• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ; ಶಾಸಕ ದಿನಕರ ಶೆಟ್ಟಿ

May 20, 2019 by Gaju Gokarna Leave a Comment

watermarked hnr 20 ಹೊನ್ನಾವರ 2019.

ಹೊನ್ನಾವರ: ಹೊಸಾಕುಳಿಯ ಜನ ನಮ್ಮ ಜೊತೆ ಅಧಿಕಾರ ಇದ್ದಾಗಲೂ ಅಧಿಕಾರ ಇಲ್ಲದಾಗಲೂ ಅಭಿಮಾನ ತೋರಿದ್ದಾರೆ. ಅವರ ಆಕಾಂಕ್ಷೆಗಳಿಗೆ ಖಂಡಿತ ಸ್ಪಂದಿಸುತ್ತೇನೆ. ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಹುದು. ಅದರಲ್ಲೂ ನನ್ನ ಕ್ಷೇತ್ರ ಇವತ್ತು ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು.

ತಾಲೂಕಿನ ಹೊಸಾಕುಳಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆದ ಹೊಸಾಕುಳಿಯ ಹಳ್ಳಿಗೊಂದು ಘನತೆ ತಂದ ಹುಡುಗಿಯರು… ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದ ಜನತೆ ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಸಂತೇಗುಳಿಯ ಕ್ರೀಡಾಂಗಣವನ್ನು ಉನ್ನತ ದರ್ಜೆಗೇರಿಸುವಲ್ಲಿ ಸರ್ವಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.

ಕಾರ್ಯಕ್ರಮದಲ್ಲಿ ಉಪಸ್ಥತಿ ವಹಿಸಿದ್ದ ಕರಿಕಾನಮ್ಮ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ಟ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಇಲ್ಲಿಗೆ ನಿಲ್ಲದೇ ನಾವು ನಿಮ್ಮನ್ನು ಪದೇ ಪದೇ ಸನ್ಮಾನಿಸುವಂತಹ ಸಾಧನೆ ತೋರಿ ಸಮಾಜಕ್ಕೆ ಹೆಸರು ತರಬೇಕು ಎಂದು ಹಾರೈಸಿದರು.

ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ ವಿದ್ಯಾರ್ಥಿಗಳು ವಿದ್ಯೆಯ ಜೊತೆ ವಿನಯವಂತರಾಗಿ ದೇಶಸೇವೆಗೆ ಮುಂದಾಗಬೇಕೆಂದುರು..

ಪ್ರಕೃತಿಯೇ ನಮ್ಮ ಮೊದಲ ಗುರು. ನಮ್ಮ ವಿದ್ಯಾರ್ಥಿಗಳಿಗೆ ಅಂಕಗಳಿಕೆಯೊಂದೇ ಮುಖ್ಯವಲ್ಲ ಬದುಕಿನಲ್ಲೂ ಗೆಲ್ಲಬೇಕೆಂದು ಡಾ|| ಸಂಧ್ಯಾ ಹೆಗಡೆ ದೊಡ್ಡಹೊಂಡ ಅಭಿಪ್ರಾಯಪಟ್ಟರು.

ಸಭಾಧ್ಯಕ್ಷತೆ ವಹಿಸಿದ್ದ ಡಾ. ಶ್ರೀಪಾದ ಶೆಟ್ಟಿ ಮಾತನಾಡುತ್ತಾ ನಮ್ಮದು ಹೊಸಾಕುಳಿ ಪಂಚಗ್ರಾಮ ಇಲ್ಲಿನ ಜನರಲ್ಲಿ ವೈಚಾರಿಕತೆಯ ಪ್ರವಾಹವಿದೆ. ಸತ್ವವಿದೆ. ಕಷ್ಟದಲ್ಲೂ ಆತ್ಮೀಯತೆ ಬಿಟ್ಟು ನಡೆಯದ ಸಂಸ್ಕಾರ ನಮ್ಮವರದ್ದು. ವಿದ್ಯಾರ್ಥಿನಿಯರು ಇನ್ನೂ ಕೀರ್ತಿವಂತರಾಗಿ ಬೆಳೆಯಲಿ. ಇದೊಂದು ಸದಭಿರುಚಿಯ ಸದ್ಭಾವದ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.

