• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ;ತಹಶೀಲ್ದಾರ ವಿ.ಆರ್.ಗೌಡ

July 8, 2019 by Gaju Gokarna Leave a Comment

ಗದ್ದೆ ನೆಟ್ಟಿ ಪ್ರಾರಂಭೋತ್ಸವ

ಹೊನ್ನಾವರ : ಲಯನ್ಸ್ ಕ್ಲಬ್ ಹೊನ್ನಾವರದ ಸಹಯೋಗದಲ್ಲಿ ಚಂದಾವರ ಗಣಪತಿ ದೇವಸ್ಥಾನಕೇರಿ ವ್ಯಾಪ್ತಿಯ 15 ಎಕರೆ ಪ್ರದೇಶದಲ್ಲಿ ಗದ್ದೆ ನೆಟ್ಟಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಹಶೀಲ್ದಾರ ವಿ.ಆರ್.ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ ಹೊನ್ನಾವರ ತಾಲೂಕಿನ ಬಹುತೇಕ ತುಂಡುಭೂಮಿಯಲ್ಲಿ ಭತ್ತ ಬೆಳೆಯುವುದು ನಿಂತು ಹೋಗಿದೆ. ಇದಕ್ಕೆ ಮುಖ್ಯ ಕಾರಣ ಜನರಿಗೆ ಭತ್ತದ ಗದ್ದೆ, ನಾಟಿ, ಕೊಯ್ಲು ಮಾಡುವ ಆಸಕ್ತಿಯು ಇಲ್ಲದಿರುವುದೇ ಆಗಿದೆ ಎಂದರು. ಕೃಷಿಯಲ್ಲಿ ಮೊದಲು ರೈತರು ತೊಡಗಿಸಿಕೊಳ್ಳಬೇಕು. ಆರೋಗ್ಯವು ಸರಿ ಇರುತ್ತದೆ, ನಮ್ಮ ದೇಶವು ಅಭಿವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ ಹೊನ್ನಾವರದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ ಮಾತನಾಡಿ ಇದೊಂದು ವಿಶಿಷ್ಟವಾದ ಕಾರ್ಯ 15 ಎಕರೆಗಿಂತ ಹೆಚ್ಚಿನ ಪ್ರದೇಶವನ್ನು ಉಳುಮೆ ಮಾಡಿ ಗದ್ದೆನೆಟ್ಟಿ ಮಾಡುತ್ತಿರುವುದು ಎಲ್ಲರಿಗೆ ಮಾದರಿಯಾಗಿದೆ. ಇಲ್ಲಿನ ಎಲ್ಲ ರೈತರು ಒಂದುಗೂಡಿ ತಂತಿಬೇಲಿಯನ್ನು ಮಾಡಿ ಭೂಮಿತಾಯಿಯ ಸೇವೆ ಮಾಡುತ್ತಿರುವುದರಿಂದ, ಗದ್ದೆಗಳಲ್ಲಿ ನೀರನ್ನು ತುಂಬಿಸಿ ಇಡುವುದರಿಂದ ತನ್ನಿಂದ ತಾನೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಹೊನ್ನಾವರ ತಾಲೂಕಿನ ಚಿಕ್ಕ ಚಿಕ್ಕ ನದಿಗಳು ಬೇಸಿಗೆ ಕಾಲದಲ್ಲಿ ಬಹುಬೇಗ ಬಿತ್ತಲು, ಅದರ ಸುತ್ತಲೂ ಇರುವ ಭತ್ತದ ಗದ್ದೆಗಳಲ್ಲಿ ಕೃಷಿ ಮಾಡದೇ ಇರುವುದು ಮುಖ್ಯ ಕಾರಣವಾಗಿದೆ ಎಂದು ವಿಶಾದಿಸಿದರು. ರೈತರಿಗೆ ತಮ್ಮ ಇಲಾಖೆಯಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ ಎಂದರು.
