
ಹಳಿಯಾಳ:- 32 ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಗಣೇಶ ನಗರದಲ್ಲಿ ನಿರ್ಮಿಸಿದ ವಿಠ್ಠಲ ರುಕ್ಮಾಯಿ, ಜ್ಞಾನೇಶ್ವರ- ಸಿದ್ದೇಶ್ವರ ದೇವಸ್ಥಾನದ ಎದುರು 7 ದಿನಗಳ ಕಾಲ ನಡೆದ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ ಜ್ಞಾನೇಶ್ವರಿ ಹಾಗೂ ಮಂಚರಿ ಪಾರಾಯಣ ಸೊಹಳಾ ಧಾರ್ಮಿಕ ಕಾರ್ಯಕ್ರಮ ದಶಮಿ ಕಾಲಾ ಕಿರ್ತನೆ ಹಾಗೂ ನಗರ ಪ್ರದಕ್ಷಿಣೆ ಮೂಲಕ ಸಂಪನ್ನಗೊಂಡಿತು.
ಮಹಾರಾಷ್ಟ್ರದ ಪ್ರಸಿದ್ದ ಸುಕ್ಷೇತ್ರ ಪಂಡರಪೂರದ ಹಬಪ ಪ್ರಸಾದ ವಿವೇಕಾನಂದ ವಾಸ್ಕರ(ಬಾವು ಮಾಲಕ), ಹಬಪ ಕೌಸ್ತುಬ ವಿವೇಕಾನಂದ ವಾಸ್ಕರ(ರಾವು ಮಾಲಕ), ಹಬಪ ದೇವವೃತ ವಿವೇಕಾನಂದ ವಾಸ್ಕರ(ರಾಣು ಮಾಲಕ) ಮಹಾರಾಜರ ಆದಿಷ್ಠಾನದಲ್ಲಿ ಸತತ 7 ದಿನಗಳ ಕಾಲ ನಡೆದ ಆಧ್ಯಾತ್ಮೀಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಪುನಿತರಾದರು.
ಪ್ರತಿದಿನ 10 ರಿಂದ 12 ಅಂದರೇ ಸರಿ ಸುಮಾರು 100ಕ್ಕೂ ಹೆಚ್ಚು ಗ್ರಾಮದ ಭಜನಾ ಮಂಡಳಿಗಳಿಂದ ಪ್ರತಿದಿನ ದೇವರ ಭಜನೆಯೊಂದಿಗೆ ಜಾಗರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆದವು. ಪ್ರತಿದಿನ ಭಜನೆ, ಕಿರ್ತನೆ, ಪ್ರವಚನ, ಗಾಯನ, ವೀಣಾ ವಾದನ, ಮೃದಂಗವಾದನಗಳು ಜನಸಾಗರವನ್ನು ಭಕ್ತಿಯ ಸೆಲೆಯಲ್ಲಿ, ಆಧ್ಯಾತ್ಮಿಕ ಲೋಕದಲ್ಲಿ ಮಗ್ನವಾಗಿಸಿದ್ದು ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಎಲ್ಲರ ಶ್ಲಾಘನೆಗೆ ಪಾತ್ರವಾಯಿತು.
ವೃದ್ದರು, ಮಹಿಳೆಯರು, ಮಕ್ಕಳೆನ್ನದೆ ಸಾವಿರಾರು ಜನ ಪ್ರತಿದಿನ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ ಜ್ಞಾನೇಶ್ವರಿ ಹಾಗೂ ಮಂಚರಿ ಪಾರಾಯಣ ಸಮಾರೋಪ ಹಾಗೂ ದಶಮಿ ಕಾಲಾ ಕಿರ್ತನೆ ಮತ್ತು ನಗರ ಪ್ರದಕ್ಷಿಣೆ ಮೂಲಕ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಭಕ್ತಿಯ ತೆರೆ ಎಳೆಯಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ದೇಮಾಣಿ ಮಡಿವಾಳ, ಜನ್ನು ಕೊಳಾಪ್ಟೆ, ಪಿಶಪ್ಪಾ ಬೊಗುರಕರ, ಸೋಮನಿಂಗ ಶಿರೊಳಕರ, ಮಹೇಶ ನೆವಗೆರಿ, ವಿಠ್ಠಲ ಚಲವಾದಿ, ನಾರಾಯಣ ಕೊಲೆಕರ, ನೇತಾಜಿ, ವಿಠ್ಠಲ ಮಳಿಕ ಇತರರು ಇದ್ದರು.
Leave a Comment