
ಕಾಮಕಸ್ತೂರಿ
ರುದ್ರಜಡಾ ಕರ್ಫುರಾ ತುಳಸಿ ಕಮಗಗ್ಗಿಲಿ ಸಜ್ಜಮುಕ್ಕ ತಿರುನೇಟ್ರ ಪಚೈ ತಿರುವಾಚಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಕಾಮಕಸ್ತೂರಿ ಗಿಡವು ತನ್ನ ಒಡಲಲ್ಲಿ ಅಗಾಧವಾದ ಔಷಧೀಯಗುಣವನ್ನು ತುಂಬಿಕೊಂಡಿದೆ.ಅಷ್ಟೇ ಅಲ್ಲದೆ ಇದೊಂದು ಸುಗಂಧ ದ್ರವ್ಯ ತುಂಬಿರುವ ಗಿಡವು ಹೌದು.
ಈ ಗಿಡವು ಶಿವನಿಗೆ ತುಂಬಾ ಪ್ರಿಯವಾದದ್ದು.ಇದರ ಎಲೆಗಳಿಂದ ಮಾಲೆ ತಯಾರಿಸಿ ವಿಶೇಷ ಪೂಜೆಗಳಲ್ಲಿ ಶಿವನನ್ನು ಅಲಂಕರಿಸುತ್ತಾರೆ.ಅದಕ್ಕೆ ಇದನ್ನು”ರುದ್ರಜಡಾ”ಎಂದು ಕರೆಯುತ್ತಾರೆ.ಈ ಸಸ್ಯವು ಮನೆ ಮುಂದೆ ಇದ್ದರೆ “ಅದೃಷ್ಟದ ಬಾಗಿಲು ತೆರೆಯುತ್ತೆ”ದರಿದ್ರ ದೂರವಾಗುತ್ತೆ. ಧನಾಕರ್ಷಣೆ ಬರುತ್ತೆ ಎಂದು ಬಲ್ಲವರು, ಜ್ಯೋತಿಷಿಗಳು ಅನುಭವದ ಮಾತು ಹೇಳುತ್ತಾರೆ.
ಈ ಗಿಡವನ್ನು ಸಮೂಲ ಸಹಿತ ತಂದು ಒಂದು ಹಿಡಿಯಷ್ಟು ಮಣ್ಣಿನ ಮಡಿಕೆಯಲ್ಲಿ ಹಾಕಿ ಅದಕ್ಕೆ ಒಂದು ಲೋಟ ನೀರು ಹಾಕಿ ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ ಉಗರು ಬೆಚ್ಚಗಾದಾಗ ಮಕ್ಕಳು 10ml ಹಿರಿಯರು 50ml ಸೇವಿಸಿದರೆ, ಜ್ವರ ಕೆಮ್ಮು ಕಫ ಚರ್ಮ ರೋಗಗಳು ಮೂತ್ರ ಸಂಬಂಧಿಸಿದ ವ್ಯಾಧಿಗಳು ಗುಣವಾಗುತ್ತೆ.ಮುಖ್ಯವಾಗಿ ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ಮಲಬದ್ಧತೆ ದೂರವಾಗುತ್ತೆ.
ಈ ಗಿಡದ ಐದಾರು ಎಲೆಗಳನ್ನು ತಂದು ಎರಡು ಮೂರು ತೊಟ್ಟು ರಸ ಹಿಂಡಿದರೆ ಕಿವಿನೋವು ಶೀಘ್ರ ಗುಣವಾಗುತ್ತೆ.
ವಯಸ್ಕರಲ್ಲಿ ಮೊಡವೆ ಸಮಸ್ಯೆಗಳು ವಿಪರೀತ, ಅಂತವರು ಕಾಮಕಸ್ತೂರಿ ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಲೇಪನ ಮಾಡಿದರೆ ಮೊಡವೆಗಳು ಮಚ್ಚೆಗಳು ಮಾಯವಾಗುತ್ತೆ.
