• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಂಕಿ ಹೊಬಳಿ ಮಟ್ಟದ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ

July 2, 2019 by Vishwanath Shetty Leave a Comment

watermarked IMG 20190701 163213 1

ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಭದಿಸಿದ ಇಲಾಖೆಗಳ ಆಶ್ರಯದಲ್ಲಿ 2019-20 ನೇ ಶಾಲಿನ ಮಂಕಿ ಹೋಬಳಿ ಮಟ್ಟದ “” ಕೃಷಿ ಅಭಿಯಾನ “” ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ “” ಎಂಬ ಶಿರ್ಷಿಕೆಯಡಿ ಕಾರ್ಯಕ್ರಮದ ಚಾಲನೆ ನೀಡುವ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಬಳ್ಕೂರಿನ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ನಾವು ಹಿಂದಿಗೂ ಹಳೆಯ ಕೃಷಿ ಪದ್ದತಿಯನ್ನು ಮುಂದುವರಿಸುತ್ತಾ ಬಂದಿದ್ದೇವೆ. ಆದರೆ ಆಧುನಿಕ ಕೃಷಿ ಪದ್ದತಿ ಲಾಭದಾಯಕವಾಗಿದೆ. ಸಣ್ಣ ಕೃಷಿ ಪದ್ದತಿಯಲ್ಲಿ ಹೆಚ್ಚು ಆದಾಯವನ್ನು ಹೇಗೆ ಪಡೆಯಬಹುದು ಎನ್ನುವುದನ್ನು ನಾವು ತಿಳಿಯಬೇಕಿದೆ. ಸರ್ಕಾರ ಕೃಷಿ ಇಲಾಖೆ ಮೂಲಕ ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರುತ್ತಿದ್ದು ಅಂತಹ ಕಾರ್ಯಕ್ರಮಗಳ ಮಾಹಿತಿ ಪಡೆದು ಅದರ ಲಾಭ ಪಡೆದುಕೊಳ್ಳಬೇಕಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಅರ್ಜಿ ಸಲ್ಲಿಕೆ ಅವಧಿ ಜುಲೈ 10ವರೆಗೆ ವಿಸ್ತರಿಸಿದ್ದು ಎಲ್ಲಾ ರೈತರು ಅರ್ಜಿ ಸಲ್ಲಿಸುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಸದಸ್ಯೆ ಪುಷ್ಪಾ ನಾಯ್ಕ ಮಾತನಾಡಿ ನಾವು ಕೃಷಿಯನ್ನು ಯಾಂತ್ರಿಕೃತವಾಗಿ ಬಳಸಿಕೊಂಡಾಗ ಮಾತ್ರ ಹೆಚ್ಚಿನ ಲಾಭ ಪಡೆಯಬಹುದು. ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿಗಾಗಿಯೇ ಇಂತಹ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದಾರೆ. ಗ್ರಾಮಗಳಿಗೆ ಬರುವ ಇಂತಹ ಕಾರ್ಯಕ್ರಮದಲ್ಲಾದರೂ ಭಾಗವಹಿಸಿ ಸರ್ಕಾರದ ಸೌಲಭ್ಯ ಮಾಹಿತಿ ಪಡೆಯಿರಿ ಎಂದು ರೈತರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಕೂರ್ ಪಂಚಾಯತ ಅಧ್ಯಕ್ಷರಾದ ಕೇಶವ ನಾಯ್ಕ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರೈತರಿಗೆ ಕೃಷಿ ಸಲಕರಣೆಯನ್ನು ವಿತರಿಸಲಾಯಿತು,

ವೇದಿಕೆಯಲ್ಲಿ ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಗ್ರಾಮ ಪಂಚಾಯತ ಸದಸ್ಯರಾದ ಗಣಪತಿ ನಾಯ್ಕ ಬಿಟಿ, ಬಾಬು ನಾಯ್ಕ, ವಿನುತಾ ಪೈ, ಕೃಷಿ ಅಧಿಕಾರಿ ಪುನಿತಾ ಬಿ, ಎಮ್ ಎನ್ ನಾಯ್ಕ, ಪಂಚಾಯತ ಪಿಡಿಓ ರಾಧಾಕೃಷ್ಣ ನಾಯ್ಕ, ಬಿಜೆಪಿ ತಾಲೂಕ ಅಧ್ಯಕ್ಷ ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು.

ಜಾಗೃತಿ ಜಾಥಾ ವಾಹನ ಬಳ್ಕೂರಿನಂದ ಹೊರಟು ಕೋಡಾಣಿ, ಮಾಗೋಡು, ಕುದ್ರಗಿ, ಮೇಲಿನ ಇಡಗುಂಜಿ, ಕಾಸರಕೋಡ, ಮಂಕಿ ಅನಂತವಾಡಿ ಮುಂತಾದ ಕಡೆಗಳಲ್ಲಿ ಸಂಚರಿಸಿ ರೈತರಿಗೆ ಮಾಹಿತಿ ನೀಡಲಾಯಿತು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: "" ಎಂಬ ಶಿರ್ಷಿಕೆ, ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ, ಕೃಷಿ ಅಭಿಯಾನ, ಕೃಷಿ ಇಲಾಖೆ, ಕೃಷಿಗೆ ಸಂಭದಿಸಿದ ಇಲಾಖೆ, ಚಾಲನೆ, ನೀಡಿದ, ಮಂಕಿ ಹೊಬಳಿ, ಮಟ್ಟದ, ಶಾಸಕ ಸುನೀಲ ನಾಯ್ಕ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...