ಹೊನ್ನಾವರ ಕೃಷಿ ಅಧಿಕಾರಿ ಜಯರಾಮ ಹೆಬ್ಬಾg Àಮಾತನಾಡಿ ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ವಿವಿಧ ಯೋಜನೆಗಳನ್ನು ತಿಳಿಸಿದರು. ಸಹಾಯಕ ಕೃಷಿ ಅಧಿಕಾರಿ ಲಕ್ಷ್ಮೀ ದಳವಾಯಿ ಹಾಜರಿದ್ದರು. ಕೃಷಿ ಇಲಾಖೆಯಿಂದ 9 ಎಚ್.ಪಿ.ಯ ಗದ್ದೆ ಹೂಡುವ ಚಿಕ್ಕ ಟ್ರೆಲ್ಲರ್‍ನ ಗದ್ದೆ ಹೂಡುವ ಪ್ರಾತ್ಯಕ್ಷಿಯನ್ನು ರೈತರಿಗೆ ಡೆಮೊ ಮಾಡಿ ತೋರಿಸಿದರು.
ಶ್ರೀಕಲಾ ಶಾಸ್ತ್ರೀ ಜಿಲ್ಲಾ ಪಂಚಾಯತ ಸದಸ್ಯ ಮಾತನಾಡಿ, ಲಯನ್ಸ್ ಕ್ಲಬ್ ಹೊನ್ನಾವರದವರು ತಮ್ಮ ಕ್ಷೇತ್ರದಲ್ಲಿ ಬರುವ ಚಂದಾವರ ಗಣಪತಿ ದೇವಸ್ಥಾನ ಕೇರಿಯ ಗದ್ದೆ ಹೊಂದಿರುವ ರೈತರಿಗೆ ಪ್ರೋತ್ಸಾಹ ನೀಡುವ, ಇಂದಿನ ದಿನಗಳಲ್ಲಿ ಭತ್ತದ ಗದ್ದೆ ನಾಟಿ ಮಾಡುವುದರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಲಯನ್ಸ್ ಕ್ಲಬ್ ಇವರಿಗೆ ಸಹಾಯ ಮಾಡುವುದನ್ನು ಶ್ಲಾಘಿಸಿದರು. ಈ ಭಾಗದ ಜನರು ಲಯನ್ಸ್ ಕ್ಲಬ್ ಆಯೋಜಿಸುವ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಲಯನ್ಸ್ ಕ್ಲಬ್ ವತಿಯಿಂದ 48 ಕುಟಾರಿಗಳನ್ನು ರೈತರಿಗೆ ವಿತರಿಸಿದರು. ನಿವೃತ್ತ ಕೃಷಿ ಅಧಿಕಾರಿ ಎಸ್.ವಿ. ಹೆಗಡೆ, ಲಯನ್ಸ್‍ನ ಜೀವೋತ್ತಮ ನಾಯಕ, ಸುರೇಶ ಎಸ್. ಖಜಾಂಚಿ ಸಂತೋಷ ನಾಯ್ಕ, ಚಂದಾವರದ ಉಮೇಶ ಕೃಷ್ಣ ನಾಯ್ಕ, ಗೋಪಾಲಕೃಷ್ಣ ಯು. ನಾಯ್ಕ, ಅಶೋಕ ಯಶವಂತ, ರತ್ನಾಕರ ಎಸ್. ನಾಯ್ಕ ವೇದಿಕೆಯಲ್ಲಿದ್ದರು. ಚಂದಾವರ ಗ್ರಾಮ ಪಂಚಾಯತ ವ್ಯಾಪ್ತಿಯ ಸುಮಾರು ರೈತರೂ, ಗದ್ದೆ ನೆಟ್ಟಿ ಮಾಡುವ ಆಳುಗಳು ಹಾಜರಿದ್ದರು.
ಅಧ್ಯಕ್ಷತೆಯನ್ನು ವಹಿಸಿ ಲಯನ್ಸ್ ಅಧ್ಯಕ್ಷರಾದ ಎಸ್.ಆರ್. ಹೆಗಡೆಕರ ಮಾತನಾಡಿ ಹೊನ್ನಾವರ ತಾಲೂಕಿನಲ್ಲಿ ಭತ್ತದ ಕೃಷಿಯನ್ನು ಉತ್ತೇಜಿಸುವ ಕಾರ್ಯ ನಮ್ಮದಾಗಿದೆ. ಗದ್ದೆಗಳಲ್ಲಿ ಕೃಷಿಯನ್ನು ಮಾಡಿ ರೈತರು ಉಳುಮೆ ಮಾಡಬೇಕು. ಪ್ರಪಂಚದ ಮುಂದುವರಿದ ದೇಶಗಳು ಕೃಷಿಯನ್ನು ಸಮರ್ಪಕವಾಗಿ ಮಾಡುತ್ತಿದೆ. ನಮ್ಮ ತಾಲೂಕಿನ ಎಲ್ಲಾ ರೈತರು ಕೇವಲ ಅಡಿಕೆ, ತೆಂಗು ತೋಟಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ. ಕಾರ್ಮಿಕರ ತೊಂದರೆಯಿಂದ ಗದ್ದೆ ನೆಟಿ ಮಾಡುವುದಿಲ್ಲ. ಗದ್ದೆ ಜಮೀನನ್ನು ಹಾಗೆ ಬಿಡುತ್ತಾರೆ. ಇದರಿಂದ ದೇಶದ ಆರ್ಥಿಕತೆಗೆ ತೊಂದರೆಯಾಗುತ್ತದೆ ಎಂದರು.
