
ಮಂಡೂಕಪರ್ಣಿ ಬ್ರಾಹ್ಮೀ ಮಂಡೂಕಿ ಒಂದೆಲಗ ಸರಸ್ವತಿ ಸೊಪ್ಪು(ಬಳ್ಳಿ) ಗದ್ದೆಒರಗ ಸರಸ್ವತಿ ಆಕು ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಒಂದೆಲಗ ಅದ್ಭುತವಾದ ಔಷಧೀಯ ಸಸ್ಯ.ಗದ್ದೆಯ ಬದಿಗಳ ಮೇಲೆ ಸದಾ ನೀರು ಹರಿಯುವ ಕಾಲುವೆಗಳ ಪಕ್ಕ ನದಿ ಕೆರೆ ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.
ಒಂದೆಲಗ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ ಜ್ಞಾಪಕಶಕ್ತಿ ಹೆಚ್ಚುತ್ತದೆ. ಈ ಸಸ್ಯ ಸೇವನೆಯಿಂದ ವಿದ್ಯೆ ಬುದ್ಧಿ ಹೆಚ್ಚುವುದರಿಂದ ವೀಣಾಪಾಣಿ ಸರಸ್ವತಿಯ ಹೆಸರಿಂದ ಸರಸ್ವತಿ ಸೊಪ್ಪು(ಬಳ್ಳಿ) ಸರಸ್ವತಿ ಆಕು ಎಂದು ಕರೆಯುತ್ತಾರೆ. ಗದ್ದೆಗಳ ಬೈಲಲ್ಲಿ ಹೆಚ್ಚಾಗಿ ಕಾಣ ಸಿಗುವುದರಿಂದ ಗದ್ದೆಒರಗ ಎಂತಲೂ ಕರೆಯುತ್ತಾರೆ.
ಅತ್ಯದ್ಭುವಾದ ಈ ಸಸ್ಯ ಮಾನವರಿಗೆ ದೇವರು ಕೊಟ್ಟ ವರವೇ ಸರಿ.ಅಪಾರವಾದ ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂದಿದೆ.
ಒಂದೆಲಗದ 10 ರಿಂದ 15 ಎಲೆಗಳನ್ನು ತೆಗೆದುಕೊಂಡು ಒಂದು ಚಿಕ್ಕ ಮಡಿಕೆಯಲ್ಲಿ ಹಾಕಿ ಅದಕ್ಕೆ ಎರಡು ಲೋಟ ನೀರು ಸೇರಿಸಿ ಒಲೆಯ ಮೇಲಿಟ್ಟು ಚೆನ್ನಾಗಿ 10 ನಿಮಿಷ ಕುದಿಸಿ ಕೆಳಗಿಳಿಸಿ ಅದಕ್ಕೆ ಕೆಂಪು ಕಲ್ಲುಸಕ್ಕರೆ ಅಥವಾ ತಾಟಿಬೆಲ್ಲ ಅಥವಾ ಬೆಲ್ಲ 1ಚಮಚ ಸೇರಿಸಿ ಚಹಾದಂತೆ(ಕಷಾಯ) ಬೆಳಿಗ್ಗೆ ಸಂಜೆ ಅರ್ಧ ಲೋಟದಂತೆ ಮಕ್ಕಳು ಹಿರಿಯರೆನ್ನದೆ ಸೇವಿಸಬಹುದು. ಓದುವ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತೆ,ಬುದ್ಧಿ ಬೆಳವಣಿಗೆಯಾಗುತ್ತೆ.ಜ್ಞಾಪಕಶಕ್ತಿ ಹೆಚ್ಚಿ ಬುದ್ಧಿಮಾಂದ್ಯ ಭಯ ದೂರವಾಗುತ್ತೆ.
