#ಬೆಂಗಳೂರು :- ಕಾಲ ಕಾಲಕ್ಕೆ ಜನರ ಜೀವನ ಸ್ಥಿತಿಗಳು ಮಾಡರ್ನ್ ಆಗಿ ಬದಲಾಗುತ್ತಿವೆ ಇದರಲ್ಲಿ ಮೊಬೈಲ್ ಸಾಮಾಜಿಕ ಜಾಲತಾಣ( ಅಂತರ್ಜಾಲ) ಪಾತ್ರ ಕೂಡ ಬಹಳಷ್ಟಿದೆ.
ಒಂದು ಕಾಲದಲ್ಲಿ ಲ್ಯಾಂಡಲೈನ್ ಪೊನ್ ಗಳು ಇದ್ದರೇ ಆತ ಪ್ರತಿಷ್ಠಿತ ಆದರೇ ಈಗ ಅತ್ಯಂತ ಸಾಮಾನ್ಯನ ಕೈಯಲ್ಲೂ ಆಂಡ್ರಾಯ್ಡ್ ಸ್ಮಾರ್ಟ್ ಪೋನಗಳು.
ಅಂಗೈಯಲ್ಲೇ ಆಕಾಶ, ಜಗತ್ತು ತೋರಿಸುವ ಈ ಆಂಡ್ರಾಯ್ಡ್ ಪೊನಗಳು ಈಗ ನಿಶ್ಚಿತಾರ್ಥ ಕ್ಕೂ ಬಳಕೆಯಾಗಿದೆ ಎಂದರೇ ಜನರ ಹುಬ್ಬೆರುವಂತೆ ಮಾಡಿದೆ.
ಇನ್ನೂ ಎಲ್ಲವೂ ನಮ್ಮ ಕೈಗೆ ಸಿಗುತ್ತಿದೆ ಎಂದು ಖುಷಿ ಪಟ್ಟರೆ, ಇನ್ನೊಂದು ಕಡೆ ನಮ್ಮ ಖುಷಿಯಾದ ಬದುಕನ್ನು ಕಳೆದು ಕೊಳ್ಳುತ್ತಿದ್ದೇವೆ. ಎಲ್ಲಾದಕ್ಕೂ ಆನ್ ಲೈನ್, ಆನ್ ಲೈನ್ ಅಂತ ಸೋಂಬೇರಿ ಆಗುತ್ತಿದ್ದೇವೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ.
ಇದೇನೆಂದರೇ ದೂರದ ಪ್ರದೇಶಗಳಲ್ಲಿರುವ
ವಧು-ವರರಿಬ್ಬರು ಆನ್ ಲೈನ್ ನಲ್ಲಿ ವೀಡಿಯೋ ಕಾಲ್ ಮೂಲಕ ತಮ್ಮ ಎಂಗೇಜ್ ಮೆಂಟ್ ( ನಿಶ್ಚಿತಾರ್ಥ) ಮಾಡಿಕೊಂಡಿದ್ದಾರೆ.
ಮನೆಯ ಮಂದಿಯೆಲ್ಲಾ ಸೇರಿಕೊಂಡು ಖುಷಿ ಖುಷಿಯಾಗಿ ಮೊಬೈಲ್ ವೀಡಿಯೋ ಕಾಲ್ ನಲ್ಲಿದ್ದ ವಧು-ವರರರಿಗೆ ನಿಶ್ಚಿತಾರ್ಥ ಮಾಡಿ ನೋಡುಗರ ಗಮನ ಸೆಳೆದಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೈಬೆರಳಿನ ತುದಿಯಲ್ಲಿ ಎಲ್ಲಾ ಸೇವೆಗಳು ಸಿಗುವ ಮೊಬೈಲ್ ಇಂಟರ್ ನೆಟ್ ಸೇವೆ ಇದೀಗ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿ ಹೊಗಿಬಿಟ್ಟಿದೆ.
ಹಾಗಾದರೆ ಮದುವೆ ಸಂಸಾರ ಮಕ್ಕಳು ಎಲ್ಲಾ ಆನ್ ಲೈನ್ ನಲ್ಲೇ ಮಾಡಿಕೊಳ್ಳುತ್ತೀರ ? ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
Leave a Comment