• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಾಂಡೇಲಿ ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವ ದೇಶಪಾಂಡೆಗೆ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯಿಂದ ಮನವಿ

June 26, 2019 by Yogaraj SK Leave a Comment

watermarked DANDELI 2

ದಾಂಡೇಲಿ:- ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯು ದಾಂಡೇಲಿ ನಗರದ ವಿವಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ.ದೇಶಪಾಂಡೆಯವರಿಗೆ ಮನವಿ ಸಲ್ಲಿಸಿ ಬಳಿಕ ಸಚಿವರೊಂದಿಗೆ ಮನವಿಯ ಮೇಲೆ ಸುಧೀರ್ಘ ಚರ್ಚೆ ನಡೆಸಲಾಯಿತು.
ಕುಡಿಯುವ ನೀರಿನ ಕರ ಆಕರಣೆ ಮಾಡಿದ ಕುರಿತು ರಾಜ್ಯಾದಂತ್ಯ ಒಂದೇ ಕರ ಇದೆ ಎಂದು ತಿಳಿಸಿದಾಗ ಸಮಿತಿಯವರು ತಿಳಿಸಿದ್ದು ನಗರ ಸಭೆಯವರು ಸರಕಾರದ ಸುತ್ತೋಲೆಯ ಪ್ರಕಾರ ನೀರಿನ ಕರ ಆಕರಣೆ ಮಾಡಿದ್ದು ಇರುವದಿಲ್ಲ. ಅವೈಜ್ಞಾನಿಕ ವಾಗಿದೆ ಎಂದು ಸಮೀತಿಯ ಅಧ್ಯಕ್ಷ ಅಕ್ರಂ ಖಾನ್ ಸಚಿವರಿಗೆ ತಿಳಿಸಿದರು.
ಮಹೇಂದ್ರ ಜೈನ್ ವರದಿ ಜಾರಿಗೆ ಮಾಡಲು ತಿಳಿಸಿದಾಗ ಮಂತ್ರಿಯವರು ಈಗಾಗಲೇ ಸರಕಾರವು ವಿ.ಟಿ.ಯು ನಂತಹ ಅನೇಕ ಯೋಜನೆಗಳು ತರಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು ಈಗಾಗಲೇ ದಾಂಡೆಲಿ ತಾಲೂಕು ಘೋಷಣೆಯಾಗಿದ್ದು ಪೂರ್ಣ ಪ್ರಮಾಣದ ಕಚೇರಿಗಳು ಕಾರ್ಯಾರಂಭ ಮಾಡದ ಕುರಿತು ತಿಳಿಸಿದಾಗ ಸಚಿವರು ಈಗಾಗಲೇ ರಾಜ್ಯದಲ್ಲಿ 50 ಕ್ಕಿಂತ ಹೆಚ್ಚಿಗೆ ತಾಲೂಕಿಗೆ ಘೋಷಣೆಯಾಗಿವೆ ನಾವು ಎಲ್ಲಾ ಇಲಾಖೆಗಳ ಕಚೇರಿಯನ್ನು ಪ್ರಾರಂಭಿಸಲು ಪ್ರಯತ್ನ ನಡೆಸಿದ್ದೇವೆ ಎಂದರು.
ನಗರದ ಸಾರ್ವಜನಿಕರ ಮನೆ ಮಾಲೀಕತ್ವ ದ ಬಗ್ಗೆ ಚರ್ಚಿಸಿದಾಗ ಈಗಾಗಲೇ ಮನೆ ನಿವೇಶನ ಮಾಲೀಕತ್ವ 5 ವರ್ಷ ಮತ್ತು 99 ವರ್ಷದ ಲೀಸ್ನ ಬಗ್ಗೆ ಸೂಕ್ತ ಕ್ರಮ ವಹಿಸುವದಾಗಿ ತಿಳಿಸಿ ಅಲ್ಲಿ ಉಪಸ್ಥಿತರಿದ್ದ ನಗರ ಸಭೆಯ ಪೌರಾಯುಕ್ತರಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಸರಕಾರಕ್ಕೆ ಕಳುಹಿಸಲು ಸೂಚಿಸಿದರು.
ದಾಂಡೇಲಿಯ ಜೈ ಹಿಂದ್ ಸ್ವಾಮಿಲ್‍ನ್ನು ಪುನಸ್ಚೇತನಗೊಳಿಸಿ ಸುಮಾರು 200 ಜನಕ್ಕೆ ಉದ್ಯೋಗ ಒದಗಿಸಿಕೊಡಲು ಕೇಳಿಕೊಂಡಾಗ ಸರಕಾರದ ಮಟ್ಟದಲ್ಲಿ ಕ್ರಮ ವಹಿಸುವದಾಗಿ ತಿಳಿಸಿದರು.
10 ಹಾಸಿಗೆಯ ಆಯುಷ್ ಆಸ್ಪತ್ರೆಯನ್ನು ಹಳೇ ದಾಂಡೇಲಿಯಲ್ಲಿ ಪ್ರಾರಂಭಿಸಬೇಕು ಎಂದಾಗ ನೀವೇಶನದ ಕೊರತೆಯಿಂದಾಗಿ ಆಗಲಿಲ್ಲ ನಗರ ಸಭೆ ಆಯುಕ್ತರನ್ನು ಕೆರೆಸಿ ಹಳೆ ದಾಂಡೇಲಿಯಲ್ಲಿ ನಿವೇಶನ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಸಚಿವರು ತಿಳಿಸಿದರು. ಕುಡಿಯುವ ನೀರು ಮಲಿನವಾಗುತ್ತಿದೆ ಎಂದು ತಿಳಿಸಿದಾಗ ಆಯುಕ್ತರಿಗೆ ಆದಷ್ಟು ಬೇಗನೆ ಸೂಕ್ತ ಕ್ರಮ ವಹಿಸಬೇಕಾಗಿ ತಿಳಿಸಿದರು. ನಗರ ಯೋಜನಾ ಪ್ರಾಧಿಕಾರ ಕಚೇರಿಯನ್ನು ಪ್ರಾರಂಬಿಸಲು ಕೆಳಿಕೊಂಡಾಗ ಇದರ ಬಗ್ಗೆ ಕ್ರಮ ವಹಿಸುವದಾಗಿ ತಿಳಿಸಿದರು.
