
ಹಳಿಯಾಳ:- ಸನಾತನ ಸಂಸ್ಕøತೀಯ ಭಾರತ ದೇಶದಲ್ಲಿ ಜ್ಞಾನ ಮತ್ತು ಭಕ್ತಿಗೆ ಮಹತ್ವವಿದ್ದು ಎಲ್ಲರೂ ಜ್ಞಾನ, ಭಕ್ತಿ, ಸಂಸ್ಕøತಿ ಹೊಂದಿ ಶಿಸ್ತನ್ನು ಅಳವಡಿಸಿಕೊಂಡು ಸುಂದರ ಜೀವನ ನಡೆಸುವಂತೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ್ ಅವರು ಕರೆ ನೀಡಿದರು.
ಕಳೆದ 6 ದಿನಗಳಿಂದ ಪಟ್ಟಣದ ಗಣೇಶ ನಗರದ ವಿಠ್ಠಲ ರುಕ್ಮಾಯಿ, ಸಿದ್ದೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ ಜ್ಞಾನೇಶ್ವರಿ ಹಾಗೂ ಮಂಚರಿ ಪಾರಾಯಣ ಸೊಹಳಾ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾರಾಜರು ಪ್ರವಚನ ನೀಡಿದರು.
ಭಾರತವು ರುಷಿಮುನಿ, ಸಾಧು-ಸಂತರ, ಛತ್ರಪತಿ ಶಿವಾಜಿ ಮಹಾರಾಜರು, ಸ್ವಾಮಿ ವಿವೇಕಾನಂದರು ಇನ್ನಿತರ ಮಹಾನ್ ಮೇಧಾವಿಗಳು, ರಾಜರು, ಜ್ಞಾನಿಗಳು, ಮಹಾಪುರುಷರು ಜನಿಸಿದ ಪುಣ್ಯಭೂಮಿಯಾಗಿದೆ ಎಂದ ಸ್ವಾಮಿಜಿ ಅವರ ತತ್ವಾದರ್ಶಗಳನ್ನು ನಾವುಗಳು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕಿದೆ ಎಂದರು.
ಆಧ್ಯಾತ್ಮಿಕ ಕ್ಷೇತ್ರದಲ್ಲಿ ಜ್ಞಾನಕ್ಕೆ ಅಪಾರ ಮಹತ್ವವಿದೆ ಎಂದು ಅಭಿಪ್ರಾಯಪಟ್ಟ ಅವರು ಪದ, ಪ್ರತಿಷ್ಠೆಗಳೆಲ್ಲವು ಮನುಷ್ಯನ ದಾಹವಾಗಿದೆ ಎಂದು ಪ್ರತಿಪಾದಿಸಿದರು. ಎಲ್ಲಿಯೂ-ಯಾರಲ್ಲಿಯೂ-ಯಾವ ವಿಷಯದಲ್ಲಿಯೂ ಭೇದ ಭಾವ ಮಾಡಬೇಡಿ ಭೇದವಿದ್ದಲ್ಲಿ ಅಮಂಗಳವಿರುತ್ತದೆ ಕಾರಣ ಸದ್ಯ ಎಲ್ಲರಲ್ಲಿ ಕಾಣುತ್ತಿರುವ ಭೇದ ಭಾವದ ಮನೋಭಾವನೆ ದೂರವಾಗಬೇಕಿದೆ ಎಂದು ನುಡಿದರು.
ಮಕ್ಕಳಿಗೆ ಮೊಬೈಲ್ನಿಂದ ದೂರವಿಡಿ:- ಸನ್ಮಾರ್ಗದಲ್ಲಿ ನಡೆಯುವವ, ಸನ್ಮಾರ್ಗ ಕಲಿಸಿಕೊಡುವವ, ವಿನಯ ಸಂಪನ್ನ, ಸದಾಚಾರಿ ಹಾಗೂ ಜ್ಞಾನವಂತನೇ ನೀಜವಾದ ಸಂತನಾಗಿರುತ್ತಾನೆ ಎಂದ ಮಂಜುನಾಥ ಮಹಾರಾಜರು ಕಂಪ್ಯೂಟರ್ ಯುಗದಲ್ಲಿನ ಈಗಿನ ಮಕ್ಕಳಿಗೆ ಸಂಸ್ಕøತೀಯ ಬಗ್ಗೆ ಕಲಿಸಬೇಕಿದೆ. ಶಿಸ್ತಿನ ಪಾಠ ಮಾಡಬೇಕಿದೆ ಜೊತೆಗೆ ಅವರನ್ನು ಮೊಬೈಲ್ ಬಳಕೆಯಿಂದ ದೂರವಿಟ್ಟರೇ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತೆ ಎಂದು ಪಾಲಕರಿಗೆ ಕಿವಿ ಮಾತು ಹೇಳಿದರು.

ಪಟ್ಟಾಭಿಷೇಕಕ್ಕೆ ಆಮಂತ್ರಣ:- ವಾರಕರಿ ಸಮುದಾಯದವರು ಹಳಿಯಾಳದಲ್ಲಿ 7 ದಿನಗಳ ಕಾಲ ವಿಶಿಷ್ಠ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಅಚ್ಚುಕಟ್ಟಾಗಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವುದನ್ನು ಶ್ಲಾಘಿಸಿದ ಸ್ವಾಮೀಜಿಗಳು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದಲ್ಲೂ ಮುಂದಿನ ದಿನಗಳಲ್ಲಿ ವಾರಕರಿ ಸಮುದಾಯದ ವಾರಕರಿ, ಮಹಾರಾಜರನ್ನು ಕರೆದು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುವ ಯೋಚನೆ ತಮ್ಮದಾಗಿದೆ ಎಂದು ತಿಳಿಸಿದರು.
ಇನ್ನೂ 2020ರ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದಲ್ಲಿ ನಡೆಯುವ ತಮ್ಮ ಪಟ್ಟಾಭಿಷೇಕ ಕಾರ್ಯಕ್ರಮಕ್ಕೂ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ್ ಅವರು ಪ್ರವಚನ ಕಾರ್ಯಕ್ರಮದಲ್ಲೇ ಆಮಂತ್ರಣ ನೀಡಿದರು.
ಪ್ರವಚನದ ಬಳಿಕ ಪಂಡರಪೂರದ ಹಬಪ ನಾಮದೇವ ಸಾಕತಕರ ಮಹಾರಾಜ ಅವರಿಂದ ಕೀರ್ತನೆ ಕಾರ್ಯಕ್ರಮ ಜರುಗಿತು.
Leave a Comment