ಹೊನ್ನಾವರ .ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಮೊಹಮ್ಮದ ರೋಶನ್ ರವರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ನಿರ್ವಹಣೆಗಾಗಿ ಕಾರ್ಯಪ್ರವೃತ್ತರಾಗಿದ್ದು, ವಿವಿಧ ತಾಲೂಕುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಸಲಹೆಯಂತೆ ನಿರಂತರ ಭೇಟಿ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿರುವುದನ್ನು ಗಮನಿಸಿ ವಿವಿಧ ಸ್ಥಳಗಳಿಗೆ ಸ್ವತ: ತಾವೇ ಭೇಟಿ ನೀಡಿ ಗ್ರಾಮೀಣ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಇಂದು ಹೊನ್ನಾವರ ತಾಲೂಕಿನ ನಗರಬಸ್ತಿಕೇರಿಗೆ ಭೇಟಿ ನೀಡಿ ಅಲ್ಲಿಯ ನೀರಿನ ಸಮಸ್ಯೆಯ ಬಗ್ಗೆ ಸರ್ವಜನಿಕರೊಂದಿಗೆ ಚರ್ಚಿಸಿದರು. ಹಾಗೂ ತಹಶೀಲದಾರ ಮಂಜುಳಾ ಭಜಂತ್ರಿ ,ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಜಿ. ನಾಯ್ಕ, ಎಇಇ ಎಂ.ವಿ.ಹೆಗಡೆ, ತಾ.ಪಂ. ವ್ಯವಸ್ಥಾಪಕರಾದ ಜಿ.ಎಲ್.ನಾಯ್ಕ ಮತ್ತು ಪಿಡಿಓ ಈರಪ್ಪ ಲಮಾಣಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮವಹಿಸಲು ಸಲಹೆ ನೀಡಿದರು. ಹಾಗೂ ತಾಲೂಕಿನ ಇಡಗುಂಜಿ ಪಂಚಾಯತಕ್ಕೆ ಭೇಟಿನೀಡಿದಾಗ ನೀಡಿದ ಸಲಹೆಯನ್ನು ಪರಿಶೀಲಿಸಿ ಅಧಿಕಾರಿಗಳು ಕೈಗೊಂಡ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಇಓ ರವರ ಈ ರೀತಿಯ ಜನಪರ ಕಾಳಜಿಯ ಗ್ರಾಮೀಣ ನಡಿಗೆಯು ಹೊನ್ನಾವರ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.
Leave a Comment