ನಗರ ಸಭೆ ಸಿಬ್ಬಂಧಿಯ ಕೊರತೆಯ ಬಗ್ಗೆ ಗಮನ ತಂದಾಗ ಸಚಿವರು ಪೌರಾಯುಕ್ತಕರಿಗೆ ಸಿಬ್ಬಂದಿ ಕೊರತೆಯ ಬಗ್ಗೆ ಮಾಹಿತಿ ಕಳುಹಿಸಲು ತಿಳಿಸಿದರು. ಈ ಹಿಂದೆ ಗೃಹ ಮಂಡಳಿಯವರು ಕಳೆದ ನಾಲ್ಕು ವರ್ಷದ ಹಿಂದೆ ನಿವೇಶನ ನೀಡುತ್ತೇವೆಂದು ಸಾರ್ವಜನಿಕರಿಂದ ಹಣ ಸಂಗ್ರಹಿಸಿಕೊಂಡಿದ್ದರು ಎಂದು ಸಚಿವರ ಗಮನಕ್ಕೆ ತಂದಾಗ ಈಗಾಗಲೇ 12 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದರು.
ಸರಕಾರಿ ಆಸ್ಪತ್ರೆಯನ್ನು ಇನ್ನೂ ವರೆಗೆ ತಾಲೂಕು ಆಸ್ಪತ್ರೆಯನ್ನಾಗಿ ಘೋಷಿಸಲಿಲ್ಲ ಎಂದು ತಿಳಿಸಿದಾಗ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರವಾಣಿಯ ಮೂಲಕ ಆದಷ್ಟು ಬೇಗನೆ ತಾಲೂಕುಯನ್ನಾಗಿ ಘೊಷಣೆ ಮಾಡಲು ಕ್ರಮ ಕೈಗೊಳ್ಳಲು ತಿಳಿಸಿದರು. ದಾಂಡೇಲಿ ಬಸ್ ನಿಲ್ದಾಣದ ನವೀಕರಣ ಕಾಮಗಾರಿಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದಾಗ ಇನ್ನೂ ಬೇಕಾದರೆ ಹಣ ಬಿಡುಗಡೆ ಮಾಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವ್ರದ್ದಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಮ್ ಖಾನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೈಯ್ಯದ ತಂಗಳ, ದಾಂಡೇಲಿ ಸಮಗ್ರ ಅಭಿವ್ರದ್ದಿ ಹೋರಾಟ ಸಮಿತಿಯ ಪಧಾಧಿಕಾರಿಗಳಾದ ಅಶೋಕ ಪಾಟೀಲ, ಆರ್ ವಿ ಗಡೆಪ್ಪನವರ, ಸತೀಶ ನಾಯ್ಕ, ವಿಷ್ಣು ಕಾಮತ, ಸಬಸ್ಥೀನ್ ಡೆಮೆಲ್ಲೋ,ಗವಿಸಿದ್ದಪ್ಪಾ, ಪ್ರೇಮ ಕುಮಾರ, ರಾಜು ಕೋಡಕಣಿ, ಪ್ರೇಮಕುಮಾರ, ಸರಫರಾಜ ಮುಲ್ಲಾ, ಜ್ಯಾಕ್ ಪೆರುಮಾಳ. ಜಿ.ಆರ್ ನಾಯ್ಕ ಇನ್ನು ಅನೇಕ ಸಮಿತಿಯ ಸದಸ್ಯರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: 10 ಹಾಸಿಗೆಯ ಆಯುಷ್ ಆಸ್ಪತ್ರೆ, 10-bed ayush hospital, Dandeli Jai Hind Swamil, Parents lack staff, public housing, ಕುಡಿಯುವ ನೀರಿನ ಕರ ಆಕರಣೆ, ದಾಂಡೇಲಿ ನಗರದ ವಿವಿಧ ಸಮಸ್ಯೆ, ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯಿಂದ ಮನವಿ, ದಾಂಡೇಲಿಯ ಜೈ ಹಿಂದ್ ಸ್ವಾಮಿಲ್‍, ಪೌರಾಯುಕ್ತಕರಿಗೆ ಸಿಬ್ಬಂದಿ ಕೊರತೆ, ಬಗೆಹರಿಸುವಂತೆ, ಸಚಿವ ದೇಶಪಾಂಡೆಗೆ, ಸಾರ್ವಜನಿಕರ ಮನೆ ಮಾಲೀಕತ್ವ, ಸುತ್ತೋಲೆಯ ಪ್ರಕಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...