
ಹಳಿಯಾಳ:- ತಮ್ಮ ಮನವಿಯ ಮೆರೆಗೆ ದಾಂಡೇಲಿ-ಧಾರವಾಡ ರೈಲ್ವೆ ಸಮಯ ಬದಲಾವಣೆ ಮಾಡಿದ್ದು ಹೊಸ ರೈಲ್ವೆ ಸಮಯವು ದಿ.13 ರಿಂದ ಜಾರಿಗೆ ಬರಲಿದೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ದಾಂಡೇಲಿಯ ಪ್ರವಾಸೋದ್ಯಮ ಹಾಗೂ ಸಾರ್ವಜನಿಕರ ದೃಷ್ಟಿಯಿಂದ ಅಂಬೇವಾಡಿ–ಧಾರವಾಡ ಪ್ಯಾಸೆಂಜರ್ ರೈಲು ಪುನರಾರಂಭಗೊಂಡಿದೆ.
ಆದರೇ ರೈಲಿನ ವೇಳಾಪಟ್ಟಿಯಿಂದ ಸಾರ್ವಜನೀಕರಿಗೆ ಇದರ ಅನುಕೂಲವಾಗುತ್ತಿರಲಿಲ್ಲ ಕಾರಣ ಆಗುತ್ತಿರುವ ಅನಾನುಕೂಲತೆ ಸರಿ ಪಡಿಸಿ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರಿಗೆ ಹಾಗೂ ನೈರುತ್ಯರೈಲ್ವೆ ವಿಭಾಗ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್ ಅಜಯಕುಮಾರ ಸಿಂಗ್ ಅವರಿಗೆ ಕಳೆದ ತಿಂಗಳು ಪತ್ರ ಬರೆಯಲಾಗಿತ್ತು.

ನನ್ನ ಪತ್ರವನ್ನು ಪ್ರಾಧ್ಯಾನತೆಯ ಮೇಲೆ ಪರಿಗಣಿಸಿ ಇಷ್ಟು ಬೇಗನೇ ಧಾರವಾಡ–ಅಂಬೇವಾಡಿ(ದಾಂಡೇಲಿ) ಮಾರ್ಗದರೈಲಿನ ವೇಳಾಪಟ್ಟಿಯನ್ನು ಬದಲಾಯಿಸಿ ಇದೇ ತಿಂಗಳ 13ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿರುವುದಕ್ಕೆ ದಾಂಡೇಲಿ ಜನತೆಯ ಪರವಾಗಿ ಅಭಿನಂದನೆಗಳನ್ನು ಅವರು ಸಲ್ಲಿಸಿದ್ದಾರೆ.
ರೈಲಿನ ವೇಳಾಪಟ್ಟಿಯ ಬದಲಾವಣೆಯಿಂದ ದಾಂಡೇಲಿ ಹಾಗೂ ಸುತ್ತಮುತ್ತಲಿನಿಂದ ಧಾರವಾಡಕ್ಕೆ ಕೆಲಸಕ್ಕಾಗಿ ಹೋಗಿ ಬರುವ ನೂರಾರು ಜನರಿಗೆ ಅನೂಕೂಲವಾಗುವುದಲ್ಲದೇ, ಈ ಭಾಗದ ಪ್ರವಾಸೋದ್ಯಮವೂ ಕೂಡಾ ಬೆಳೆಯುತ್ತದೆ. ಜೊತೆಗೆ ರೈಲ್ವೇ ಇಲಾಖೆಯ ಆದಾಯವೂ ಹೆಚ್ಚಿಗೆ ಆಗುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸದರಿರೈಲಿನ ವೇಳಾಪಟ್ಟಿ ಈ ಕೆಳಗಿನಂತಿದೆ.
• ಹುಬ್ಬಳ್ಳಿಯಿಂದ ಬೆಳಗ್ಗೆ 5ಗಂಟೆಗೆ ಹೊರಟು, ದಾಂಡೇಲಿ ಬೆಳಗ್ಗೆ 7.25ಕ್ಕೆ ತಲಪುತ್ತದೆ. ಪುನಃ ಬೆಳಗ್ಗೆ 8 ಗಂಟೆಗೆಅಂಬೇವಾಡಿಯಿಂದ ಹೊರಟುಧಾರವಾಡ ಬೆಳಗ್ಗೆ 9.45ಕ್ಕೆ ತಲುಪುತ್ತದೆ.
• ಸಂಜೆ 5.30ಕ್ಕೆ ಧಾರವಾಡದಿಂದ ಹೊರಟುರಾತ್ರಿ 7ಗಂಟೆಗೆ ಅಂಬೇವಾಡಿತಲಪುತ್ತದೆ. ರಾ. 7.50ಕ್ಕೆ ಪುನಃ ಅಂಬೇವಾಡಿಯಿಂದ ಹೊರಟುರಾತ್ರಿ 10.45ಕ್ಕೆ ಹುಬ್ಬಳ್ಳಿ ತಲಪುತ್ತದೆ.
Leave a Comment