• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ಲಾಸ್ಟಿಕ್ ಬಳಕೆ ಮನುಕುಲ ನಾಶಕ್ಕೆ ದಾರಿ ; ವಿ.ಆರ್.ಗೌಡ

August 1, 2019 by Gaju Gokarna Leave a Comment

watermarked hnr 31 Paper Report Plastic Prg.

ಹೊನ್ನಾವರ , ಪ್ಲಾಸ್ಟಿಕ್ ವ್ಯವಸ್ಥೆಗೆ ನಾವು ಒಪ್ಪಿಕೊಂಡು ಹೋಗಿದ್ದು ಅದರ ಬಳಕೆಯಲ್ಲಿ ನಿಯಂತ್ರಣ ಸಾಧಿಸದಿದ್ದರೆ ಮನುಕುಲ ಅತ್ಯಂತ ಭಯಾನಕ ಬದುಕನ್ನು ಎದುರಿಸಬೇಕಾಗುತ್ತದೆ ಎಂದು ಹೊನ್ನಾವರದ ತಹಸೀಲ್ದಾರ ವಿ.ಆರ್.ಗೌಡ ಅಭಿಪ್ರಾಯ ಪಟ್ಟರು.
ಅವರು ಜನಶಿಕ್ಷಣ ಸಂಸ್ಥಾನ ಕಾರವಾರ, ಕುಮುದಾ ಅಭಿವೃದ್ಧಿ ಸಂಸ್ಥೆ ಹೊನ್ನಾವರ, ಶಿಶು ಅಭಿವೃದ್ಧಿ ಯೋಜನೆ, ಪಟ್ಟಣ ಪಂಚಾಯತ ಹೊನ್ನಾವರ, ಸ್ವಚ್ಛ ಹೊನ್ನಾವರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ
ಹೊನ್ನಾವರದ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎಂಬ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.
ಹೊನ್ನಾವರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಲೇಬೇಕು ಎನ್ನುವ ಹಟ ತೊಟ್ಟಿದ್ದು ಆ ನಿಟ್ಟಿನಲ್ಲಿ ಪಟ್ಟಣ ಪಂಚಾಯತ ಹಾಗೂ ತಾಲೂಕಾ ಆಡಳಿತ ತೊಡಗಿಸಿಕೊಂಡಿದೆ ಅಂದರು.
ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಮಾತನಾಡಿ ಹೊನ್ನಾವರದಲ್ಲಿ ಪ್ಲಾಸ್ಟಿಕ್ ರಹಿತ ಪಟ್ಟಣ ಮಾಡುವ ತಯಾರಿ ಭರದಿಂದಲೇ ನಡೆಯುತ್ತಿದೆ. ಆ ಜನಪರ ಕೆಲಸಕ್ಕೆ ಸಾರ್ವಜನಿಕರ ಬೆಂಬಲ ಬೇಕಿದ್ದು ಅದಕ್ಕೆ ಸಹಕರಿಸಲು ಕೋರಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಎಚ್.ಪಾಟೀಲ ಮಾತನಾಡಿ ಸ್ವಚ್ಛ ಭಾರತ ನಮ್ಮ ಕಲ್ಪನೆ ಆಗಬೇಕು. ಕಸದ ನಿರ್ವಹಣೆ ಸರಿಯಾಗಿ ಮಾಡಬೇಕು. ಅದರ ಕುರಿತಾದ ದೂರು ಇದ್ದಲ್ಲಿ ಅದನ್ನು ಸಂಬಂಧ ಪಟ್ಟವರ ಗಮನಕ್ಕೆ ತರಬೇಕು ಎಂದರು.
ಹೊನ್ನಾವರ ಪಟ್ಟಣ ಪಂಚಾಯತ ಅಧಿಕಾರಿ ಸುನೀಲ ಗಾವಡೆ ಮಾತನಾಡಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ, ಕಸದ ವಿಂಗಡನೆಯ ಅಗತ್ಯ, ಸಾರ್ವಜನಿಕರ ಸಹಭಾಗಿತ್ವ ಇರಬೇಕಲ್ಲದೇ ತಾವು ಹೊನ್ನಾವರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಜನಶಿಕ್ಷಣ ಸಂಸ್ಥೆಯ ಅಧಿಕಾರಿ ರಮೇಶ ಭಂಡಾರಿ ಮಾತನಾಡಿ ಕಸದ ನಿರ್ವಹಣೆ, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಕುರಿತಾಗಿ ನಮ್ಮ ಮನೋಬಲದಲ್ಲಿಯೇ ಬದಲಾವಣೆ ಆಗಬೇಕಿದೆ, ಹಾಗಾದಾಗ ಸ್ವಚ್ಛ ಪರಿಸರದ ಕಲ್ಪನೆ ಸಹಜವಾಗಿಯೇ ಜಾಗೃತವಾಗುತ್ತದೆ ಎಂದರು.
ಸ್ವಚ್ಛ ಪರಿಸರ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎನ್ನುವ ವಿಷಯದ ಕುರಿತು ಮಾತನಾಡಿದ ಎಸ್.ಡಿ.ಎಮ್.ಕಾಲೇಜಿನ ಪ್ರಾದ್ಯಾಪಕ ಪ್ರಶಾಂತ ಹೆಗಡೆ, ಪ್ಲಾಸ್ಟಿಕ್‍ನ್ನು ಸುಡುವ ಪ್ರಯತ್ನ ಮಾಡಲೇ ಬೇಡಿ, ತ್ಯಾಜ್ಯ ವಿಂಗಡನೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಪ್ರತ್ಯೇಕ ಸಂಗ್ರಹಿಸಿ, ಪ್ಲಾಸ್ಟಿಕ್ ನಿಯಂತ್ರಣ ತುಂಬಾ ಕಷ್ಟ ಎನ್ನುವ ಸತ್ಯ ಗೊತ್ತಿದ್ದರೂ ಅದರ ನಿಯಂತ್ರಣದತ್ತ ನಾವು ಮುನ್ನುಗ್ಗಲೇಬೇಕು. ಈ ಕುರಿತಾದ ಜಾಗೃತಿ ಪ್ರಜ್ನೆ ನಮ್ಮಲ್ಲಿ ಉಂಟಾಗದಿದ್ದರೆ ಮುಂದೊಮ್ಮೆ ಘೋರ ಕೆಟ್ಟ ಪರಿಣಾಮ ಮುಂದಿನ ಜನಾಂಗ ಎದುರಿಸಬೇಕಾಗುತ್ತದೆ ಎಂದರು. ಜೆಎಸ್‍ಎಸ್ ಕಾರ್ಯಕ್ರಮಾಧಿಕಾರಿ ಉಷಾ ದುರ್ಗೇಕರ ಮಾತನಾಡಿದರು.
ನಂತರ ಶರಾವತಿ ಸರ್ಕಲ್‍ಗೆ ಬಂದು ಅಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಅಪಾಯದ ಕುರಿತು ತಿಳಿಸಿ, ಪ್ಲಾಸ್ಟಿಕ್ ರಹಿತ ಚೀಲವನ್ನು ನೀಡಿ ಸೇರಿದ ನೂರಾರು ಜನರಿಗೆ ಜಾಗೃತಿ ಮೂಡಿಸಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದ್ದರು.
ರೂಪಾ ಅಗೇರ ಸ್ವಾಗತಿಸಿದರು, ಅಕ್ಷಯ್ ಮೇಸ್ತ ವಂದಿಸಿದರು, ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

