಯದವರೆಗೆ ಕೀಳುವಂತೆ ಕೆಲವರು ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅಕಾಲಿಕ ಮಳೆಯಿಂದ ತೊಂದರೆ ಬೇಡ ಎನ್ನುವವರು ಒಮ್ಮಲೆ ಬಿತ್ತನೆ ಮಾಡಿ ಮೋದಲೇ ಬೆಳೆ ತೆಗೆಯುತ್ತಾರೆ. ಏನೇ ಇದ್ದರೂ ಈ ಈರುಳ್ಳಿಯನ್ನು ಒಮ್ಮೆ ತಿನ್ನಲೇಬೇಕು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Trending Tagged With: Alwaykodi, bedding, coastal Kumta. Honnavar National Highway, coastal onions, coastal sweet onions, on the side of the road, onion growing, Onion seeds are black, onions, planted, Pots of potatoes, red and white onions, small granular, sown, ಅಳ್ವೇಕೋಡಿ ಊರಿನ ರಸ್ತೆಯ ಬದಿಯಲ್ಲಿ, ಈರುಳ್ಳಿ ಬೆಳೆಯುತ್ತಾರೆ, ಈರುಳ್ಳಿಗಳ ಪೊತ್ತೆ, ಈರುಳ್ಳಿಯ ಬೀಜಗಳು ಕಪ್ಪು ಬಣ್ಣದ, ಕರಾವಳಿಯ ಈರುಳ್ಳಿ, ಕರಾವಳಿಯ ಕುಮಟಾ.ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ಕರಾವಳಿಯ ಸಿಹಿ ಈರುಳ್ಳಿ, ಕೆಂಪು ಹಾಗೂ ಬಿಳಿ ಬಣ್ಣದ ಈರುಳ್ಳಿಗಳ ಪೊತ್ತೆ, ತುಂಡು ಗದ್ದೆಯಲ್ಲಿ ಮಡಿ ಮಾಡಿ, ನೆಟ್ಟು, ಪೊತ್ತೆಗಳು, ಬೀಜ ಬಿತ್ತಿ ಸಸಿ ಮಾಡಿ, ಸಣ್ಣ ಹರಳಿನಂತಿರುತ್ತವೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...