ಯುವ ಉತ್ಸಾಹಿ ಗಣೇಶ ಜೋಷಿ, ವಿ.ಎಸ್.ಎಸ್.ಅಧ್ಯಕ್ಷ ಪ್ರಕಾಶ ಹೆಗಡೆ, ಶಿಲ್ಪಿ ಅರುಣ ಆಚಾರಿ ಕವಲಕ್ಕಿ ಮಾತನಾಡಿದರು.

ಅಭಿನಂದಿಸಿ ಮಾತನಾಡಿದ ಯುವ ಸಾಹಿತಿ, ಸಂಘಟಕ ಸಂದೀಪ ಭಟ್ಟ ಹೊಸಾಕುಳಿಯಲ್ಲಿ ಸಾಂಸ್ಕೃತಿಕ ಬೌದ್ಧಿಕ ಪರಂಪರೆ ಇಂದು ನಿನ್ನೆಯದಲ್ಲ, ಇಲ್ಲಿನ ಜನ ಆರ್ಥಿಕತೆಯ ಸಂಕಷ್ಟ ಪರಿಸ್ಥಿತಿಯನ್ನೂ ಮೀರಿ ತಮ್ಮ ಶೃದ್ಧೆಯಿಂದ ಮೇಲೇರಿ ಬಂದವರು. ಬರೀ ಇತಿಹಾಸವನ್ನಷ್ಟೇ ಸಂಭ್ರಮಿಸುವವರಾಗದೇ ಭವಿಷ್ಯದಲ್ಲಿ ನಮ್ಮ ಊರಿನ ಮಕ್ಕಳು ಆರಕ್ಷಕರಾಗಿ, ವೈದ್ಯರಾಗಿ, ಅಭಿಯಂತರರಾಗಿ, ಕೃಷಿಕರಾಗಿ, ವಿಜ್ಞಾನಿಗಳಾಗಿ, ಡೆಂಟಿಸ್ಟರಾಗಿ, ಸಮಾಜಕ್ಕೆ ನೆರವಾಗಬೇಕೆಂದರು.

ಅದ್ಭುತ ಸಾಧನೆ ಮಾಡಿದ ಅಂಕಿತಾ ಶ್ರೀಧರ ಭಟ್ಟ, ಕಾವ್ಯಾ ಎಂ ಭಟ್ಟ, ನಯನಾ ಗಣಪತಿ ಹೆಗಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಸಂಘಟಕ ಎಚ್.ಆರ್. ಗಣೇಶ ಸ್ವಾಗತಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Ganesh Joshi, Identification by Students, Karikanamma Temple, MLA Dinakar Shetty, nature is our first Guru. Speaking to our students, Positive Responsible MLAs, Shilpi Aruna Achary Kavalakki, Shri Education, Shri KK Shastri, Speaking, Stadium, Students Performance, Students Vidyaya, Subrahmanya Bhatta Speaking, VSS President Prakash Hegde, we are the Hosakuli Panchagram, Young enthusiast, ಉನ್ನತ ದರ್ಜೆಗೇರಿಸು, ಕರಿಕಾನಮ್ಮ ದೇವಾಲಯ, ಗಣೇಶ ಜೋಷಿ, ನಮ್ಮದು ಹೊಸಾಕುಳಿ ಪಂಚಗ್ರಾಮ, ಪ್ರಕೃತಿಯೇ ನಮ್ಮ ಮೊದಲ ಗುರು. ನಮ್ಮ ವಿದ್ಯಾರ್ಥಿಗಳಿಗೆ ಅಂಕ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ಟ, ಮಾತನಾಡಿ, ಯುವ ಉತ್ಸಾಹಿ, ವಿ.ಎಸ್.ಎಸ್.ಅಧ್ಯಕ್ಷ ಪ್ರಕಾಶ ಹೆಗಡೆ, ವಿದ್ಯಾರ್ಥಿಗಳ ಸಾಧನೆ, ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ, ವಿದ್ಯಾರ್ಥಿಗಳು ವಿದ್ಯೆ, ಶಾಸಕ ದಿನಕರ ಶೆಟ್ಟಿ, ಶಿಲ್ಪಿ ಅರುಣ ಆಚಾರಿ ಕವಲಕ್ಕಿ, ಶ್ರೀಕಲಾ ಶಾಸ್ತ್ರಿ, ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಸಂತೇಗುಳಿಯ ಕ್ರೀಡಾಂಗಣ, ಸರ್ವಪ್ರಯತ್ನ, ಸಂಸ್ಕಾರವಿಲ್ಲದ ಶಿಕ್ಷಣ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...