
ಹೊನ್ನಾವರ ,ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ, ಶ್ರೀ ಶಂಭುಲಿಂಗೇಶ್ವರ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಂಘ , ಯುವ ಬಿಂಬ ಸಾಂಸ್ಕ್ರತಿಕ ಹಾಗೂ ಕ್ರೀಡಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮೂಡ್ಕಣಿಯ ಶ±ಂಭುಲಿಂಗೇಶ್ವರ ಸಭಾಬವನದಲ್ಲಿ ಪರಿಸರ ಜಾಗ್ರತಿ ಮಾಹಿತಿ ಕಾರ್ಯಕ್ರಮವನ್ನು ತಾಲೂಕ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ಬಿ.ನಾಯ್ಕ ಉದ್ಗಾಟಿಸಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲಿನ ಪರಿಸರ ನಿರ್ಮಲವಾಗಿಟ್ಟುಕೊಂಡರೆ ಮಾರಕ ರೋಗಗಳನ್ನು ತಡೆಗಟ್ಟಬಹುದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಪರಿ¸ರÀ ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಭೂಮಿಗೆ ಬಹಳಷ್ಟು ಹಾನಿಯಾಗಲಿದೆ. ಪರಿಸರ ದಿನಾಚರಣೆ ಕೆವಲ ಗಿಡ ನೇಡುವುದಕ್ಕೆ ಸೀಮಿತವಾಗಿರದೆ ನೆಟ್ಟ ಗಿಡವನ್ನು ಪಾಲನೆ ಪೋಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಕೃಷಿ ಮೇಲ್ವಿಚಾರಕರಾದ ಶಿವರಾಮ ಮಾತನಾಡಿ ಮನುಷ್ಯ ತಮ್ಮ ಸ್ವಂತ ಲಾಭಕ್ಕಾಗಿ ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಾ ಬಂದಿದಾನೆ. ಮುಂದಿನ ದಿನಗಳಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಪ್ರಿತಿಯೊಬ್ಬರೂ ಗಿಡ ಮರಗಳನ್ನು ರಕ್ಷಿಸೋಣ ಎಂದು ಹೇಳಿದರು.
ಸ್ಥಳೀಯ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಯೋಜನೆಯ ಮೇಲ್ವಿಚಾರಕರಾದ ರತ್ನಾಕರ ನಾಯ್ಕ ಸ್ವಾಗತಿಸಿದರು. ರತ್ನಾವತಿ ನಾಯ್ಕ ವಂದಿಸಿದರು.
ವೇದಿಕೆಯಲ್ಲಿ ಒಕ್ಕೋಟದ ಅಧ್ಯಕ್ಷರಾದ ಲತಾ ಆಚಾರಿ ಉಪಸ್ತಿತರಿದ್ದರು.
Leave a Comment