
ಉತ್ತರ ಕನ್ನಡ ಜಿಲ್ಲೆಯ ಕ್ರೈಸ್ತರ ಪುಣ್ಯ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿರುವ ತಾಲೂಕಿನ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಪವಾಡ ಪುರುಷರೆಂದೆ ಪ್ರಸಿದ್ಧಿ ಪಡೆದಿದ್ದ ಸೇಂಟ್ ಝೇವಿಯರ್ ರವರ ಶರೀರದ ಉಗುರುರೇಲಿಕನ್ನು ಗೋವಾದಿಂದ ಚಂದಾವರ ಚರ್ಚಿನಲ್ಲಿ ತಂದಿಡಲಾಗಿದೆ.
ಪ್ರತಿವರ್ಷ ಡಿಸೆಂಬರ್ 3ರಂದು ಮಾತ್ರ ಇದನ್ನು ಭಕ್ತರ ದರ್ಶನಕ್ಕೆ ಇಡಲಾಗುತ್ತಿದ್ದು ಭಕ್ತರು ಜಾತಿಮತಬೇದವಿಲ್ಲದೆ ಈ ಹಬ್ಬ ದಲ್ಲಿ ಪಾಲ್ಗೊಳ್ಳುತ್ತಾರೆ. ಮುಂಜಾನೆಯ ವಾರ್ಷಿಕ ಹಬ್ಬದ ಮಹಾಪೂಜೆಯನ್ನು ಬೆಳಗಾವಿ ಕ್ರೈಸ್ತ ಧರ್ಮಾಧ್ಯಕ್ಷ ಡಾ.ಡಾ ಡೇರಿಕ್ ಫನಾರ್ಂಡೀಸ್ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ಸೇಂಟ್ ಝೇವಿಯರ್ ರವರು ಪ್ರಭು ಯೇಸುಕ್ರಿಸ್ತನನ್ನು ನಂಬಿದ ಮಹಾನ ಸಂತ್. ಅತ್ಯಂತ ಜ್ನಾನಿಯಾದ ಅವರು ಯೇಸುಕ್ರಿಸ್ತರ ಭೋದನೆಗೆ ಪ್ರಭಾವಿತರಾಗಿ ಅವರ ಧರ್ಮ ಸಾರಲು ಭಾರತಕ್ಕೆ ಬಂದಿದ್ದರು.ದೇವರ ಮಾರ್ಗದಲ್ಲಿ ಜನರು ಪರಿವರ್ತನೆ ಹೊಂದಲು ತಮ್ಮ ಜೀವನವನ್ನೇ ಮೂಡುಪಾಗಿಟ್ಟಿದ್ದರು. ದೇವರಲ್ಲಿಯ ಅವರ ನಂಬಿಕೆ ಅತ್ಯಂತ ಅಚಲವಾಗಿದ್ದು ನಾವು ಕೂಡಾ ಅವರ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಅನುಗ್ರಹಿತರಾಗಬಹುದು ಎಂದರು.
ಚಂದಾವರ ಚರ್ಚಿನ ಧರ್ಮ ಗುರುಗಳಾದ ಫಾ ಸಾಲ್ವಾದೊರರವರು ಸ್ವಾಗತಿಸಿ ವಂದಿಸಿದರು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಕ್ರೈಸ್ತ ರು ಮಹಾಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮುಂಜಾನೆಯಿಂದ ಸಂಜೆಯವರೆಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ರೇಲಿಕ ದರ್ಶನ ಪಡೆದರು.
ಕಾರವಾರ ಶಾಸಕಿ ರೂಪಾಲಿ ನಾಯ್ಕ, ಸೆಂಟ್ ಮಿಲಾಗ್ರೀಸ್ ಸೌಹಾರ್ದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಜೋರ್ಜ ಫನಾರ್ಂಡೀಸ್ ಮುಂತಾದವರು ಪಾಲ್ಗೊಂಡಿದ್ದರು.


Leave a Comment