
ನ್ಯಾಯಲಾಯದ ಕಾರ್ಯಕಲಾಪ ವಿಕ್ಷಣೆ ಮಧ್ಯೆ ಪುಣ್ಯಕ್ಷೇತ್ರಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮ ನೇರವೇರಿಸಿದರು.
ಹೊನ್ನಾವರ ತಾಲೂಕಿನ ಇಡುಗುಂಜಿ ಕ್ಷೇತ್ರಕ್ಕೆ ಬೆಂಗಳೂರು ಹೈಕೊರ್ಟ ನ್ಯಾಯಮೂರ್ತಿಗಳಾದ ಬಿ.ಎ. ಪಾಟೀಲ್ ಮತ್ತು ಶಂಕರ್ ಪಂಡಿತ ಭೇಟಿ ನೀಡಿ ಶ್ರೀ ವಿನಾಯಕ ದರ್ಶನ ಪಡೆದರು. ಶನಿವಾರ ಭಟ್ಕಳ ನ್ಯಾಯಲಯ ಕಾರ್ಯಕಲಾಪ ವಿಕ್ಷಣೆ ಬಳಿಕ ಹೊನ್ನಾವರದ ನ್ಯಾಯಲಕ್ಕೆ ಆಗಮಿಸುವ ಪೂರ್ವದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಗಣಹೋಮ, ಸತ್ಯನಾರಾಯಣ ಪೂಜೆ, ಸತ್ಯಗಣಪತಿ ವೃತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಹೊನ್ನಾವರ, ಅಂಕೋಲಾ, ಕಾರವಾರ ನ್ಯಾಯಲಯಕ್ಕೆ ಭೇಟಿ ನೀಡಿ ಕಾರ್ಯಕಲಾಪವನ್ನು ವಿಕ್ಷಿಸಿದರು.
ಈ ಸಂದರ್ಭದಲ್ಲಿ ತಾಲೂಕ ಹಿರಿಯಸಿವಿಲ್ ನ್ಯಾಯಧೀಶರಾದ ಚೆನ್ನಕೇಶವರೆಡ್ಡಿ,ಜೆ.ಎಮ್.ಎಪ್.ಸಿ. ನ್ಯಾಯಧೀಶರಾದ ಮಧುಕರ ಪಿ.ಭಾಗ್ವತ್, ದೇವಾಲಯದ ಅರ್ಚಕರು ಉಪಸ್ಥಿತರಿದ್ದರು.

Leave a Comment