

ಹೊನ್ನಾವರಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎನ್ನುವಕೂಗು ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿದ್ದು ಜಿಲ್ಲೆಯ ಎಲ್ಲಾ ತಾಲೂಕಿಗೆ ಇರುವ ಬೆಂಗಳೂರು ವಾಸ್ಕೊ ನೂತನ ರೈಲಿಗೆ ಹೊನ್ನಾವರ ತಾಲೂಕಿನ ಎರಡು ನಿಲ್ದಾಣವಿದ್ದರು ಯಾಕೆ ನಿಲುಗಡೆ ಇಲ್ಲ ಎನ್ನುವ ಆದೇಶ ತಾಲೂಕಿನೆಲ್ಲಡೆ ಚರ್ಚೆಗೆ ಕಾರಣವಾಗಿದೆ.
ವಾರದ ಹಿಂದಷ್ಟೆ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾಧ್ಯಮಗೊಷ್ಟಿ ನಡೆಸಿ ಜಿಲ್ಲೆಯ ಬಹುವರ್ಷದ ಬೇಡಿಕೆ ಈಡೇರಿರುದನ್ನು ತಿಳಿಸಿದ್ದರು. ಇದನ್ನು ಜಿಲ್ಲೆಯ ಎಲ್ಲರೂ ಸ್ವಾಗತಿಸಿದ್ದರು ಆದರೆ ಈ ಸಂಭ್ರಮ ಹೊನ್ನಾವರದ ಜನತೆಗೆ ಸ್ವಲ್ಪ ಕಡಿಮೆ ಸಿಕ್ಕಿದೆ. ಯಾಕೆಂದರೆ ತಾಲೂಕ ವ್ಯಾಪ್ತಿಯಲ್ಲಿ ಕರ್ಕಿ ಹಾಗೂ ಮಂಕಿ ರೈಲ್ವೆ ನಿಲ್ದಾಣವಿದೆ ಪ್ರತಿನಿತ್ಯ ಹಲವು ರೈಲ್ವೆ ಸಂಚಾರ ನಡೆದರು ಕೆಲವೇ ರೈಲುಗಳು ಮಾತ್ರ ನಿಲ್ದಾಣದಲ್ಲಿ ನಿಲ್ಲುವ ಮೂಲಕ ಸಾರ್ವಜನಿಕರು ಅನೂಕೂಲವಾಗುತ್ತಿತ್ತು. ಈ ಹಿಂದೆಯೂ ನೆರೆಯ ಭಟ್ಕಳ ತಾಲೂಕು ಹಾಗೂ ಕುಮುಟಾಕ್ಕೆ ಹೋಗಿ ವಿಶೇಷ ರೈಲು ಏರಬೇಕಾದ ಅನಿವಾರ್ಯತೆ ತಾಲೂಕಿನ ಜನತೆಗೆ ಆವರಿಸಿತ್ತು. ಇದೀಗ ಬೆಂಗಳೂರು ರೈಲ್ವೆಗೆ ಭಟ್ಕಳ , ಮುರ್ಡೆಶ್ವರ, ಕುಮುಟಾ, ಗೋಕರ್ಣ, ಅಂಕೋಲಾ, ಕಾರವಾರದಲ್ಲಿ ನಿಲ್ಲಲು ಅನುಮತಿ ನೀಡಲಾಗಿದ್ದು ಹೊನ್ನಾವರಕ್ಕೆ ಮಾತ್ರ ಈ ಅವಕಾಶ ಸದ್ಯದ ಮಟ್ಟಿಗೆ ಕೈ ತಪ್ಪಿದೆ. ಬಸ್ ಡಿಪೋ, ಪ್ರತ್ಯೆಕ ವಿಧಾನಸಭಾ ಕ್ಷೇತ್ರ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಈ ಹಿಂದಿನಿಂದಲೂ ಬೇಡಿಕೆ ಈಡೇರುತ್ತಾ ಬಂದರೂ ಇದುವರೆಗೂ ಅದು ಈಡೇರಿಲ್ಲ. ತಾಲೂಕಿಗೆ ಎರಡು ಶಾಸಕರ ವ್ಯಾಪ್ತಿ ಬಂದರೂ ಈ ಹಿಂದೆ ಆಯ್ಕೆಯಾದವರು, ಪ್ರಸುತ್ತ ಇದ್ದವರು ಇದರ ಬಗ್ಗೆ ಉದಾಸೀನತೆ ತೋರಿರುವುದು ತಾಲೂಕಿನ ಜನತೆಗೆ ಗೊತ್ತಿರುವ ವಿಷಯವಾಗಿದೆ. ರೈಲು ನಿಲುಗಡೆ ಮಾಡಲು ಜನಪ್ರತಿನಿಧಿಗಳ ಗಮನಸೆಳೆಯಲು ಈಗಾಗಲೇ ಬೇಡಿಕೆಯ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅಭಿಯಾನ ಪ್ರಾರಂಭವಾಗಿದೆ.
