• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಹವಗಿ ಗ್ರಾಮಕ್ಕೆ ಜೈನ ಮುನಿಗಳ ಭೇಟಿ

June 2, 2019 by Yogaraj SK Leave a Comment

 JAIN SWAMIJI haliyal pura pravesha

ಹಳಿಯಾಳ:- ಜೈನ ಪರಂಪರೆಯ 50 ಜನ ತ್ಯಾಗಿ ವೃಂದ ಮುನಿಗಳು ಹಾಗೂ ಮಾತಾಜಿಗಳು ಹಳಿಯಾಳ ಪುರವನ್ನು ಪ್ರವೇಶಿಸಿದ್ದು ತಾಲೂಕಿನ ಹವಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ತಂಗಿದ್ದಾರೆ. 2ನೇ ಬಾರಿಗೆ ಶ್ರೀಗಳು ಹಳಿಯಾಳಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪ್ರಮುಖರಾದ ಧರಣೆಂದ್ರ ಶಾಸ್ತ್ರಿ ಹಾಗೂ ಮನೋಜ ಚಿಣಗಿ ಯಲ್ಲಾಪುರ ಮಾರ್ಗವಾಗಿ ಪಾದಯಾತ್ರೆಯ ಮೂಲಕ ಭಾಗವತಿ, ಸಾಂಬ್ರಾಣಿ, ಕೆಸರೊಳ್ಳಿ ಮಾರ್ಗವಾಗಿ ಜೈನ ಸಮುದಾಯದವರು ಹೆಚ್ಚಾಗಿ ವಾಸಿಸುವ ಹಾಗೂ ಜೈನ ಬಸದಿಗಳು ಇರುವ ಹಳಿಯಾಳದ ಹವಗಿ ಗ್ರಾಮಕ್ಕೆ ಮುನಿಗಳು ಭೇಟಿ ನೀಡಿದ್ದು ಬಸದಿಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೆರಿಸಲಾಯಿತು ಎಂದರು.

 JAIN SWAMIJI haliyal pura pravesha
ಇನ್ನೂ ಶ್ರೀಗಳ ಪ್ರವಾಸದ ಕುರಿತು ಮಾಹಿತಿ ನೀಡಿದ ಅವರು 20ನೇ ಶತಮಾನದ ಪ್ರಥಮಾಚಾರ್ಯ ಆಚಾರ್ಯ ಶ್ರೀಶಾಂತಿಸಾಗರ ಮಹಾರಾಜರ ಪರಂಪರೆಯ ಪಂಚಮ ಪಟ್ಟಾಧೀಶ ಆಚಾರ್ಯ ವರ್ಧಮಾನಸಾಗರ ಮಹಾರಾಜರು 2 ವರ್ಷದ ಹಿಂದೆ ಉತ್ತರ ಭಾರತದಿಂದ ದಕ್ಷಿಣದ ಭಾರತದ ಕಡೆ ಆಗಮಿಸಿದ್ದರು. ಅವರ ನೇತೃತ್ವದಲ್ಲಿ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಮಹಾ ಮಸ್ತಕಾಭಿಷೇಕ ನೆರವೆಸಲಾಗಿತ್ತು.
ಆ ಬಳಿಕ ಶ್ರೀಗಳು ಮೂಡಬಿದ್ರೆ, ಕಾರ್ಕಳ, ವರಂಗಾ, ಹೊಂಬುಜ ಜೈನ ಮಠ, ಎನ್.ಆರ್.ಪುರ ಕ್ಷೇತ್ರ, ಜ್ವಾಲಾಮಾಲಿನಿ ಕ್ಷೇತ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೊಂದಾ ಮಠದಲ್ಲಿ ತಂಗಿ ಅಲ್ಲಿಂದ ಯಲ್ಲಾಪುರ ಮಾರ್ಗವಾಗಿ ಹಳಿಯಾಳದ ಹವಗಿಗೆ ಆಗಮಿಸಿದ್ದಾರೆಂದರು.
ಆಚಾರ್ಯ ಶಾಂತಿಸಾಗರ ಮಹಾರಾಜರು ದಿಕ್ಷೆ ಪಡೆದ ಸ್ಥಳವಾದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯನ್ನಾಳ ಗ್ರಾಮದಲ್ಲಿ ಮಳೆಗಾಲದಲ್ಲಿ 4 ತಿಂಗಳ ಕಾಲ ವರ್ಧಮಾನಸಾಗರ ಮಹಾರಾಜರ ನೇತೃತ್ವದಲ್ಲಿ ಚಾತುರ್ಮಾಸ ನೆರವೆರಲಿದೆ. ಶುಕ್ರವಾರ ಶ್ರೀಗಳು ಮತ್ತೇ ಪ್ರಯಾಣ ಬೆಳೆಸಲಿದ್ದು ಬೆಳಗಾವಿ ಮೂಲಕ ಯನ್ನಾಳ ಗ್ರಾಮ ತಲುಪಲಿದ್ದಾರೆ ಎಂದು ತಿಳಿಸಿದರು.
25 ಜನ ದಿಗಂಬರ ತ್ಯಾಗಿ, 25ಜನ ಮಾತಾಜಿ ಒಟ್ಟೂ 50 ಜನ ತ್ಯಾಗಿ ವೃಂದ ಹಾಗೂ 150 ಜನ ಸೇವಾ ವೃಂದದವರು ಈ ಪಾದಯಾತ್ರೆಯಲ್ಲಿದ್ದಾರೆಂದು ಶಾಸ್ತ್ರಿ ಹಾಗೂ ಚಿಣಗಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

JAIN SWAMIJI haliyal pura pravesha

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 50 ಜನ ತ್ಯಾಗಿ ವೃಂದ ಮುನಿಗಳು, JAIN SWAMIJI haliyal pura pravesha, ಎನ್.ಆರ್.ಪುರ ಕ್ಷೇತ್ರ, ಕಾರ್ಕಳ, ಕೆಸರೊಳ್ಳಿ ಮಾರ್ಗವಾಗಿ ಜೈನ ಸಮುದಾಯದವರು, ಜೈನ ಪರಂಪರೆಯ, ಜೈನ ಮುನಿಗಳ ಭೇಟಿ, ಜ್ವಾಲಾಮಾಲಿನಿ ಕ್ಷೇತ್ರ, ಪ್ರಥಮಾಚಾರ್ಯ ಆಚಾರ್ಯ, ಮಹಾ ಮಸ್ತಕಾಭಿಷೇಕ, ಮಹಾಮಸ್ತಕಾಭಿಷೇಕ, ಮಹಾರಾಜರ ಪರಂಪರೆ, ಮಾತಾಜಿಗಳು ಹಳಿಯಾಳ ಪುರ, ಮೂಡಬಿದ್ರೆ, ವರಂಗಾ, ಶ್ರೀಕ್ಷೇತ್ರ ಧರ್ಮಸ್ಥಳದ, ಶ್ರೀಶಾಂತಿಸಾಗರ, ಸಾಂಬ್ರಾಣಿ, ಹಳಿಯಾಳದ ಹವಗಿ ಗ್ರಾಮಕ್ಕೆ, ಹೊಂಬುಜ ಜೈನ ಮಠ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...