
ಜೋಯಿಡಾ ತಾಲೂಕಿನ ನಾಗೋಡಾ ಬಳಿ ನಿವೃತ್ತ ಡಿ.ಜಿ.ಪಿ. ಶ್ರೀ ಓಂ ಪ್ರಕಾಶ ಅವರ ಗದ್ದೆಯಲ್ಲಿ 3 ಗಂಧದ ಮರವನ್ನು ಕತ್ತರಿಸಿ ಕದ್ದೋಯ್ಯದ್ದಿದ್ದಾರೆ, ಅಂದಾಜು ಮೊತ್ತ 2 ಲಕ್ಷ ಇರಬಹುದು ಎಂದು ಹೇಳಲಾಗಿದೆ,
ನಾಗೋಡಾ ಬಳಿ ಪ್ರಕಾಶರವರು ಜಮೀನು ಹೊಂದಿದ್ದು ,ಇದರಲ್ಲಿ 60 ರಿಂದ 70 ಗಂಧದ ಮರವನ್ನು ಬೆಳೆಸಿದ್ದರು, ಯಾರೂ ಕಿಡಿಗೇಡಿಗಳು ಇದರಲ್ಲಿ ಬಲಿತ ಮೂರು ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ, ಸದ್ಯ ಜೋಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತಿಚಿಗೆ ನಾಗೋಡಾದ ಬಳಿ ಗಂಧದ ಮರದ ಕಳ್ಳತನ ಹೆಚ್ಚುತ್ತಿದ್ದು, ಕಳೆದ ವಾರ 2 ಮರಗಳನ್ನು ಜೋಯಿಡಾ ಅರಣ್ಯ ವ್ಯಾಪ್ತಿಯ ನಾಗೋಡಾದ ಬಳಿಯೇ ಕಳ್ಳತನ ಮಾಡಲಾಗಿತ್ತು, ಕೂಡಲೇ ಈ ಗಂಧದ ಮರದ ಕಳ್ಳತನ ಮಾಡುವವರನ್ನು ಹೆಡೆಮುರಿ ಕಟ್ಟಬೇಕಾಗಿದೆ.

Leave a Comment