
ಹಳಿಯಾಳ:- ಪ್ರಪಂಚದಲ್ಲಿ ಪರೋಪಕಾರಕ್ಕಿಂತ ಶ್ರೇಷ್ಠ ಧರ್ಮ ಮತ್ತೋಂದಿಲ್ಲ ಈ ನಿಟ್ಟಿನಲ್ಲಿ ಶ್ರೀ ಛತ್ರಪತಿ ಶಿವಾಜಿ ಮತ್ತು ಶ್ರೀ ಭಗತಸಿಂಗ ಸೇವಾ ಸಂಘಗಳು ಹಾಗೂ ಹಳಿಯಾಳ ತಾಲೂಕಾ ಗೆಳೆಯರ ಬಳಗದವರು ಮಾಡುತ್ತಿರುವ ಸಮಾಜ ಸೇವೆ ಅಭಿನಂದನಾರ್ಹ ಎಂದು ಬೆಂಗಳೂರಿನ ಗೋಸಾವಿ ಮಹಾಸಂಸ್ಥಾನ ಮಠದ, ಮರಾಠಾ ಜಗದ್ಗುರುಗಳಾದ, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜರು ಹೇಳಿದರು.

ಹಳಿಯಾಳ ತಾಲೂಕಿನವರಾದ ಸುಮಾರು 350ಕ್ಕೂ ಅಧಿಕ ಕುಟುಂಬಗಳು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ವಾಸಿಸುತ್ತಿದ್ದು ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಕಾರ್ಮಿಕರು ರಾಜ್ಯದ ವಿವಿದೆಡೆ ಪ್ರವಾಹ ಸಂತ್ರಸ್ಥರಿಗೆ ತಮ್ಮ ಒಂದು ದಿನದ ಸಂಬಳವನ್ನು ಒಟ್ಟೂಗೂಡಿಸಿ ನೆರೆಪೀಡಿತರಿಗೆ ಅವಶ್ಯಕವಾಗಿರುವ ಪರಿಹಾರ ಕಿಟ್ಗಳನ್ನು ವಿತರಿಸಿದ್ದು ಕೊನೆಯದಾಗಿ ಹಳಿಯಾಳ ತಾಲೂಕಿನ ಸುಮಾರು 25 ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳಂತೆ 2.50 ಲಕ್ಷ ರೂ. ಪರಿಹಾರ ಧನ ಸಂಗ್ರಹಿಸಿದ್ದರು.

ಬುಧವಾರ ಪಟ್ಟಣದ ಮರಾಠಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮರಾಠಾ ಜಗದ್ಗುರುಗಳಾದ ಮಂಜುನಾಥ ಮಹಾರಾಜರು ನೆರೆ ಸಂತ್ರಸ್ಥರಿಗೆ ಈ ಸಹಾಯಧನವನ್ನು ವಿತರಿಸಿ ಮಾತನಾಡಿದರು.
ಕೆಂಗೇರಿ ಉಪನಗರದಲ್ಲಿ ವಾಸಿಸುತ್ತಿರುವ ಹಳಿಯಾಳಿಗರ ಸಮಾಜ ಸೇವೆ ನೀಜಕ್ಕೂ ಇತರರಿಗೆ ಆದರ್ಶವಾಗಿದೆ ಎಂದ ಅವರು ಈ ಸಂಘಟನೆಗಳ ಕಾರ್ಯದಿಂದ ಹಳಿಯಾಳದ ಕೀರ್ತಿ ಬೆಂಗಳೂರಿನಂತಹ ಮಾಹಾನಗರದಲ್ಲಿ ಬೆಳಗುತ್ತಿದೆ ಎಂದು ಶ್ಲಾಘಿಸಿದರು.

