ಹೊನ್ನಾವರ ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ 84.54 ಆಗಿದೆ. 97 ವಿದ್ಯಾರ್ಥಿಗಳಲ್ಲಿ 82 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 11 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು 63 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಗುಣಮಟ್ಟದ ಫಲಿತಾಂಶ ಬಂದಿರುತ್ತದೆ. ಕುಮಾರಿ ಕಾವ್ಯಾ ಮಾಸ್ತಿ ಗೌಡ ಶೇ 95.20 ಅಂಕ ಪಡೆದು ಪ್ರಥಮ ಸ್ಥಾನ, ಕುಮಾರಿ ಸಿಂಧು ದೇವಿದಾಸ ಗುನಗಾ ಶೇ 94.56 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಮತ್ತು ಕುಮಾರಿ ಸಹನಾ ಶಂಕರ ನಾಯ್ಕ ಶೇ 94.40 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಶಾಲೆಯ ಫಲಿತಾಂಶ ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರು, ನಿರ್ದೇಶಕರು ಮತ್ತು ಊರ ನಾಗರಿಕರು ಅಭಿನಂದಿಸಿರುತ್ತಾರೆ.
Leave a Comment