
ಜೋಯಿಡಾ;
ದೇಶದ 450 ಸಂಸ್ಥೆಗಳು ಕೃಷಿ ಸಂಸೋಧನೆಯಲ್ಲಿ ತೊಡಗಿವೆ. ಭತ್ತದ ಬೆಳೆಗೆ ರೈತರಿಗೆ ಲಾಭವಿಲ್ಲ. ಪರ್ಯಾಯ ಬೆಳೆಯನ್ನು ಬೆಳೆಯುವಲ್ಲಿ ರೈತರಿಗೆ ಮಾರ್ಗದರ್ಶನ ಮತ್ತು ಸಹಕಾರ ಅಗತ್ಯ ಇದೆ. ಕೇಂದ್ರ ಸರಕಾರದ ಹಲವು ಕೃಷಿ ಅಭಿವೃದ್ದಿ ಪರವಾದ ಯೋಜನೆಗಳಿದ್ದು ರೈತರಿಗೆ ಪರಿಚಯ ಇಲ್ಲದೇ ಸದುಪಯೋಗವಾಗುತ್ತಿಲ್ಲ. ಜೋಯಿಡಾ ಅಭಿವೃದ್ದಿಗೆ ಕೃಷಿ ಪ್ರೋತ್ಸಾಹಿಸಬೇಕಾಗಿದೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.
ಅವರು ಜೋಯಿಡಾ ಕುಣಬಿ ಭವನದಲ್ಲಿ ಕೃಷಿ ಇಲಾಖೆ ಜೋಯಿಡಾ, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಕದಂಬ ಪೌಂಡೇಷನ್ ಶಿರಸಿ ಇವರ ಸಂಯೂಕ್ತ ಆಶ್ರಯದಲ್ಲಿ ನಡೆದ ‘ಹೊಸ ಬೆಳೆಗಳ ಪರಿಚಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡುತ್ತಿದ್ದರು.

ತಾಲೂಕಿನಲ್ಲಿ ಪ್ರವಾಸೋಧ್ಯಮದಿಂದ ಅತ್ಯಲ್ಪ ಪ್ರಮಾಣದಲ್ಲಿ ಉಧ್ಯೊಗ ಶೃಷ್ಟಿಯಾಗಿರಬಹುದು. ಆದರೆ ಇಲ್ಲಿ ಬಹುಭಾಗ ಕೃಷಿಕರು ಇದ್ದಾರೆ. ಇಲ್ಲಿಯ ಕೃಷಿ ಜಮಿನನ್ನು ಅಭಿವೃದ್ದಿ ಪಡಿಸಿ ಪರ್ಯಾಯ ಬೆಳೆಗಳನ್ನು ಬೆಳೆಸಬೇಕು. ಜೋಯಿಡಾದ ಕೃಷಿಕರಿಗೆ ಕಾಡು ಪ್ರಾಣಿಗಳ ಕಾಟವಿದೆ. ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಮಾಡಬಾರದಂತಹ ಬೆಳೆಯನ್ನು ಬೆಳೆಯಲು ಇಲ್ಲಿ ಸಾಕಷ್ಟು ಅವಕಾಶಗಳಿವೆ. ಪಾಂಬೋಸಾ, ಚಿಯಾಗಳಂತಹ ಟೆಪ್ ಬೆಳೆಗಳನ್ನು ಬೆಳೆಯಬೇಕಾಗಿದೆ. ಅನೇಕ ಕೃಷಿ ವಿಶ್ವವಿಧ್ಯಾಲಯದ ಪ್ರಮುಖರನ್ನು ಕರೆಯಿಸಿ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ. ನಮ್ಮ ಅಭಿವೃದ್ದಿಯನ್ನು ನಾವು ಮಾಡಬೇಕಿದೆ. ಉತ್ಪಾದಿಸಿದ ವಸ್ತುಗಳಿಗೆ ಮಾರಕಟ್ಟಿಯೂ ಸರಕಾರದಿಂದಲೂ ನೀಡಲಾಗುವುದು. ಬರುವ ಜುನ್ ತಿಂಗಳಿನಿಂದ ಹೊಸಬೆಳೆಗಳನ್ನು ಬೆಳೆದು ಕೃಷಿಯಲ್ಲಿ ತೊಡಗುವಂತೆ ರೈತರಿಗೆ ಕರೆ ನೀಡಿದರು.
ರೈತರ ಕಾರ್ಯಕ್ರಮದಲ್ಲಿ ರಾಜಕಾರಣ ಬೇಡಾ; ರೈತರಿಗೆ ಉಪಯೋಗವಾಗು ಕಾರ್ಯಕ್ರಮವನ್ನು ತಲುಪಿಸುವಾಗ ಯಾರು ರಾಜಕಾರಣ ಮಾಡಬಾರದು. ಎಲ್ಲ ರೈತರು ಇದರ ಪ್ರಯೋಜನ ಪಡೆಯಬೇಕು.
ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಮಾಜಿ ಶಾಸಕ ಸುನಿಲ್ ಹೆಗಡೆ,ಬಿಜೆಪಿ ಅಧ್ಯಕ್ಷ ಸಂತೋಷ ರೆಡಕರ, ಮಾಜಿ ಅಧ್ಯಕ್ಷ ತುಕಾರಾಮ ಮಾಂಜ್ರೆಕರ, ಬಜಾರಕುಣಂಗ ಗ್ರಾ.ಪಂ.ಉಪಾಧ್ಯಕ್ಷ ಅಜಿತ ಮಿರಾಶಿ, ಕುಣಬಿ ಸಮಾಜ ಅಧ್ಯಕ್ಷ ಜಯಾನಂದ ಡೇರೆಕರ, ತಹಶಿಲ್ದಾರ ಸಂಜಯ ಕಾಂಬ್ಳೆ, ಇ.ಓ. ಆನಂದ ಬಡಗುಂದ್ರಿ, ಸಹಾಯ ಕೃಷಿ ಅಧಿಕಾರಿ ಪಿ.ಐ.ಮಾನೆ ಸ್ವಾಗತಿಸಿ ಪ್ರ್ರಾಸ್ತಾವಿಕ ಮಾತನಾಡಿದರು.

Leave a Comment