
ಜೋಯಿಡಾ –
ಹರಹರ ಮಹಾದೇವ,ಹರಹರ ಮಹಾದೇವ, ಉಳವಿ ಚೆನ್ನಬಸವೇಶ್ವರ ಮಹರಾಜ ಕೀ ಜೈ ಎನ್ನುತ್ತ ಲಕ್ಷಾಂತರ ಭಕ್ತರ ಜಯಘೋಷಗಳೊಂದಿಗೆ ಉಳವಿ ಚೆನ್ನಬಸವೇಶ್ವರ ಜಾತ್ರೆಯ ಮಹಾ ರಥೋತ್ಸವ ನಡೆಯಿತು.
ಶ್ರೀ ಕ್ಷೇತ್ರ ಉಳವಿ ಚೆನ್ನಬಸವಣ್ಣನವರ ಜಾತ್ರೆ ಪ್ರತಿ ವರ್ಷ ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ನಡೆಯುತ್ತದೆ. ಇಂದೂ ಕೂಡಾ ಮಧ್ಯಾಹ್ನ 4 ಘಂಟೆಗೆ ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸಿದ ನಂತರ ತೇರು ಎಳೆದರು, ಲಕ್ಷಾಂತರ ಭಕ್ತರು ಮಹಾ ರಥೋತ್ಸವ ನೋಡಿ ಧನ್ಯರಾದರು.
ಶ್ರೀ ಕ್ಷೇತ್ರ ಉಳವಿ ಜೋಯಿಡಾ ತಾಲೂಕಿನ ಶ್ರದ್ದಾ ಭಕ್ತಿ ಕೇಂದ್ರ 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮವರೊಂದಿಗೆ ಬಂದು ಉಳವಿಯಲ್ಲಿ ನೆಲೆಸಿದರು ,ವಚನ ಸಾಹಿತ್ಯ ರಕ್ಷಣೆ, ಅನ್ನದಾಸೋಹ ಅಂದಿನಿಂದ ನಿರಂತರವಾಗಿ ಇಲ್ಲಿ ನಡೆಯುತ್ತಲೆ ಬಂದಿತು.

ಶ್ರೀ ಕ್ಷೇತ್ರಕ್ಕೆ ಹಿಂದೆ ಸಂಪರ್ಕದ ಕೊರತೆ ಇದ್ದಾಗ ಭಕ್ತರು ಚಕ್ಕಡಿ ಗಾಡಿಗಳ ಮೂಲಕ ವಾರಗಳ ಕಾಲ ಕಾಡಿನಲ್ಲಿ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗಲೂ ಕೂಡಾ ನೂರಾರು ಚಕ್ಕಡಿಗಳಲ್ಲಿ ಭಕ್ತರು ಬಂದು ತಮ್ಮ ಶ್ರದ್ದಾ ಭಕ್ತಿಯೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಷಯ. ಅಲಂಕೃತ ಎತ್ತುಗಾಡಿಗಳಲ್ಲಿ ಅಡಕೇಶ್ವರ ಮಡಕೇಶ್ವರ ಉಳವಿ ಚೆನ್ನಬಸವೇಶ್ವರ ಎನ್ನುತ್ತ ರಸ್ತೆಗಳಲ್ಲಿ ಎತ್ತುಗಳ ಕಾಲಿಗೆ ಕಟ್ಟಿದ ಗೆಜ್ಜೆಯ ಸಪ್ಪಳ ಕೇಳುತ್ತ, ನೋಡುತ್ತಾ ಸಂತಸದಿಂದ ಬಸವಣ್ಣನನ್ನು ನೋಡುಲು ಆಮವಿಸುವ ಭಕ್ತರು , ಜೋಳದ ರೊಟ್ಟಿ ಚಟ್ನಿಪುಡಿ,ಮುಳಗಾಯಿ ಪಲ್ಯವನ್ನು ಬಂದತ ಭಕ್ತರಿಗೆ ಉಳವಿ ದಾಸೋಹ ನೀಡುತ್ತಿರುವುದು ಸಂತಸದ ವಿಷಯ.
