
ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಯುವಕ ರಾದ ಸಾಗರ ಪಾಂಡುರಂಗ ಗುರವ(16) ಮತ್ತು ಓಂಕಾರ ರಾಮಲಿಂಗ ಸುತಾರ (22) ಈ ಇಬ್ಬರೂ ಯುವಕರು ಕೆರೆ ಯಲ್ಲಿ ಮುಳುಗಿ ಸಾವು ಸಂಭವಿಸಿದ್ದ ಘಟನೆ ಜರುಗಿದೆ. ಈ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
ಇದರ ಮಾಹಿತಿ ದೊರೆಯುತ್ತಿದ್ದತ್ತೆಯೇ ಮಾಜಿ ಶಾಸಕ ಅರವಿಂದ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಇಬ್ಬರ ಯುವಕರ ಮೃತದೇಹ ಖಾನಾಪೂರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಗೆ ರವಾನಿಸಿದ್ದಾರೆ ಈ ಇಬ್ಬರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಇಬ್ಬರ ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಇಬ್ಬರಿಗೂ ಸರಿಯಾಗಿ ಈಜಲು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ ಘಟನಾಸ್ಥಳಕ್ಕೆ ಖಾನಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a Comment