ದಿನವು ಖಾಲಿ ಹೊಟ್ಟೆಯಲ್ಲಿ ಐದಾರು ಎಲೆಗಳನ್ನು ಜಗಿದು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವರ್ಷಗಟ್ಟಲೆ ತಿಂದರು ಯಾವುದೇ ಅಡ್ಡಪರಿಣಾಮಗಳು ಆಗುವುದಿಲ್ಲ.ಉಬ್ಬಸ ಪೈತಕ ನವೆ ಪಾಂಡುರೋಗ ಕಾಮಾಲೆ ಜ್ವರ ವಾತ ಪಿತ್ತ ಕಫ ಗಾಯಗಳು ಕುರು ಗಂಟಲ ನೋವು ಚರ್ಮ ವ್ಯಾಧಿಗಳು ಉನ್ಮಾದ ಹುಚ್ಚು ಗುಣವಾಗುತ್ತೆ.ಜೊತೆಗೆ ರಕ್ತ ಶುದ್ಧಿಯಾಗುತ್ತೆ.ಇದು ಅನೇಕ ವ್ಯಾಧಿಗಳಿಗೆ ರಾಮಭಾಣದಂತೆ ಕೆಲಸ ಮಾಡುತ್ತೆ.
ಒಂದೆಲಗದಿಂದ ಚಟ್ನಿ ಸಾರು ದೋಸೆ ಹಿಟ್ಟಿನ ಜೊತೆ ರುಬ್ಬಿ ಸೇವಿಸಬಹುದು.
ಬ್ರಾಹ್ಮೀ ಹೇರಾಯಿಲ್
500 ml ಕೊಬ್ಬರಿ ಎಣ್ಣೆಗೆ ಒಂದು ಚಮಚ ಮೆಂತ್ಯ ಅರ್ಧ ಕಪ್ಪು ಕರಿಬೇವು ಅರ್ಧ ಕಪ್ಪು ಒಂದೆಲಗದ ಎಲೆಗಳನ್ನು ಪಾತ್ರೆಯಲ್ಲಿ ಹಾಕಿ 10 ರಿಂದ 15 ನಿಮಿಷ ಮಂದ ಉರಿಯಲ್ಲಿ ಕುದಿಸಿ ಕೆಳಗಿಳಿಸಿ ಸೋಸಿ ಆರಿದ ಮೇಲೆ ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು ದಿನವು ತಲೆಗೆ ಲೇಪನ ಮಾಡುತ್ತ ಬಂದರೆ, ದೇಹವು ತಂಪಾಗಿ, ತಲೆ ಕೂದಲು ಉದರುವುದು ನಿಲ್ಲುತ್ತೆ, ಹೊಸ ಕೂದಲು ಬರುತ್ತೆ.ಎರಡರಿಂದ ಮೂರು ತಿಂಗಳು ಈ ಹೆಣ್ಣೆಯನ್ನು ಉಪಯೋಗಿಸಬಹುದು.
ಬಾಯಿಹುಣ್ಣು ಬಾಯಿ ದುರ್ವಾಸನೆ ಇರುವುವರು ದಿನವು ಐದಾರು ಒಂದೆಲಗದ ಎಲೆಗಳನ್ನು ಜಗೆಯುತ್ತಿದ್ದರೆ ಶೀಘ್ರವಾಗಿ ಹುಣ್ಣು ಗುಣವಾಗಿ ದುರ್ವಾಸನೆ ದೂರವಾಗುತ್ತೆ.
ಒಂದೆಲಗದ ಎಲೆಗಳನ್ನು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು ಮಕ್ಕಳಿಗೆ ಜೇನುತುಪ್ಪದೊಡನೆ ತಿನ್ನಿಸುತ್ತಾ ಬಂದರೆ ಬುದ್ಧಿ ಬೆಳವಣಿಗೆಯಾಗುತ್ತೆ,ಆಯಸ್ಸು ವೃದ್ಧಿಸುತ್ತೆ,ಜ್ಞಾಪಕಶಕ್ತಿ ಸಹ ಚೆನ್ನಾಗಿ ಬೆಳೆಯುತ್ತೆ.
ಒಂದೆಲಗದ ಉಪಯೋಗಗಳು ಹೇಳುತ್ತಾ ಹೋದರೆ ಸಮಯವೆ ಸಾಲುವುದಿಲ್ಲ….!ಅಷ್ಟು ಶ್ರೇಷ್ಠವಾದ ಮೂಲಿಕೆ ಇದು.
ಗೆಳೆಯರೆ ನಾಳೆ ಮತ್ತೊಂದು ಸಸ್ಯದೊಡನೆ ಭೇಟಿಯಾಗೋಣ.ವಂದನೆಗಳು
Leave a Comment