ಹೊನ್ನಾವರ . ಕರಾಟೆ ಡೂ ಕೆನರಿಯೊಖಾನ್ ಶೋಟಾಖಾನ್ ಸ್ಟೈಲ್ ಇಂಡಿಯಾ ಇವರು ಕುಮಟಾದಲ್ಲಿ ಏರ್ಪಡಿಸಿದ ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಬಹುಕಲಾ ವಲ್ಲಭೆ “ಬಾಲಕಲಾ ಪ್ರವೀಣೆ” ಪ್ರಶಸ್ತಿ ವಿಜೇತೆ ಕುಮಾರಿ ಶ್ರೀಶಾ ಹರಿಕಾಂತ ಇವಳು ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ದ್ವಿತೀಯ ಬ್ಲ್ಯಾಕ್ ಬೆಲ್ಟ್ ಹಾಗೂ ಪ್ರಶಸ್ತಿ ಪತ್ರವನ್ನು ಜಪಾನ್ ಕರಾಟೆ ಶಿಕ್ಷಕರಿಂದ ಪಡೆಯುತ್ತಿರುವ ಉತ್ತರಕನ್ನಡದ ಮೊದಲ ಅತ್ಯಂತ ಕಿರಿಯ ಬಾಲಕಿಯಾಗಿರುತ್ತಾಳೆ. ಈ ಹಿಂದೆಯೂ ಜಪಾನ್ ಶಿಕ್ಷಕರಿಂದ ಪ್ರಥಮ ಬ್ಲ್ಯಾಕ್ ಬೆಲ್ಟ್ ಹಾಗೂ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾಳೆ. ಇವಳಿಗೆ ಸಿಹಾನ್ ಬಿ ರಮೇಶ ಬೆಂಗಳೂರು ಬ್ಲ್ಯಾಕ್ ಬೆಲ್ಟ್ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಿದರು. ಈ ಹಿಂದೆ ಇವಳು ಕರಾಟೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ( ಶ್ರೀಲಂಕಾ) ಮಟ್ಟದಲ್ಲಿ ಬಂಗಾರ ಪದಕವನ್ನು ಗೆದ್ದಿರುತ್ತಾಳೆ. ಇವಳು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಹಾಗೂ ಚಿತ್ರಕಲೆಯಲ್ಲಿಯೂ ಕೂಡ ಗುರುತಿಸಿಕೊಂಡಿರುತ್ತಾಳೆ. ಇವಳ ಈ ಸಾಧನೆಗೆ ಕರಾಟೆ ಶಿಕ್ಷಕರಾದ ಸಿಹಾನ್ ಬಿ ರಮೇಶ ಬೆಂಗಳೂರು, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿತ್ಯಾನಂದ್ ಕೆಮ್ಮಣ್ಣು ಉಡುಪಿ, ರಾಜ್ಯ ಕರಾಟೆ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ವಿಶಾಲ್ ನಾಯ್ಕ ಕಾರವಾರ, ತರಬೇತುದಾರರಾದ ಸೆನ್ ಸಾಯಿ ದಯಾನಂದ ನಾಯ್ಕ ಕುಮಟಾ ಹಾಗೂ ಹಿತೈಶಿಗಳು ಅಭಿನಂದಿಸಿದ್ದಾರೆ.
Leave a Comment