
ಹಳಿಯಾಳ:- ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಮುಂದೆ ನಡೆಯಲಿರುವ ಸಹಕಾರಿ ಸಂಘಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆಂದು ತಾಲೂಕ ಪಂಚಾಯತ ಸದಸ್ಯರು ಆಗಿರುವ ರೈತ ಮುಖಂಡ ಗಿರೀಶ ಟೋಸುರ ಹಾಗೂ ಕೆಲವು ರೈ ಮುಖಂಡರು ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಟೋಸುರ ಹಾಗೂ ಇತರ ಮೂವರು ರೈತ ಮುಖಂಡರಾದ ಪಾಂಡು ಶಂಕರ ಪಾಟೀಲ್, ಸಾತುರಿ ಗೊಡಿಮನಿ, ವಿಠ್ಠಲ ಕೆಡ್ಲಿ ಅವರುಗಳು ಘೊಟ್ನೇಕರ ಅವರು ರೈತರ ಪರವಾಗಿರದೇ ಮುಂದಿನ ರೈತರ ಸೇವಾ ಸಹಕಾರಿ ಸಂಘಗಳಿಗೆ ನಡೆಯುವ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ರೈತರ ದಾರಿ ತಪ್ಪಿಸಲು ಈ ರೀತಿ ಕಂಪೆನಿ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದರು.
ಘೊಟ್ನೇಕರ ಅವರಿಗೆ ರೈತರ ಪರವಾಗಿ ಕಾಳಜಿ ಇದ್ದದ್ದೇ ಆಗಿದ್ದರೇ ಕಳೆದ ತಿಂಗಳು ಇದೆ ಕಾರ್ಖಾನೆಯ ಆವರಣದಲ್ಲಿ ನಡೆದ ಪರಿಸರ ಅಹವಾಲು ಆಲಿಕೆ ಸಭೆಯಲ್ಲಿ ರೈತರು ಪ್ಯಾರಿ ಕಾರ್ಖಾನೆಯವರು ಕಬ್ಬು ಕಟಾವು ಮಾಡಿಕೊಂಡು ಬಂದಹಂತಹ ರೈತರ ಕಬ್ಬುಗಳಿಗೆ 5%, 6% ಕಟ್ಟಾವು ಬಗ್ಗೆ ತಕರಾರು ಮಾಡಿದಾಗ ಇದೇ ವಿಧಾನ ಪರಿಷತ್ ಸದಸ್ಯರು ರೈತರ ಧ್ವನಿಯಾಗಿ ರೈತರ ಪರವಾಗಿ ಮಾತನಾಡದೆ ಕಾರ್ಖಾನೆಯ ಪರವಾಗಿ ಮಾತನಾಡಿದರು ಎಂದು ಕಿಡಿ ಕಾರಿರುವ ರೈತ ಮುಖಂಡರು ಈಗ ಸೊಸೈಟಿಗಳ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪತ್ರಿಕೆಗಳ ಮೂಲಕ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ ಎಂದಿದ್ದಾರೆ.
ಈಗಾಗಲೆ ಸಕ್ಕರೆ ಕಾರ್ಖಾನೆಯವರು ಸ್ಥಳಿಯ ಕಬ್ಬು ಸಾಗಾಟದಲ್ಲಿ 4500 ಟನ್ ಪ್ರತಿ ದಿವಸ ಮಾಡುತ್ತಿದಾರೆ. ಉಳಿದ 1500 ಟನ್ ಕಬ್ಬು ತಮ್ಮ ವ್ಯಾಪ್ತಿಯ ಪ್ರದೇಶಗಳಿಂದ ತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಚ್ಚಿನ ಪ್ರಾಶಸ್ತ್ಯವನ್ನು ಸ್ಥಳೀಯರಿಗೆ ನೀಡಿದರೇ ಒಳಿತು ಎಂದು ಗಿರಿಶ ಟೋಸುರ ಹಾಗೂ ಇತರ ರೈತರು ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
Leave a Comment