
ಹಳಿಯಾಳ:- ಹಳಿಯಾಳದಲ್ಲಿ ಬಹುಕೋಟಿ ಮೊತ್ತದ ಒಳ ಚರಂಡಿ ಕಾಮಗಾರಿ ಪ್ರಾರಂಭಿಸುವ ಮೊದಲು ಸಾರ್ವಜನೀಕರಿಂದ ಆಕ್ಷೇಪಣೆ, ಅಭಿಪ್ರಾಯ, ಅಹವಾಲುಗಳನ್ನು ಆಲಿಸದೆ ಸಾರ್ವಜನೀಕರಿಗೆ ವಿರುದ್ದವಾಗಿ ಕಾಮಗಾರಿ ಪ್ರಾರಂಭಿಸಿದಲ್ಲಿ ಸಾರ್ವಜನೀಕರೊಂದಿಗೆ ಸೇರಿ ಹಳಿಯಾಳ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಳಿಯಾಳ ಬಿಜೆಪಿ ಘಟಕವು ಖಡಕ್ ಎಚ್ಚರಿಕೆಯನ್ನು ನೀಡಿದೆ.
ಹಳಿಯಾಳ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾಜಿ ನರಸಾನಿ ನೇತೃತ್ವದಲ್ಲಿ ಪದಾಧಿಕಾರಿಗಳು, ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಹಾಗೂ ಪುರಸಭೆ ಬಿಜೆಪಿ ಸದಸ್ಯರುಗಳು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಈ ಬಗ್ಗೆ ಲಿಖಿತ ಮನವಿ ಸಲ್ಲಿಸುವ ಮೂಲಕ ಸಾರ್ವಜನೀಕರ ಅಭಿಪ್ರಾಯ, ಆಕ್ಷೇಪಗಳನ್ನು ಆಲಿಸದೆ ಕಾಮಗಾರಿ ನಡೆಸಿದರೇ ಆಗುವ ಅನಾಹುತಗಳ ಬಗ್ಗೆ ತಿಳಿಸಲಾಗಿದೆ. ಆದರೂ ತಾಲೂಕಾಡಳಿತ ಹಾಗೂ ಪುರಸಭೆಯವರು ನಿರ್ಲಕ್ಷ್ಯ ಧೋರಣೆ ತಾಳಿ ಗುತ್ತಿಗೆದಾರರನ್ನು ಬೆಂಬಲಿಸುತ್ತಾ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ತಿಳಿದು ಬಂದಿದ್ದು ಕೂಡಲೇ ಕಾಮಗಾರಿ ನಿಲ್ಲಿಸಬೇಕು.

ಜಿಲ್ಲಾಡಳಿತ, ತಾಲ್ಲೂಕಾಡಳಿತ ಹಾಗೂ ಪುರಸಭೆಯವರು ಒಳಚರಂಡಿ ಕಾಮಗಾರಿ ಪ್ರಾರಂಭಿಸುವ ಮೊದಲು ಮೊದಲು ಸಾರ್ವಜನಿಕ ಆಕ್ಷೇಪಣೆ ಅಭಿಪ್ರಾಯಗಳನ್ನು ಆಲಿಸಬೇಕು ಒಂದಾನುವೇಳೆ ಹೀಗಾಗದೆ ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ದವಾಗಿ ಕಾಮಗಾರಿಗಳನ್ನು ಪ್ರಾರಂಬಿಸಿದ್ದಲ್ಲಿ ಹಾಗೂ ಸಾರ್ವಜನಿಕ ಭದ್ರತೆಯನ್ನು ಒದಗಿಸದಿದ್ದಲ್ಲಿ ಹಳಿಯಾಳ ಬಿಜೆಪಿ ಘಟಕವು ಸಾರ್ವಜನೀಕರೊಂದಿಗೆ ಬಿದಿಗಿಳಿದು ಹಳಿಯಾಳ ಬಂದ್ ಮಾಡುವ ಮೂಲಕ ಊಗ್ರ ಹೊರಾಟ ನಡೆಸಲಿದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ಸಲ್ಲಿಸಿದ ಮನವಿಯಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಹಸ್ತಾಕ್ಷರವು ಇದ್ದು ಮನವಿ ಸಲ್ಲಿಸುವಾಗ ಪುರಸಭಾ ಸದಸ್ಯರಾದ ಚಂದ್ರಕಾಂತ ಕಮ್ಮಾರ, ಸಂತೋಷ ಘಟಕಾಂಬಳೆ, ಉದಯ ಹೂಲಿ, ರೂಪಾ ಗಿರಿ, ರಾಜೇಶ್ವರಿ ಹಿರೇಮಠ, ಶಾಂತಾ ಹಿರೇಕರ, ಸಂಗೀತಾ ಜಾಧವ, ಬಿಜೆಪಿ ಪ್ರಮುಖರಾದ ವಾಸು ಪೂಜಾರಿ, ಅನಿಲ ಮುತ್ನಾಳ, ಯಲ್ಲಪ್ಪಾ ಹೊನ್ನೊಜಿ ಮೊದಲಾದವರು ಇದ್ದರು.

Leave a Comment