
#ಜೋಯಿಡಾ :-
ಜೋಯಿಡಾ ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ #ಶಿಕ್ಷಕ ರೋಸಯ್ಯರೆಡ್ಡಿ ಪೋಗೊ ಎನ್ನುವ ಶಿಕ್ಷಕ ೪ ನೇ ತರಗತಿಯ ವಿದ್ಯಾರ್ಥಿ ಜಾನು ಗೌಳಿ ಎನ್ನುವವನಿಗೆ ಕೈ ಕಾಲು ಕಟ್ಟಿ ಬಾಸುಂಡೆ ಬರುವ ಹಾಗೆ ಹೊಡೆದ ಅಮಾನವೀಯ ಘಟನೆ #ಸೋಮವಾರ ಮಧ್ಯಾಹ್ನ ನಡೆದಿದೆ.
ಶಾಲೆಗೆ ಬರಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಯನ್ನು ಕೈ ಕಾಲು ಕಟ್ಟಿ ಮನಸ್ಸಿಗೆ ಬಂದಂತೆ ವಿದ್ಯಾರ್ಥಿಯ ಮೇಲೆ ಕ್ರೂರಿ ಶಿಕ್ಷಕ ಹಲ್ಲೆ ಮಾಡಿದ್ದಾನೆ.

ಶಿಕ್ಷಕನ ರಾಕ್ಷಸಿ ಕೃತ್ಯಕ್ಕೆ ವಿದ್ಯಾರ್ಥಿ ಅಸ್ವಸ್ಥನಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆ ಶಾಲೆಗೆ ಧಾವಿಸಿದ ಸಾರ್ವಜನಿಕರು ಹಾಗೂ ಸಂಬಂಧಿಕರು ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ.
ಅಮಾನವೀಯ ವರ್ತನೆ ನಡೆಸಿದ ಶಿಕ್ಷಕ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು ಇತನ ಮೇಲೆ ಪೋಲಿಸ್ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ವರದಿಯಾಗಿದೆ



Leave a Comment