
ಹೊನ್ನಾವರ . ಉತ್ತರ ಕನ್ನಡ ಜಿಲ್ಲೆಂiÀi ಸಿ.ಎಸ್.ಸಿ. (ಸಾಮಾನ್ಯ ಸೇವಾ ಕೇಂದ್ರ)ಯ ವಿ.ಎಲ್.ಇ.ಗಳು ಸೇರಿ ಹೊನ್ನಾವರ ತಾಲೂಕಿನ ಹಡಿನಬಾಳ ಕಳಲೆಕೇರಿ, ಹಾಡಗೇರಿ ಹಾಗೂ ಕಡಗೇರಿಯ ನೆರೆಹಾವಳಿ ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿಗಳನ್ನು ವಿತರಿಸಿದರು. ರಾಜ್ಯ ವ್ಯವಸ್ಥಾಪಕರಾದ ರಾಬರ್ಟ್ರವರ ಮಾರ್ಗದರ್ಶನ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಅಕ್ಷಯ ನಾಯ್ಕರವರ ನೇತೃತ್ವದಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುವ ಅನೇಕ ವಿ.ಎಲ್.ಇ.ಗಳು ತಮ್ಮ ತಮ್ಮ ಕೊಡುಗೆಗಳನ್ನು ನೀಡಿದರು. ಪರಿಹಾರ ಕಾರ್ಯಕ್ರಮದಲ್ಲಿ ವಿನಾಯಕ ನಾಯ್ಕ ಅಳ್ಳಂಕಿ, ಗಣಪತಿ ಹೆಗಡೆ ಹಡಿನಬಾಳ, ಗಣೇಶ ನಾಯ್ಕ, ಈಶ್ವರ ನಾಯ್ಕ, ಮೋಹನ, ಶಿವಕುಮಾರ ಮುರ್ಡೇಶ್ವರ, ಪಾವಸ್ಕರ ಹೊನ್ನಾವರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Comment