ಕೆಲವರಿಗೆ ವಾಂತಿ ಸಮಸ್ಯೆ ಜಾಸ್ತಿ, ಅಂತವರು 2 ಚಮಚ ಎಲೆಯ ರಸಕ್ಕೆ 1ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ವಾಂತಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು….!
ಗಜ್ಜಿ ದದ್ದು ಮಚ್ಚೆ ಇತ್ಯಾದಿ ಚರ್ಮರೋಗಗಳಿಗೆ ರಾಮಬಾಣ. ಗಿಡದ ಎಲೆಗಳನ್ನು ತಂದು ಶುಭ್ರಗೊಳಿಸಿ ಕಲಾಬತ್ತಿನಲ್ಲಿ ನುಣ್ಣಗೆ ಅರೆದು ಅದಕ್ಕೆ ಅರಸಿಣ ಚೂರ್ಣ ಸೇರಿಸಿ ಮೈಗೆ ಲೇಪನ ಮಾಡಿದರೆ ವಾಸಿಯಾಗುತ್ತೆ.
ಒಂದು ಚಮಚ ಕಾಮಕಸ್ತೂರಿ ಬೀಜಗಳನ್ನು ಶರಬತ್ತಿನಲ್ಲಿ ಕಲಸಿ ಕುಡಿದರೆ ಮೈ ತಂಪಾಗಿ ಮೈಯಲ್ಲಿನ ಉಷ್ಣತೆ ಕಡಿಮೆಯಾಗುತ್ತೆ.
ಮೈಯಲ್ಲಿ ಗಾಯಗಳಾದಾಗ ಕಾಮಕಸ್ತೂರಿ ಎಲೆಗಳನ್ನು ಅರೆದು ಅದಕ್ಕೆ ಅರಸಿಣ ಚಿಟಿಕೆ ಸೇರಿಸಿ ಲೇಪಿಸಿದರೆ ತಕ್ಷಣ ರಕ್ತಶ್ರಾವ ನಿಂತು ಗಾಯ ಬೇಗನೆ ಗುಣವಾಗುತ್ತೆ.
ಇದರ ಕಷಾಯ ಬೆಳಿಗ್ಗೆ ಸಂಜೆ ಸೇವಿಸುತ್ತಾ ಬಂದರೆ ರಕದೊತ್ತಡ,ಹೃದಯಕ್ಕೆ ಸಂಬಂಧಿಸಿದ ವ್ಯಾಧಿಗಳು ಗುಣವಾಗುತ್ತೆ. ಮುಖ್ಯವಾಗಿ ರಕ್ತಶುದ್ಧಿಯಾಗುತ್ತೆ.
ಈ ಗಿಡದ ರಸ ಅಥವಾ ಬೀಜವನ್ನು ನಿರಂತರ ಸೇವಿಸುವುದರಿಂದ ಅಲ್ಸರ್ ನಿಂದ ಮುಕ್ತಿ ಹೊಂದಬಹುದು.
ಹಳ್ಳಿಗಳಲ್ಲಿ ಪ್ರತಿಯೊಂದು ಮನೆಯ ಮುಂದೆ ಈ ಗಿಡವನ್ನು ಬೆಳೆಸಿರುದನ್ನು ಕಾಣಬಹುದು…! ಈ ಗಿಡ ಇದ್ದಕಡೆ ಸೊಳ್ಳೆಗಳ ಕಾಟ ಇರುವುದಿಲ್ಲ.ಇದು ಬಹು ಉಪಯೋಗಿ ಸಸ್ಯವಾದುದ್ದರಿಂದ ಇದನ್ನ”ಮಹಾಮೂಲಿ” ಎಂದು ಕರೆಯುತ್ತಾರೆ.ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಇದರ ಬೇಡಿಕೆ ಹೆಚ್ಚಿರುವುದರಿಂದ ಇದನ್ನ ಅನೇಕ ಪ್ರಾಂತ್ಯಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.
Leave a Comment