ಏನೇ ಆಗಲಿ ಉಳವಿ ಜಾತ್ರೆ ತಪ್ಪಿಸೋದಿಲ್ಲರಿ, ವರ್ಷಕೊಮ್ಮೆ ನೋಡದಾಗನೇ ಸಮಾಧಾನರಿ ಅಂತ ಪಾದಯಾತ್ರೆಗಳ ಮೂಲಕ ಜಾತ್ರೆಗೆ ಬರುವ ಭಕ್ತರು ಹೇಳುವ ಮಾತು. ನೂರಾರು ಕಿ,ಮೀ,ನಡೆದು ಉತ್ತರಕರ್ನಾಟಕದ ಭಕ್ತರು ಉಳವಿಗೆ ಬರುತ್ತಾರೆ.
ಶ್ರೀ ಕ್ಷೇತ್ರದಲ್ಲಿ ಉಳವಿ ಗ್ರಾ.ಪಂ.ಕುಡಿಯುವ ನೀರಿನ,ಶೌಚಾಲಯದ ವ್ಯವಸ್ಥೆ ಮಾಡಿದೆ, ಆರೋಗ್ಯ ಇಲಾಕೆ, ಪಶು ಇಲಾಕೆ ,ಅರಣ್ಯ ಇಲಾಕೆ, ಪೋಲಿಸ್ ಇಲಾಕೆ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಳೆದ 8 ದಿನಗಳಿಂದ ಜನರಿಗೆ ಮಾರ್ಗದರ್ಶನಕ್ಕೆ ಸಹಕರಿಸುತ್ತಿದ್ದಾರೆ. ವಿವಿಧ ಇಲಾಕೆಯ ನೂರಾರು ಸಿಬ್ಬಂದಿಗಳು ಆರಕ್ಷಕ ಇಲಾಕೆಯ 500 ಕ್ಕೂ ಹೆಚ್ಚಿನ ಸಿಬ್ಬಂದಿಗಳು ಜಾತ್ರೆಯು ಸುಗಮವಾಗಿ ನಡೆಯಲು ಶ್ರಮಿಸುತ್ತಿದ್ದಾರೆ.
ಪಾದಯಾತ್ರೆಗಳಿಂದ ಬರುವವರಿಗೆ ,ಚಕ್ಕಡಿಯಲ್ಲಿ ಬರುವ ಭಕ್ತರಿಗೆ ದಾಂಡೇಲಿ -ಗುಂದ ಮಾರ್ಗವಾಗಿ ಅವಕಾಶ ನೀಡಲಾಗಿದೆ. ವಾಹನ ಸವಾರರಿಗೆ ದಾಂಡೇಲಿ ಜೋಯಿಡಾ ಮಾರ್ಗವಾಗಿ ಅವಕಾಶ ನೀಡಲಾಗಿದೆ, ಒಟ್ಟಾರೆ 8 ದಿನಗಳ ಜಾತ್ರೆಯಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ.

ಹಲವಾರು ಗಣ್ಯರು ಜಾತ್ರೆಯ ವೇಳೆ ಬೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ, ಹಳಿಯಾಳ ಜೋಯಿಡಾ ಶಾಸಕ ಆರ್,ವಿ,ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್,ಎಲ್,ಘೋಟ್ನೇಕರ,ಕೇಂದ್ರ ಸಚಿವರು, ಜಿ,ಪಂ, ನ ಸಂತೋಷ ರೇಣುಕೆ,ರಮೇಶ ನಾಯ್ಕ ಮತ್ತು ತಾ,ಪಂ, ಸದಸ್ಯರು ಹಾಗೂ ಉತ್ತರಕರ್ನಾಟಕದ ಹಲವಾರು ಗಣ್ಯರು, ಸ್ವಾಮೀಜಿಗಳು ಶ್ರೀ ದೇವರ ದರ್ಶನ ಪಡೆದರು.