ತಹಸೀಲ್ದಾರ ವಿ.ಆರ್.ಗೌಡ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎಂಬ
ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು

ಹೊನ್ನಾವರದ ಶರಾವತಿ ಸರ್ಕಲ್‍ನಲ್ಲಿÉ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಅಪಾಯದ ಕುರಿತು ತಿಳಿಸಿ,
ಪ್ಲಾಸ್ಟಿಕ್ ರಹಿತ ಚೀಲವನ್ನು ಸೇರಿದ ನೂರಾರು ಜನರಿಗೆ ನೀಡಿ ಜಾಗೃತಿ ಮೂಡಿಸಲಾಯಿತು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಕಾರವಾರ, ಕುಮುದಾ ಅಭಿವೃದ್ಧಿ ಸಂಸ್ಥೆ ಸಹಯೋಗ, ತಹಸೀಲ್ದಾರ ವಿ.ಆರ್.ಗೌಡ ಸ್ವಚ್ಛತಾ, ಪಟ್ಟಣ ಪಂಚಾಯತ ಹೊನ್ನಾವರ, ಪ್ಲಾಸ್ಟಿಕ್ ಬಳಕೆ, ಪ್ಲಾಸ್ಟಿಕ್ ಸಂಪೂರ್ಣ ನಿಷೇಧ, ಮನುಕುಲ ನಾಶಕ್ಕೆ ದಾರಿ, ವಿ.ಆರ್.ಗೌಡ, ವಿವಿಧ ಸಂಘ-ಸಂಸ್ಥೆಗಳ ಆಶ್ರಯ, ಶಿಶು ಅಭಿವೃದ್ಧಿ ಯೋಜನೆ, ಸ್ವಚ್ಛ ಹೊನ್ನಾವರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...