ಕಾರವಾರ ಬೆಂಗಳೂರು ರೈಲು ಸಂಚಾರ ಆರಂಭವಾಗಲು ಸಾಕಷ್ಟು ಶ್ರಮವಹಿಸಿರುವ ಕುಮಟಾ ಶಾಸಕ ದಿನಕರ ಶೆಟ್ಟಿ ಆಯ್ಕೆಯಾಗಲು ಹೊನ್ನಾವರದ ಪಾತ್ರ ಬಹುಮುಖ್ಯವಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಬಿಜೆಪಿ ಶಾಶಕರ ಆಯ್ಕೆಗೆ ಹೊನ್ನಾವರದ ಘಟನೆಯೆ ಕಾರಣ ಆದರೆ ಕೇಂದ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಿಲ್ಲೆಯ ಬಿಜೆಪಿ ಶಾಸಕರು ಹೊನ್ನಾವರ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಲಾರರು ಎನ್ನುವ ಭರವಸೆ ಇದೆಯಾದರೂ, ಮೊದಲ ಕಂತಿನಲ್ಲಿ ನಿರಾಸೆ ಮಾಡಿರುವುದು ಯಾಕೆನ್ನುವುದು ಅರ್ಥವಾಗುತ್ತಿಲ್ಲವಾಗಿದೆ.
…………………………….
ಈ ಬಗ್ಗೆ ನಮ್ಮವಾಹಿನಿü ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈಗಾಗಲೇ ಈ ಹಂತದ ಪ್ರಯತ್ನ ಮಾಡಿದ್ದೇನೆ. ರೈಲ್ವೆ ಮಂತ್ರಿಯವರನ್ನು ಸಂಪರ್ಕಿಸಲಾಗಿದೆ. ಜಿಲ್ಲೆಯ ಸಂಸದರ ಗಮನಕ್ಕೂ ತಂದಿದ್ದು ರೈಲ್ವೆ ಪ್ರಾರಂಭವಾದ 15 ದಿನದೊಳಗೆ ನಿಲುಗಡೆ ವ್ಯವಸ್ಥೆ ಕಲ್ಪಿಸುತ್ತೇನೆ ಇದು ಶತಸಿದ್ದ ಸಚೀವರ ಮೇಲೆ ವಿಶ್ವಾಸವಿದೆ ಎಂದರು
…………………………………..
ಈ ಭರವಸೆ ಈಡೇರಿದ್ದೆ ಆದರೆ ತಾಲೂಕಿನ ಜನತೆ ಕಡಿಮೆ ವೆಚ್ಚದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಬಹುದು ಅಲ್ಲದೇ ನೆರೆಯ ಗೋವಾ ರಾಜ್ಯಕ್ಕೆ ಹೋಗಲು ಇನ್ನೊಂದು ರೈಲು ಏರಬಹುದಾಗಿದೆ. ಶಾಸಕರು, ಸಂಸದರು, ಸಚೀವರು ಈ ಭರವಸೆ ಉಳಿಸುಕೊಳ್ಯುತ್ತಾರ ಎಂದು ಮುಂದಿನ ದಿನದಲ್ಲಿ ಕಾದು ನೋಡಬೇಕಿದೆ.


Leave a Comment