ಟ್ರಾಪಿಕ್ ಜಾಮ್ –
ತೇರು ಎಳೆಯುತ್ತಿದ್ದಂತೆ ಸಾವಿರಾರು ಜನರು ಒಮ್ಮೆಲ್ಲೆ ರಸ್ತೆಯಲ್ಲಿ ಹೊರಟ ಕಾರಣ 2 ಗಂಟೆಗೂ ಹೆಚ್ಚು ಕಾಲ ಟ್ರಾಪಿಕ್ ಜಾಮ್ ಆಯಿತು, ಟ್ರಾಪಿಕ್ ಜಾಮ್ ಆಗಲು ಮುಖ್ಯ ಕಾರಣ ಕೆ,ಎಸ್,ಆರ್,ಟಿ,ಸಿ ಬಸ್ಸಗಳು ಎನ್ನುವುದು ಜನರ ಮಾತಾಗಿತ್ತು. ಕೆ,ಎಸ್,ಆರ್,ಟಿ,ಸಿ, ಬಸಗಳು ದಾರಿಯುದ್ದಕ್ಕೂ ನಿಂತು ರಸ್ತೆಯಲ್ಲಿ ಪ್ರಯಾಣಿಕರು ಸಾಗುವುದನ್ನೇ ನಿಲ್ಲಿಸಿ ಬಿಟ್ಟಿತು, ಪೋಲಿಸ್ ಇಲಾಕೆಯವರು ಹರ ಸಹಾಸ ಪಟ್ಟು ಟ್ರಾಪಿಕ್ ಕ್ಲೀಯರ ಮಾಡಿ ಕೊಟ್ಟರು.

ದೇವಸ್ಥಾನದ ವತಿಯಿಂದ ನಿರಂತರ ದಾಸೋಹ ಇದ್ದರು ಕೂಡಾ 10 ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರಸಾದ ನಿಲಯ ನಿರ್ಮಸಿ ಭಕ್ತರಿಗೆ ಅನ್ನದಾಸೋಹ ನೀಡುತ್ತಿರುವುದು ವಿಶೇಷವಾಗಿತ್ತು,
ಯಾವುದೇ ಮನರಂಜನಾ ಕಾರ್ಯಕ್ರಮಗಳಿಲ್ಲದಿದ್ದರೂ ವಿವಿಧ ಅಂಗಡಿಗಳು ಹೋಟೆಲಗಳು, ಅರಣ್ಯ ಇಲಾಕೆಯ ಮಳಿಗೆಗಳು ಜಾತ್ರೆಯ ಮೆರಗನ್ನು ಹೆಚ್ಚಿಸಿದವು. ಕಳೆದ ಫೆ,1 ರಿಂದ ಉಳವಿ ಜಾತ್ರೆ ಆರಂಭವಾಗಿದ್ದು ನಾಳೆ ಮಂಗಳವಾರ ನಡೆಯುವ ಓಕುಳಿಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ,
ಜಾತ್ರೆಯ ತೇರು ಎಳೆಯುವ ಸಂದರ್ಭದಲ್ಲಿ ಶಾಸಕ ಆರ್,ವಿ,ದೇಶಪಾಂಡೆ ,ಎಸ್,ಎಲ್,ಘೋಟ್ನೆಕರ, ಜಿ,ಪಂ,ನ ಸಂತೋಷ ರೇಣುಕೆ, ರಮೇಶ ನಾಯ್ಕ, ಉಳವಿ ಗ್ರಾ,ಪಂ,ಅದ್ಯಕ್ಷ ಮಂಜುನಾಥ ಮೊಕಾಶಿ,ಉಳವಿ ಟ್ರಸ್ಟ ಕಮಿಟಿಯ ಅಧ್ಯಕ್ಷ ಗಂಗಾಧರ ಕಿತ್ತೂರ, ಸಂಜಯ ಕಿತ್ತೂರ, ಬಿ,ಸಿ,ಉಮಾಪತಿ, ಇತರರು ಉಪಸ್ಥಿತರಿದ್ದರು.

Leave a Comment