• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಉಮೇಶ ಭಟ್ಟ ಮೇರು ವ್ಯಕ್ತಿತ್ವದ ಮಾನವತಾವಾದಿಯಾಗಿದ್ದರು ; ಡಾ. ಶ್ರೀಪಾದ ಶೆಟ್ಟಿ

August 23, 2019 by Gaju Gokarna Leave a Comment

Condolence meeting of Late.Umesh Bhat

ಹೊನ್ನಾವರ – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ , ಮಾಜಿ ಶಾಸಕ ಉಮೇಶ ಭಟ್ಟ ಮನುಕುಲವನ್ನು ಪ್ರೀತಿಸುವ , ಎಲ್ಲಾ ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರೊಂದಿಗೂ ವಿನಯದಿಂದ ಬೆರೆಯುವ ಮೇರು ವ್ಯಕ್ತಿತ್ವದ ಮಾನವತಾವಾದಿಯಾಗಿದ್ದರೂ ಎಂದು ಖ್ಯಾತ ಚಿಂತಕ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ, ಇತ್ತೀಚಿಗೆ ನಿಧನ ಹೊಂದಿದ ಮಾಜಿ ಶಾಸಕ ದಿ.ಉಮೇಶ ಭಟ್ಟರ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಾತನಾಡುತ್ತಿದ್ದರು. ಉಮೇಶ ಭಟ್ಟರು ಸಂಪ್ರದಾಯಸ್ಧ ಕುಟುಂಬದಿಂದ ಬಂದಿದ್ದರೂ, ಸಮಾಜದ ಎಲ್ಲಾ ಶೋಷಿತ ವರ್ಗದ ಜನರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರು ಎಂದು ಅವರ ಗುಣಗಾನ ಮಾಡಿದರು. ನಾನು ಅಂಕೋಲಾದಲ್ಲಿ ಕಾಲೇಜ್ ಉಪನ್ಯಾಸÀಕನಾಗಿ ಕಾರ್ಯರ್ನಿಹಿಸುತ್ತಿದ್ದ ಸಂಧರ್ಭದಲ್ಲಿ ವಾರಕ್ಕೆರಡುಬಾರಿಯಾದರೂ ಅವರನ್ನು ಸಂಪರ್ಕಿಸದೇ ಇರುತ್ತಿರಲಿಲ್ಲ. ಅಂಕೋಲಾ ಸುತ್ತಮುತ್ತಲಿನಲ್ಲಿರುವ ಬಡ ವರ್ಗದವರಾದ ಆಗೇರ, ಪಡ್ತಿ, ಹಾಲಕ್ಕಿ ಸಮಾಜದವರೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದರು. ಅವರು ಈ ಬಡವರ್ಗದಿಂದ À ಪ್ರೀತಿಯಿಂದ ‘ ಉಮ್ಮಣ್ಣ ಭಟ್ಟ “ ಅಂತಾ ಕರೆಸಿಕೊಳ್ಳುವುದನ್ನು ಡಾ. ಶ್ರೀಪಾದ ಶೆಟ್ಟಿಯವರು ಅತ್ಯಂತ ರೋಚಕತೆಯಿಂದ ವಿವರಿಸಿದರು.

