
ಜೋಯಿಡಾ ;
“ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದಂತೆ” ಎಂಬ ಅನುಭಾವಿಗಳ ಮಾತು ಅಕ್ಷರ ಸಹ ಸತ್ಯವಾಗಿದ್ದು, ಪುಸ್ತಕಗಳ ಓದಿನಂದ ಸಿಗುವ ಸಂತಸಕ್ಕೆ ಸಮನವಾದ ಸಂತಸ ಬೇರಾವುದೂ ಇಲ್ಲ. ಟಿ.ವಿ.ಮೋಬೈಲ್ ಮೋಬೈಲ್ಗಳ ಮೇಲಿರುವ ಮೋಹವನ್ನು ಪುಸ್ತಕದ ಮೇಲಿಟ್ಟರೆ ಮುಂದೊಂದು ದಿನ ಸಮಾಜದ ಎತ್ತರದ ಸ್ಥಾನದಲ್ಲಿದ್ದು ಎಲ್ಲರಿಂದಲೂ ಗೌರವಿಸಲ್ಪಡುತ್ತಿರಿ ಎಂದು ಮುಖ್ಯೋಪದ್ಯಾಯಿನಿ ಸುಜಾತಾ ನಾಯಕ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ಜಗಲಬೇಟ್ ಪ್ರೌಢಶಾಲೆಯಲ್ಲಿ ವಾಚನಾಲಯ ವಿಭಾಗದಿಂದ ಹಮ್ಮಿಕೊಂಡಿದ್ದ ಪುಸ್ತಕಗಳ ಪ್ರದರ್ಶನ ಮತ್ತು ಪರಿಚಯ ಕಾರ್ಯಕ್ರಮ”ಜ್ಞಾನ ಸಿರಿ” ಉದ್ಘಾಟಿಸಿ ಮಾತನಾಡುತ್ತಿದ್ದರು.
ಪುಸ್ತಕಗಳು ಎಕಾಂತದಲ್ಲಿ ಸಂಗಾತಿಯಾಗಿಯೂ, ಕಷ್ಟಕಾಲದಲ್ಲಿ ದಾರಿ ದೀವಿಗೆಯಾಗಿಯೂ ಸಹಾಯಕ್ಕೆ ಬರುತ್ತದೆ. ಸಾಹಿತ್ಯ ವಿವಿಧ ಪ್ರಕಾರಗಳನ್ನು ಓದುವ ಮೂಲಕ ಸಾಹಿತ್ಯದ ರಸ ಅನುಭವಿಸುತ್ತಲೇ ಶಭ್ದ ಭಂಡಾರ ಹೆಚ್ಚಿಸಿಕೊಂಡು ಬರವಣಿಗೆಯ ಕಲೆ ವೃದ್ದಿಸಿಕೊಂಡರೆ ಅದು ನಿಮಗೆ ಪರೀಕ್ಷೆಗೂ, ಬದುಕಿಗೂ ತುಂಬಾ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮ ಆಯೋಜಕ ಪ್ರಶಾಂತ ಕಮ್ಮೂರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಶಾಲಾ ವಾಚನಾಲಯದಲ್ಲಿ ವಾಚನಾಯ ಅವಧಿಯಲ್ಲಿ ನೀಡುವ ಪುಸ್ತಕಗಳನ್ನು ಹೊರತುಪಡಿಸಿ ವಿವಿಧ ಭಾಷೆ ಮತ್ತು ಸಾಹಿತ್ಯ ಪ್ರಕಾರಗಳ 2500 ಕ್ಕೂ ಹೆಚ್ಚು ಪುಸ್ತಕಗಳಿವೆ. ಆ ಎಲ್ಲಾ ಪುಸ್ತಕಗಳನ್ನು ಜೀವನ ಚರಿತ್ರೆ, ನಿಘಂಟು, ಕಾದಂಬರಿ, ಜನಪದ, ವೈಚಾರಿಕ, ಸಾಮಾನ್ಯ ಜ್ಞಾನ, ಕಾವ್ಯ, ವ್ಯಕ್ತಿತ್ವ ವಿಕಸನ, ವಿಜ್ಞಾನ ಕಥೆ, ಹೀಗೆ ವಿವಿಧ ಪ್ರಕಾರಗಳಲ್ಲಿ ವಿಂಗಡಿಸಿ ಪ್ರದರ್ಶನಕ್ಕಿಟ್ಟು ಅದನ್ನು ಸಮಾಧಾನದಿಂದ ವೀಕ್ಷಿಸಿ ಇಷ್ಟದ ಪುಸ್ತಕಗಳ ಹೆಸರನ್ನು ಬರೆದುಕೊಂಡು ಮುಂದಿನ ದಿನದಲ್ಲಿ ಆಪುಸ್ತಕಗಳನ್ನು ಪಡೆದು ಓದುವ ಮೂಲಕ ಬಿಡುವಿನ ಸಮಯದ ಸದುಪಯೋಗ ಮಾಡಿಕೊಳ್ಳಿ ಎಂದರು.
ಬೆಳಿಗ್ಗೆ 9.30 ರಿಂದ ಮದ್ಯಾನ್ಹ 1.30 ರವರೆಗೆ 8.9.10.ನೇ ತರಗತಿಯ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಬಂದು ಶಿಕ್ಷಕರ ಮಾರ್ಗದರ್ಶನದಲ್ಲಿ ಪುಸ್ತಕಗಳನ್ನು ವೀಕ್ಷಿಸಿ ತಮಗಿಷ್ಟವಾದ ಪುಸ್ತಕಗಳ ಹೆಸರು ಬರೆದುಕೊಂಡರು. ಶಾಲೆಯ ಎಲ್ಲಾ ಅಧ್ಯಾಪಕರು ಈ ಸಮಯದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

Leave a Comment