ಪರೋಪಕಾರದಿಂದ ಮನುಷ್ಯನಲ್ಲಿಯ ಜೀಪುಣತನ, ಮೋಹ ದೂರವಾಗುತ್ತದೆ. ಮಮತೆ ಮತ್ತು ತ್ಯಾಗ ಮನೋಭಾವನೆ ಉಂಟಾಗುತ್ತದೆ ಎಂದ ಮಹಾರಾಜರು ಮನುಷ್ಯನಿಗೆ ಆಸೆ ಇರಬೇಕು ವಿನಃ ದುರಾಸೆಯಲ್ಲ. ಧರ್ಮ, ದಾನ, ಸಂಸ್ಕøತಿ, ತಪಸ್ವಿ, ಕ್ರೀಯಾಶೀಲ ಹಾಗೂ ಪರೋಪಕಾರಿಯಾಗಿರದ ಮನುಷ್ಯ ಭೂಮಿಗೆ ಯಾವತ್ತೂ ಭಾರವಾಗಿರುತ್ತಾನೆ ಎಂದರು.
ಸಮಾಜದಲ್ಲಿ ಕೆಟ್ಟವರಲ್ಲಿಯ ಒಳ್ಳೆಯ ಗುಣಗಳನ್ನು ಬೆಳಕಿಗೆ ತಂದು ಅವರನ್ನು ತಿದ್ದುವ ಪ್ರಯತ್ನ ಮಾಡೋಣ ಎಂದು ಕರೆ ನೀಡಿದ ಸ್ವಾಮೀಜಿಗಳು ಜೀವನದಲ್ಲಿ ಯಾರಿಗೂ ಕೆಡುಕನ್ನು ಬಯಸದೆ, ಪರರಿಗೆ ಪಿಡಿಸದೆ ಎಲ್ಲರಿಗೂ ಒಳಿತು ಬಯಸುತ್ತಾ ಪರೋಪಕಾರಿಯಾಗಿ ಬಾಳಿದರೇ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿವರ್ಷ ಬರಗಾಲವೇ ಸಂಭವಿಸುತ್ತಾ 15-20 ವರ್ಷಗಳ ಕಾಲ ಮಳೆಗಾಲ ಬರದೇ ಇದ್ದರೇ ನೀರಿಗೆ ಹಾಹಾಕಾರ ಉಂಟಾದರೇ ಭೂಮಿಯ ಮೇಲೆ ಮನುಷ್ಯ ಹಾಗೂ ಪ್ರಾಣಿಗಳ ಜೀವನವೇ ಅಂತ್ಯವಾಗುತ್ತದೆ ಹೀಗಾಗಿ ಸದ್ಯ ಸಂಭವಿಸಿರುವ ನೆರೆ ಕೂಡ ಭಗವಂತನ ಲಿಲೇಯೇ ಆಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ ಸ್ವಾಮೀಜಿಗಳು ಎಲ್ಲರೂ ಸೇರಿ ನೆರೆಯಲ್ಲಿ ಸಂತ್ರಸ್ಥರಾದವರಿಗಾಗಿ ಸಹಾಯ ಮಾಡುವ ಮೂಲಕ ಬದುಕು ಕಟ್ಟಿಕೊಡಬಹುದು ಆದರೇ ಮಳೆಯೇ ಬಾರದಿದ್ದರೇ ಊಹಿಸಿಕೊಳ್ಳಲು ಸಾಧ್ಯವಿಲ್ಲವೆಂದರು.

ದೇವನೊಬ್ಬ ನಾಮ ಹಲವು ಆಗಿದ್ದು ಸರ್ವವೂ ಪರಮಾತ್ಮನದ್ದೇ ಆಗಿರುವುದರಿಂದ ಪ್ರತಿಕ್ಷಣ ದೇವರಲ್ಲಿ ಪ್ರಾರ್ಥಿಸುವಂತೆ ಹೇಳಿದ ಅವರು ಯಾವುದೇ ಸಂದರ್ಭದಲ್ಲೂ ಭಗವಂತನಲ್ಲಿ ನಿರ್ಮಲ ಮನಸ್ಸಿನಿಂದ ಪ್ರಾರ್ಥಿಸಿದರೇ ಒಳಿತು ಉಂಟಾಗುತ್ತದೆ ಹೀಗಾಗಿ ಮತ್ತೇ ಪ್ರವಾಹ ಬರದಿರುವಂತೆ ದೇವರಲ್ಲಿ ಪ್ರಾರ್ಥಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಳಿಯಾಳ ತಾಲೂಕಾ ಗೆಳೆಯರ ಬಳಗದ ಪ್ರಮುಖರಾದ ಶೀವಾಜಿ ಮಾಳ್ವಿ, ವಿಜಯ ಟೋಸುರ, ಪರಶುರಾಮ ಮಾಳ್ವಿ, ಗಣಪತಿ ದೇವರಮನೆ, ವಾಸುದೇವ ಪಾಟೀಲ್, ನಾರಾಯಣ ಬೆಳಗಾವಕರ, ರವೀ ಗೌಡಾ, ಮಾರುತಿ ಚವ್ವಾಣ, ಸಂದೀಪ ನಿಂಬಾಳಕರ ಮೊದಲಾದವರು ಇದ್ದರು.





ಸಹಾಯ ಮನೋಭಾವದ ಈ ದೀಪಗಳ ದರ್ಶನ ದೇದಿಪ್ಯಮಾನವಾಗಿದೆ. ಧನ್ಯವಾದಗಳು ಧನಿಕರೇ…