ಕೃಷಿ ಇಲಾಖೆಯಿಂದ ರೈತರಿಗೆ ದೊರಕುವ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಆಗಮಿಸಿದ ಗಣ್ಯರು, ಊರಿನವರು, ಲಯನ್ಸ್ ಸದಸ್ಯರು ಆಗಮಿಸಿದ ರೈತರು ಗದ್ದೆಯನ್ನು ಟ್ರೆಲ್ಲರ್‍ನಲ್ಲಿ ಹೂಡಿ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ನಾಟಿ ಮಾಡಿದರು.
ತಹಶೀಲ್ದಾರರಾದ ವಿ.ಆರ್.ಗೌಡ ಲಯನ್ಸ್‍ನ ಸದಸ್ಯರು, ಸ್ವತಃ ಗದ್ದೆ ನೆಟ್ಟಿ ಮಾಡಿದರು. ಶ್ರೀಕಲಾ ಶಾಸ್ತ್ರೀಯರವರು ಎಲ್ಲ ಮಹಿಳೆಯರ ಜೊತೆಗೆ ನೆಟಿಯಲ್ಲಿ ಪಾಲ್ಗೊಂಡರು. ದಯಾನಂದ ಶಾಸ್ತ್ರೀಯವರು, ರಾಜೇಶ ಸಾಳೆಹಿತ್ತಲರವರು, ಡಿ.ಡಿ.ಮಡಿವಾಳ, ಎನ್.ಜಿ.ಭಟ್ಟ, ಶಾಂತಾರಾಮ ನಾಯ್ಕ ಇತರರು ಹಾಜರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಲಯನ್ಸ್ ಆನಂದ ವಾಯ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಡಾ. ಕಿಶೋರ ಚಂದಾವರಕರ ವಂದಿಸಿದರು. ರಮಾನಂದ ನಾಯಕ ನಿರೂಪಿಸಿದರು.
ಲಯನ್ಸ್ ಕ್ಲಬ್ ಹೊನ್ನಾವರರವರು ಆಗಮಿಸಿದ 200 ಕ್ಕೂ ಹೆಚ್ಚು ರೈತರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಗದ್ದೆ ನೆಟ್ಟಿ ಪ್ರಾರಂಭೋತ್ಸವ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Chandavara Ganapati Temple, coconut plantation, Farmers are more than just nut, first farmers in agriculture, harvesting, Honnavar taluk, in almost all the land, paddy fields, paddy growing has stopped., plowing, range, small rivers for summer, ಕೃಷಿಯಲ್ಲಿ ಮೊದಲು ರೈತರು, ಕೊಯ್ಲು, ಚಂದಾವರ ಗಣಪತಿ ದೇವಸ್ಥಾನಕೇರಿ ವ್ಯಾಪ್ತಿ, ಚಿಕ್ಕ ಚಿಕ್ಕ ನದಿಗಳು ಬೇಸಿಗೆ ಕಾಲ, ತಹಶೀಲ್ದಾರ ವಿ.ಆರ್.ಗೌಡ, ತೆಂಗು ತೋಟಕ್ಕೆ ಹೆಚ್ಚಿನ ಪ್ರಾಧಾನ್ಯತೆ, ನಾಟಿ, ಬಹುತೇಕ ತುಂಡುಭೂಮಿಯಲ್ಲಿ, ಭತ್ತ ಬೆಳೆಯುವುದು ನಿಂತು ಹೋಗಿದೆ, ಭತ್ತದ ಗದ್ದೆ, ರೈತರು ಕೇವಲ ಅಡಿಕೆ, ಹೊನ್ನಾವರ ತಾಲೂಕಿನ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...