Condolence meeting of Late.Umesh Bhat


ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ ನಾನು ಯುವ ಕಾಂಗ್ರೆಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನನ್ನ ಕಾರ್ಯಚಟುವಟಿಕೆಯನ್ನು ಗಮನಿಸಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು ಎಂದರು. ಉಮೇಶ ಭಟ್ಟರನ್ನು ಕಳೆದುಕೊಂಡ ಉತ್ತರ ಕನ್ನಡ ಕಾಂಗ್ರೆಸ್ ಕಾರ್ಯಕರ್ತರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಅವರು ದುಃಖಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು, ನ್ಯಾಯವಾದಿಗಳಾದ ಎಂ.ಎನ್. ಸುಬ್ರಹ್ಮಣ್ಯ ಮಾತನಾಡಿ ಉಮೇಶ ಭಟ್ಟರಂತಹ ಸರಳ ವ್ಯಕ್ತಿತ್ವದ ರಾಜಕಾರಣಿಯನ್ನು ನಾನು ಕಂಡಿಲ್ಲ. ನನ್ನ ಅವರ ಆತ್ಮೀಯತೆ ಹೇಗಿತ್ತೆಂದರೆ ಅವರು ಯಾವತ್ತೂ ಏಕವಚನದಲ್ಲಿ ನನ್ನನ್ನು “ದೋಸ್ತಾ” ಅಂತಾ ಅತ್ಯಂತ ಪ್ರೀತಿಯಿಂದ ಸಂಭೊದಿಸುತ್ತಿದ್ದರು ಎಂದರು. ನಾನು ಬೆಂಗಳೂರಿಗೆ ಹೋದಾಗಲೆಲ್ಲಾ ಅವರ ಮನೆಗೆ ತಪ್ಪದೇ ಹೋಗುತ್ತಿದ್ದೆ. ಹಾಗೆಯೇ ಅವರು ಕೂಡಾ ನಮ್ಮ “ಕರಿಕಾನಮ್ಮದೇವಿಯ“ ಭಕ್ತರಾಗಿದ್ದರಿಂದ ವರ್ಷಕ್ಕೊಮ್ಮೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಬಂದಾಗಲೆಲ್ಲಾ ತಪ್ಪದೇ ನನಗೆ ಪೋನ್ ಮಾಡಿ ಜೊತೆಯಲ್ಲಿಯೇ ದೇವಸ್ಥಾನಕ್ಕೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಬಾವುಕರಾಗಿ ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಮಾಜಿ ಶಾಸಕ ದಿ. ಉಮೇಶ ಭಟ್ಟರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅಗಲಿದ ನಾಯಕನಿಗೆÉ ಒಂದು ನಿಮಿಷದ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟÀಕದ ಉಪಾಧ್ಯಕ್ಷ ಹುಸೇನ್ ಖಾದ್ರಿ, ಕಾಂಗ್ರೇಸ್ ಇಂಟಕ್ ಘಟಕz ಅಧ್ಯಕ್ಷ ಆಗ್ನೇಲ್ ಡಾಯಸ್, ಬ್ಲಾಕ್ ಕಾಂಗ್ರೇಸ್ ಅಲ್ಪಸಂಖ್ಯಾv ಘಟಕದ ಅಧ್ಯಕ್ಷ ಜಕ್ರಿಯಾ ಸಾಬ್,À ಪಕ್ಷದ ಹಿರಿಯ ಮುಖಂಡರಾದ ಬಾಲಚಂದ್ರ ನಾಯ್ಕ, ಜೋಸೆಫ್ ಡಾÀಯಸ್, ಅಲೆಕ್ಸ್ ಪೌಲ್, ಅಲ್ಲು ಪರ್ನಾಂಡಿಸ್, ಕೃಷ್ಣ ಹರಿಜನ್, ಶ್ರೀಮತಿ ಅಕ್ಷತಾ ಮೇಸ್ತ, ಉದಯ್ ಮೇಸ್ತ, ಚಂದ್ರಶೇಖರ್ ಚಾರೋಡಿ, ಬ್ರಾಜಿಲ್ ಪಿಂಟೊ, ನೆಲ್ಸನ್ ರೊಡ್ರಗೀಸ್,ವಸಿಮ್ ಸಾಬ್, ಗಣಪತಿ ಗುನಗಾ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್‍ನ ಮುಸಾ ಅಣ್ಣಿಗೇರಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.

Condolence meeting of Late.Umesh Bhat

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಉಮೇಶ ಭಟ್ಟ, ಎಲ್ಲಾ ಜಾತಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ, ಡಾ: ಶ್ರೀಪಾದ ಶೆಟ್ಟಿ, ಮಾಜಿ ಶಾಸಕ ಉಮೇಶ ಭಟ್ಟ ಮನುಕುಲವನ್ನು ಪ್ರೀತಿಸುವ, ಮಾನವತಾವಾದಿಯಾಗಿದ್ದರು, ಮೇರು ವ್ಯಕ್ತಿತ್ವದ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,056 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...